ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಒತ್ತು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:    ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒತ್ತು‌ ನೀಡುತ್ತಿದ್ದು ಕಾಮಗಾರಿಗಳನ್ನು  ತ್ವರಿತವಾಗಿ ಮಾಡಿ ಎಂದು  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಹೇಳಿದರು.
ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಸವಹಳ್ಳಿ ಗ್ರಾಮದಲ್ಲಿ  ಕೆಆರ್ಡಿಲ್ ಅನುದಾನದ ಸಿ.ಸಿ.ರಸ್ತೆ ಮತ್ತು  ಪಿಎಂಜಿಎಸ್ವೈ  ಅನುದಾನದಲ್ಲಿನ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಸವನಹಳ್ಳಿ ಗ್ರಾಮದ ಸುತ್ತಮುತ್ತಲಿನ 7 ರಿಂದ 8 ಹಳ್ಳಿಗಳಿಗೆ  ಸುಮಾರು 11.5 ಕೋಟಿ ಹಣವನ್ನು ವಿವಿಧ ಇಲಾಖೆಗಳಿಂದ  ನೀಡಿದ್ದೇನೆ.
ಒರಗೊಟ್ಟನಮಾಳಿಗೆ ಯಿಂದ ದೊಡ್ಡಸಿದ್ದವ್ವನಹಳ್ಳಿವರೆಗೆ 2 ಕೋಟಿ, ಒರಗೊಟ್ಟನಮಾಳಿಗೆಯಿಂದ ಜೋಡಿಚಿಕ್ಕೆನಹಳ್ಳಿ ವರೆಗೆ 7.5 ಕೋಟಿ ಹಣ, ಕಸವನಹಳ್ಳಿ ಜೆ.ಎನ್.ಕೋಟೆ ಬೂತನ ರಸ್ತೆ ಮತ್ತು ಕಸವನಹಳ್ಳಿ ಗ್ರಾಮದ ಸಿ.ಸಿ.ರಸ್ತೆಗಳ ಅಭಿವೃದ್ಧಿಗೆ 2 ಕೋಟಿ ನೀಡಿದ್ದು ಎಲ್ಲಾ ರಸ್ತೆಗಳ ಕಾಮಗಾರಿ ಚುರುಕಾಗಿ ಮಾಡಿ ಎಂದರು.
ಗ್ರಾಮೀಣ ಭಾಗದ ರಸ್ತೆಗಳು 70 ಭಾಗ ಪೂರ್ಣಗೊಂಡಿವೆ. ಇನ್ನು ಕೆಲವು ಕಡೆಗಳಲ್ಲಿ  ಕೆಲಸ ಪ್ರಗತಿಯಲ್ಲಿದೆ. 2-3 ತಿಂಗಳಲ್ಲಿ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿದೆ. ಎಲ್ಲಾ ಕಾಮಗಾರಿಗಳನ್ನು  ಗುಣಮಟ್ಟದಿಂದ ಎಲ್ಲಾ ಕಾಮಗಾರಿಗಳು ಮಾಡಬೇಕು. ಜನರು ಸಹ ಕಾಮಗಾರಿ ಬಗ್ಗೆ ಗಮನ ಹರಿಸಿ ಉತ್ತಮವಾಗಿ ನಿರ್ಮಾಣ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಕಸವನಗಳ್ಳಿ ಗ್ರಾಮಕ್ಕೆ 2 ಕೋಟಿ ವೆಚ್ಚದ ಒಂದು ಚಕ್ ಡ್ಯಾಂ ಕಾಮಗಾರಿ ಕೆಲಸ ನಡೆಯುತ್ತಿದೆ. ಅದರಿಂದ ಅಂತರ್ಜಲ ಹೆಚ್ಚಿ ಬೊರವೆಲ್ ಗಳು ಚರ್ಜ್ ಆಗುತ್ತವೆ ಎಂದರು.
ಮಳೆಯಿಂದ ಹಾನಿಗೆ ಒಳಗಾದ ಮನೆಗಳ ಫೋಟೋ ಸಮೇತ ವರದಿ ನೀಡಿ ಎಂದು ಪಿಡಿಓ ಅವರಿಗೆ ತಿಳಿಸಿದ್ದೇನೆ ಎಲ್ಲಾರೂ ಪಿಡಿಓ ಸಂಪರ್ಕಿಸಿ ಮಾಹಿತಿ ನೀಡಿ ಎಂದು ಹೇಳಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಆರ್ ರಾಜಪ್ಪ, ಉಪಾಧ್ಯಕ್ಷ ಆಶಾ ನಿಂಗಪ್ಪ, ಸದಸ್ಯರದಾ ಕೇಶವಪ್ಪ, ರಾಜಶೇಖರ್, ರಾಕೇಶ್, ವನಿತಾ, ತಿಮ್ಮಾರೆಡ್ಡಿ, ಪಿಡಿಓ ಶಿಲ್ಪಾ  ಇದ್ದರು.

 

 

[t4b-ticker]

You May Also Like

More From Author

+ There are no comments

Add yours