ಗ್ರಾಮ ಒನ್ ಕೇಂದ್ರಕ್ಕೆ ಕಂದಾಯ ಇಲಾಖೆ ಕಿರಿಕಿರಿ, ಜನರ ಅಸಮಾಧಾನಕ್ಕೆ ಎಚ್ಚೆತ್ತುಕೊಳ್ಳುತ್ತ ತಾಲೂಕು ಆಡಳಿತ?

 

 

 

 

ಚಿತ್ರದುರ್ಗ: ಗ್ರಾಮೀಣ ಭಾಗದ ಜನರು ನಗರಕ್ಕೆ ಅಲೆದಾಡುವ ಕೆಲಸಕ್ಕೆ ಬ್ರೇಕ್ ಹಾಕಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ  ಗ್ರಾಮ ಒನ್‌’ ತಂತ್ರಜ್ಞಾನ ಆಧಾರಿತ ಕಾರ್ಯಕ್ರಮ ಜಾರಿಗೊಳಿಸಿದ್ದು ಅದು ಏಕೋ ಅಷ್ಟೊಂದು ಪರಿಣಾಮಕಾರಿ ಆದಂತೆ  ಕಾಣುತ್ತಿಲ್ಲ.
ಹೌದು   ಗ್ರಾಮ ಓನ್ ಕೇಂದ್ರ ಮುಖಾಂತರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಸರ್ಕಾರ ಮಾಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ಅಥವ ಎರಡು ಕೇಂದ್ರ ನೀಡಿದ್ದಾರೆ. ಹಾಗೂ   ಜನನ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ನಿವಾಸಿ ಸೇರಿ ಎಲ್ಲಾದಕ್ಕೂ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕುತ್ತಾರೆ ಇದರಿಂದ  ಜನಸಂದಣಿಯಿಂದಾಗಿ ಸಕಾಲಕ್ಕೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸಿಗುವುದಿಲ್ಲ. ಹಾಗಾಗಿ ಜನ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಇದನ್ನು ತಪ್ಪಿಸಲು ಗ್ರಾಮ ಮಟ್ಟದಲ್ಲೇ ಸೇವೆ ನೀಡುವ ವ್ಯವಸ್ಥೆ ಮಾಡಿದ್ದರು ಸಹ ಅದು ಸಕಾರವಾಗಿಲ್ಲ.
ಜಿಲ್ಲಾ ಕೇಂದ್ರದ ಚಿತ್ರದುರ್ಗ ತಾಲೂಕು ಸಂಬಂಧಿಸಿದಂತೆ ಹಲವು ಕೇಂದ್ರಗಳಲ್ಲಿ   ಗ್ರಾಮ ಒನ್ ಕೇಂದ್ರಕ್ಕೆ ಅರ್ಜಿ‌ ಹಾಕಿದರೆ 15-20  ದಿನಗಳ‌ ನಂತರ ರಿಜೆಕ್ಟ್ ಮಾಡುತ್ತಿರುವ ಪ್ರಕರಣಗಳು ಹೆಚ್ಚು ಕಾಣುತ್ತಿವರ. ಅರ್ಜಿಗೆ ಸಂಬಂಧಿಸಿದ  ಎಲ್ಲಾ ದಾಖಲೆಗಳನ್ನು ಒದಗಿಸಿದರು   ಸಹ ದಾಖಲೆ‌‌ ಕೊರತೆ ಹಿಂಬರಹ  ಎಂದು ಹಾಕುತ್ತಾರೆ. ದಿನಕ್ಕೆ 2-3 ಅರ್ಜಿಗಳು ಹಾಕಿದರೆ ಸ್ವೀಕೃತವಾಗಿದೆ  ಅಂತ ಬಂದರು ಸಹ ಫೈನಲ್ ರಿಜೆಕ್ಟ್ ಆಗುತ್ತಿದೆ.‌ ತಿಂಗಳಿಗೆ   ಸುಮಾರು 40-50 ಅರ್ಜಿಗಳು ಹಾಕಿದರೆ 2-3 ಮಾತ್ರ ವಿಲೇವಾರಿ ಆಗುತ್ತದೆ ಉಳಿದ ಅರ್ಜಿಗಳು ತಿರಸ್ಕರಿಸಿದ ಮಾಹಿತಿ ದೊರೆಯುತ್ತದೆ. ಇದರಿಂದ ಜನರು ಗ್ರಾಮ ಒನ್ ಕೇಂದ್ರಗಳ‌ ಬಗ್ಗೆ ಅಸಮಾಧಾನ ತೋರ್ಪಡಿಸುತ್ತಿದ್ದಾರೆ.ಇದು ಶಾಲಾ ಕಾಲೇಜು ಆರಂಭದ ಸಮಯವಾಗಿರುವುದರಿಂದ  ಮತ್ತು ಉದ್ಯೋಗ ಸಂಬಂಧಿಸಿದಂತೆ ಜಾತಿ ಪ್ರಮಾಣ ಪತ್ರದ ಅರ್ಜಿಗಳನ್ನು ಹಾಕಿ ಕಾಯುತ್ತಿರುವ ಇಂತಹ ಸಂದರ್ಭದಲ್ಲಿ ಅರ್ಜಿ ಹಾಕಿ 20 ದಿನಗಳ‌ ನಂತರ ತಿರಸ್ಕೃತವಾಗಿದೆ ಎಂದರೆ ಜನರು ಗ್ರಾಮ ಒನ್ ಸಿಬ್ಬಂದಿ ಮೇಲೆ ಅಸಮಾಧನ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸಂಬಂಧಿಸಿದ ಅಧಿಕಾರಿಗಳ ಇದಕ್ಕೆ ಸೂಕ್ತ ಪರಿಹಾತ ನೀಡದಿದ್ದರೆ ಜನರು ಗ್ರಾಮ ಒನ್ ಬಿಟ್ಟು ಮತ್ತೆ ತಾಲೂಕು ಕಚೇರಿ ಕಡೆಗೆ ಮುಖ ಮಾಡುವ ಲಕ್ಷಣಗಳು ಹೆಚ್ಚು ಎಂಬ ಅಭಿಪ್ರಾಯ ಎಲ್ಲಾ ಕಡೆಗಳಲ್ಲಿ ಕೇಳಿ ಬರುತ್ತಿದೆ. ಎಲ್ಲಾದಕ್ಕೂ ಇದಕ್ಕೆ ತಹಶೀಲ್ದಾರ್ ಯಾವ ರೀತಿ ಸಮಸ್ಯೆ ಹುಡುಕಿ ಪರಿಹಾರ ಹುಡುಕುತ್ತಾರ ಎಂಬುದನ್ನು ‌ಕಾದು ನೋಡಬೇಕಿದೆ..
 ಬಾಕ್ಸ್
ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಹೇಳುವುದು ಹೀಗೆ 
ಕಂದಾಯ ಇಲಾಖೆ ಅರ್ಜಿಗಳು ಹೆಚ್ಚು ಸಮಸ್ಯೆ ಕಾಡುತ್ತಿವೆ. ಸಾಕಷ್ಟು ಬಾರಿ ನಾವು ಹಣ ಪಡೆಯದೇ ಮರು ಅರ್ಜಿಯನ್ನು ಹಾಕಿದ್ದೇವೆ.ಅಗತ್ತ ದಾಖಲೆ ಒದಗಿಸದಿದ್ದರೆ ಅರ್ಜಿ ಪೂರ್ಣವಾಗುವುದಿಲ್ಲ ಮತ್ತು ಕಂಪ್ಯೂಟರ್ ಸಿಸ್ಟಮ್ ಸಹ ಕೊನೆಯ ಹಂತ ಮುಗಿಸಲು ಆಗುವುದಿಲ್ಲ. ಅರ್ಜಿ ಸ್ವೀಕರಿಸಿರುವುದಕ್ಕೆ ನಮಗೆ ಅರ್ಜಿ ಸಂಖ್ಯೆ ಸಹಿತಿ ಸ್ವೀಕೃತ ಪ್ರತಿ‌ ಸಹ ಬಂದು ಅದನ್ನು ಜನರಿಗೆ ನೀಡುತ್ತಿದ್ದೇವೆ. ಜಾತಿ ಪ್ರಮಾಣ ಪತ್ರದ್ದು ಮುಖ್ಯ ಸಮಸ್ಯೆಯಾಗಿದೆ  ಎಂದು ತಿಳಿಸಿದ್ದಾರೆ. 
ತಿರಸ್ಕೃತ ಅರ್ಜಿಗಳು ಮಾದರಿ
[t4b-ticker]

You May Also Like

More From Author

+ There are no comments

Add yours