ಭೋವಿ ಪ್ರೀಮಿಯರ್ ಲೀಗ್ ನಲ್ಲಿ ಬ್ಯಾಟ್ ಬೀಸಿದ ಇಮ್ಮಡಿ ಶ್ರೀ

 

 

 

 

ಚಿತ್ರದುರ್ಗ ಏ. ೦೨

ಸಮಾಜದವತಿಯಿಂದ ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲದೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಈ ರೀತಿಯ ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ ಮೂಲಕ ಆಯೋಜನೆ ಮಾಡಲಾಗುತ್ತಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಇಂದಿನಿಂದ ಪ್ರಾರಂಭವಾದ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಕ್ರಿಕೇಟ್ ಲೀಗ್ ೨೦೨೧ರ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕ್ರೀಡೆಯನ್ನು ಆಯೋಜನೆ ಮಾಡುವುದರ ಮೂಲಕ ಜನಾಂಗದ ಯುವಜನತೆಯನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಇದರ ಮೂಲಕ ಸಮಾಜದಲ್ಲಿ ಯುವ ಜನತೆಯನ್ನು ಜಾಗೃತಿಗೂಳಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಭೋವಿ ಸಮಾಜ ಎಂದರೆ ಅನಕ್ಷರಸ್ಥ ಸಮಾಜವಾಗಿದೆ, ಇತಿಹಾಸ ಪುಟದಲ್ಲಿ ಇದು ದಾಖಲಾಗಿದೆ. ಇದು ಮುಂದುವರೆಯಬಾರದು ಎಂಬ ಉದ್ದೇಶದಿಂದ ಈ ರೀತಿಯ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದ್ದು ಇದು ಮೂರನೇ ಕ್ರೀಕೆಟ್ ಕ್ರೀಡಾಕೂಟವಾಗಿದೆ. ಶ್ರೀಮಠವು ಸಹಾ ಸಮಾಜದಲ್ಲಿನ ಯುವ ಜನತೆಯನ್ನು ಗುರುತಿಸಿ ಅವರಿಗೆ ಶಿಕ್ಷಣವನ್ನು ಕೂಡಿಸುವಲ್ಲಿ ನೆರವಾಗಿದೆ, ಅದೇ ರೀತಿಯ ಉನ್ನತ ಶಿಕ್ಷಣವನ್ನು ಪಡೆಯುವವರಿಗೂ ಸಹಾ ಸಹಾಯ ಹಸ್ತವನ್ನು ಬಾಚಿದೆ, ಇದ್ದಲ್ಲದೆ ಶಿಕ್ಷಣವನ್ನು ಪಡೆದವರಿಗೆ ಸರ್ಕಾರದ ಉದ್ಯೋಗವನ್ನು ಕೊಡಿಸುವಲ್ಲಿ ಸಿಗದಿದ್ದವರಿಗೆ ಸ್ವಾವಲಂಬಿಗಳಾಗಲು ಸಹಾ ನೆರವಾಗಿದೆ ಎಂದು ಹೇಳಿದರು.

 

 

ಕ್ರೀಡೆ ಎಂದರೆ ಏಕಾಗ್ರತೆ ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಏಕಾಗ್ರತೆಯನ್ನು ಪಡೆಯಬೇಕಿದೆ ಇದು ಕ್ರೀಡಾಪಟುಗಳಿಗೂ, ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿದೆ. ಇದರ ಜೊತೆಗೆ ಭಾವೈಕ್ಯತೆಯನ್ನು ಮೂಡಿಸುತ್ತದೆ ಇದರಿಂದ ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದ ಶ್ರೀಗಳು, ಇಲ್ಲಿ ಉತ್ತಮವಾದ ಪ್ರದರ್ಶನವನ್ನು ತೋರಿಸಿದ ಕ್ರೀಡಾಪಟುಗಳನ್ನು ಮುಂದಿನ ಕ್ರೀಡಾಕೂಟಕ್ಕೆ ಕಳುಹಿಸಬೇಕಿದೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಮೊದಲು ತುಮಕೂರು ಮತ್ತು ಶಿರಾದಲ್ಲಿ ನಡೆಸಿದ್ದು, ಭೋವಿ ಜನಾಂಗದಲ್ಲಿನ ಯುವ ಜನತೆಯನ್ನು ಒಗ್ಗೂಡುವಿಕೆ ಮತ್ತು ಜನಜಾಗೃತಿ ಮೂಡಿಸಲು ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರಿಕೆಟ್‌ನಲ್ಲಿ ಸುಮಾರು ೧೦ ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನ ೧ ಲಕ್ಷ, ದ್ವೀತಿಯ ಬಹುಮಾನ ೫೦ ಸಾವಿರ ಹಾಗೂ ತೃತೀಯ ಬಹುಮಾನ ೨೫ ಸಾವಿರ ರೂ.ಗಳು ಸಿಗಲಿದೆ.

ಏ, ೩ರ ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಬಾಲಚಂದ್ರ ನಾಯಕ್, ರವಿ ಕುಮಾರ್, ಮಂಜುನಾಥ್ ಗುಂಚೀಕರ್, ಪರಶುರಾಮ್ ಇವರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ನಗರಸಬಾ ನಾಮ ನಿರ್ದೇಶನ ಸದಸ್ಯ ತಿಮ್ಮಣ್ಣ, ಸಂಘಟಕರಾದ ರವಿರಾಜ್, ಶಿಕ್ಷಕ ರವಿ ಸಂಘದ ಕಾರ್ಯದರ್ಶೀ ಲಕ್ಷ್ಮಣ್, ಮಂಜಪ್ಪ, ಅಜ್ಜಯ್ಯ, ಉಮೇಶ್, ತಿಮ್ಮೇಶ್, ನಾಗರಾಜು ರಾಜು ದೇವರಾಜು, ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours