ವಿದ್ಯುತ್ ಖಾಸಗೀಕರಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ರೈತರಿಗೆ ಆತಂಕ ಬೇಡ : ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ : (challakere news ) ತಾಲೂಕಿನಲ್ಲಿ ತಾಲೂಕು ಆಡಳಿತ ರೈತರಿಗೆ ಸಂಬಂಧಿಸಿದ ಪೌತಿ ಖಾತೆ ಪೋಡಿ ದಾರಿ ವಿವಾದ ಹಾಗೂ ರೈತರಿಗೆ ಸಂಬಂಧಿಸಿದ ಪರಿಹಾರ ಇನ್ನು ಹತ್ತು ಹಲವು ಕಾರ್ಯಗಳನ್ನು ಪರಿಪೂರ್ಣವಾಗಿ ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತೇವೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ(Raghumurthy)  ಹೇಳಿದರು.

ಚಳ್ಳಕೆರೆ ಪಟ್ಟಣದಲ್ಲಿ  ರೈತರ ಬಳಿ ಮಾತನಾಡಿ  ಸಮಸ್ಯೆ ಮುಕ್ತ ಗ್ರಾಮದ ಪರಿಕಲ್ಪನೆಯ ಮೂಲಕ ಭೇಟಿ ನೀಡಿ ಈಗಾಗಲೇ ಶೇಕಡ 78 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದೆ ಮುಂದೆಯು ಉಳಿದ ಗ್ರಾಮಗಳ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ದೃಢಸಂಕಲ್ಪವನ್ನು ಮಾಡಿದೆ ರೈತರು ಕಚೇರಿಗಳಿಗೆ ಅಲಿಯದೆ ತಮ್ಮ ಸಮಸ್ಯೆಗಳನ್ನು ತಾವು ಇದ್ದಲ್ಲಿಯೇ ಸಮಸ್ಯೆಗಳನ್ನು ಪರಿಹಾರ ಕೈಗೊಳ್ಳಬೇಕಾಗಿ ತಾಲೂಕು ಆಡಳಿತ ಮಹತ್ವದ ನಿರ್ಧಾರವನ್ನು  ಕೈಗೊಂಡು  ನಿರ್ವಹಿಸುತ್ತಿದೆ ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕೆ ಪಿ ಭೂತಯ್ಯ ಅವರು ವಿದ್ಯುತ್ ಸರಬರಾಜು ಕಂಪನಿಗಳ ಖಾಸಗಿಕರಣ ಗೊಳಿಸಿರುವರ ಸಂಬಂಧ ಇದ್ದವರ ವಿರುದ್ಧ ಒಂದು ದಿನದ ಸಾಂಕೇತಿಕ ಮುಷ್ಕರದ ಮನವಿ ಸ್ವೀಕರಿಸಿದ್ದೇನೆ.(Electricity is not privatized)

 

 

ರೈತರ ಪ್ರತಿಯೊಂದು ಕಷ್ಟಗಳಿಗೆ ಸ್ಪಂದಿಸುವಂತೆ ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ಪರಿಹಾರ ಅಂದರೆ 47675 ಹೆಕ್ಟೇರ್ ಶೇಂಗಾ 6374 ಎಕ್ಟರ್ ಈರುಳ್ಳಿ ಬೆಳೆಗೆ ಪರಿಹಾರ ನೀಡಿದ್ದೇವೆ. ಇದರಿಂದ ಯಾವುದೇ ದೂರು ಬಂದಿಲ್ಲ ಬೆಳೆ ವಿಮೆ ಸಂಪೂರ್ಣವಾಗಿ ನೀಡಿದ್ದೇವೆ.

25 30 ವರ್ಷಗಳಿಂದ ಬಗೆಹರಿಸದ ಇದ್ದ ದಾರಿ ವಿವಾದಗಳನ್ನು ಬಗೆಹರಿಸಲಾಗಿದೆ. ಮುಂದೆಯೂ ಕೂಡ  ತಾಲೂಕು ಆಡಳಿತ ರೈತರ ಜೊತೆಯಲ್ಲಿದ್ದು ಸ್ಪಂದಿಸಲಿದೆ.  ಜಿಲ್ಲಾಧಿಕಾರಿಗಳು ಮತ್ತು ಸಚಿವರಾದ  ಬಿ. ಶ್ರೀರಾಮುಲು ಅವರು ಮತ್ತು ಚಳ್ಳಕೆರೆ  ಶಾಸಕರಾದ ಟಿ ರಘುಮೂರ್ತಿ ನವರ ಸಹಕಾರದಿಂದ ರೈತರಿಗೆ ಇನ್ನಷ್ಟು ಜನಸ್ನೇಹಿ ಕಾರ್ಯಗಳನ್ನು ಮಾಡಲಿದೆ.
ವಿದ್ಯುತ್ ಖಾಸಗೀಕರಣ ಸಂಬಂಧಿಸಿದ ಯಾವುದೇ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿಲ್ಲ, ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. (Electricity is not privatized)

ಚಳ್ಳಕೆರೆ ತಾಲೂಕು ರೈತ ಸಂಘದ ಅಧ್ಯಕ್ಷರು ಕೆ. ಪಿ ಭೂತಯ್ಯನ ಮಾತನಾಡಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅವರು  ರೈತರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸಮಸ್ಯೆ ಇರುವ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ದಾರಿ ಮುಂತಾದ ಕಷ್ಟಕರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿದ್ದಾರೆ. ಇಂದು ವಿದ್ಯುತ್ ಸರಬರಾಜು ಖಾಸಗಿಕರಣ ಮಾಡಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಇಂಥವರ ಕೇಂದ್ರ ಸರ್ಕಾರದ ವಿರುದ್ಧ ಅಮರಣಾಂತ  ಉಪವಾಸವನ್ನು ಕೈಗೊಳ್ಳಬೇಕಾಗುತ್ತದೆ. ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಕೈ ಬಿಡಬೇಕು ಎಂದು ಮನವಿ ಮಾಡಿದರು

ರಾಜ್ಯ ರೈತರ ಕಾರ್ಯಧ್ಯಕ್ಷ ವೀರ ಸಂಗಯ್ಯ ಮಾತನಾಡಿದರು ರೈತರ ಸಂಘದ ಪದಾಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours