ದೇವಸ್ಥಾನಕ್ಕೆ ಹಿರಿಯ ನಾಗರಿಕರಿಗೆ ನೇರ ದೇವರ ದರ್ಶನ, ಸಾಲಿನಿಂದ ಮುಕ್ತಿ

 

 

 

 

ಬೆಂಗಳೂರು: ಕರ್ನಾಟಕದ ಹಿಂದೂ ಧಾರ್ಮಿಕ ದೇವಾಲಯಗಳಾದ ಎ ವರ್ಗ ಹಾಗೂ ಬಿ ವರ್ಗ ಸಂಸ್ಥೆಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ನೇರವಾಗಿ ದೇವರ ದರ್ಶನ ಸೌಲಭ್ಯವನ್ನು ಕಲ್ಪಿಸಿ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಹಿರಿಯ ನಾಗರೀಕರಿಗೆ ಸರದಿ ಸಾಲಿನಲ್ಲಿ ನಿಂತುಕೊಂಡು ದೇವರ ದರ್ಶನ ಪಡೆಯುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ವಯಸ್ಸಿನ ಆಧಾರದ ಮೇಲೆ ಸರದಿ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ(ರಿ) ಕೋರಿದೆ ಎಂದಿದ್ದಾರೆ.

 

 

ಇತ್ತೀಚಿಗೆ ದೇವಾಲಯಗಳಿಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಿರಿಯ ನಾಗರೀಕರಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳವುದು ಕಷ್ಟವಾಗುತ್ತಿರುವ ಕಾರಣ, 65 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಶೀಘ್ರ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಿವಂತೆ ಸೂಚಿಸಿದ್ದಾರೆ.

ಇನ್ನೂ ಹಿರಿಯ ನಾಗರೀಕರು ಅವರ ವಯಸ್ಸಿನ ದಾಖಲೆ, ಆಧಾರ್ ಕಾರ್ಡ್ ತೋರಿಸಿದಲ್ಲಿ, ಶೀಘ್ರವೇ ದರ್ಶನಕ್ಕೆ ಅನುಕೂಲ ಮಾಡಿಕೊಂಡುವಂತೆ ತಿಳಿಸಿದ್ದಲ್ಲದೇ, ಸ್ಥಳಾವಕಾಶ ಇದ್ದಲ್ಲಿ, ಹಿರಿಯ ನಾಗರೀಕರೆಂದು ಪ್ರತ್ಯೇಕ ಸ್ಥಳ ಕಾಯ್ದಿರಿಸುವಲು ತಿಳಿಸಿದ್ದಾರೆ.

ರಾಜ್ಯದ ದೇವಾಲಯಗಳಲ್ಲಿ ಹಿರಿಯ ನಾಗರೀಕರ ಸಹಾಯ ಕೇಂದ್ರವನ್ನು ಸ್ಥಾಪಿಸಿ, ಅವರಿಗೆ ಸಹಕರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿ ನಿಯೋಜಿಸುವಂತೆಯೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours