ಡಿಸಿಎಂ ಭರವಸೆಯಿಂದ ಶ್ರೀರಾಮುಲು ಸೈಲೆಂಟ್ ಮಾಡಿದರ ಸಿಎಂ.ಯಡಿಯೂರಪ್ಪ ?

 

 

 

 

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಶ್ರೀರಾಮುಲು ತಣಿಸುವಲ್ಲಿ ಯಶಸ್ವಿ ಆಗಿರುವ ಸಿಎಂ ಯಾವ ತಂತ್ರ ಅನುಸರಿಸಿದರು ಎಂಬುದು ಎಲ್ಲಾರಿಗೂ ಪ್ರಶ್ನೆಯಾಗಿದೆ.

ರಾಜ್ಯ ರಾಜಕಾರಣದಲ್ಲಿ ಕಳೆದೆರಡು ದಿನಗಳಿಂದ ಖಾತೆ ಬದಲಾವಣೆ ವಿಚಾರದಲ್ಲಿ ಸಚಿವ ಶ್ರೀರಾಮುಲು ಅಸಮಾಧಾನ ಇದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಯಡಿಯೂರಪ್ಪ ಖಾತೆ ಬದಲಾವಣೆ ವಿಚಾರಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡದೆ ಬದಲಾವಣೆ ಮಾಡಿರುವ ಜೊತೆಗೆ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ ಎನ್ನುವಷ್ಟರಲ್ಲಿ ಯಡಿಯೂರಪ್ಪ ಶ್ರೀರಾಮುಲು ತಣ್ಣಗಾಗಿಸಿದ್ದು ಹೇಗೆ ಎಂಬ ಚರ್ಚೆ ಶುರುವಾಗಿದೆ.

 

 

ಹೌದು ಈ ರಾಜಕೀಯ ವಲಯದಲ್ಲಿ ಶ್ರೀರಾಮುಲು ಆರೋಗ್ಯ ಮತ್ತು ಹಿಂದುಳಿದ ವರ್ಗಗಳ ಖಾತೆ ವಾಪಸ್ಸು ಪಡೆದ ಸಿಎಂ ಶ್ರೀರಾಮಲು ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಿದರು. ಆದರೆ ರಾಮುಲು ಅಭಿಮಾನಿಗಳಲ್ಲಿ ಹಿಂದುಳಿದ ವರ್ಗಗಳ ಖಾತೆ ವಾಪಸ್ಸು ಪಡೆದಿದ್ದು ಅಸಮಾಧಾನಕ್ಕೆ ಎಡೆಮಾಡಿತ್ತು. ರಾಮುಲು ಸಹ ಮುಖ್ಯಮಂತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು‌. ಆದರೆ ಅಳೆದು ತೂಗಿ ಮರುದಿನ ಸಿಎಂ ನಿವಾಸಕ್ಕೆ ಭೇಟಿ ನೀಡಿದಾಗ ಶ್ರೀರಾಮುಲು ಸಿಎಂ ಬಳಿ ಸಮಾಜಕಲ್ಯಾಣ ಜೊತೆಗೆ ಡಿಸಿಎಂ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದಿದೆ.

ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಹೇಳಿದಂತೆ ನಾಯಕ ಜನಾಂಗದ ಒತ್ತಾಸೆಯಂತೆ ಡಿಸಿಎಂ ನೀಡಬೇಕು. ಸಮಾಜದವರ ತಾಳ್ಮೆಯಿಂದ ಗಮನಿಸುತ್ತಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ನಾಯಕ ಸಮಾಜದವರು ಡಿಸಿಎಂ ಆಗುವ ಉದ್ದೇಶದಿಂದ ಹಿಡಿಯಾಗಿ ಮತಗಳನ್ನು ನಮಗೆ ನೀಡಿದ್ದಾರೆ. ಡಿಸಿಎಂ ನೀಡಿದರೆ ಮಾತ್ರ ನಾಯಕ ಜನಾಂಗದವರು ಮುಂದಿನ ದಿನಗಳಲ್ಲಿ ನಮ್ಮ ಜೊತೆ ‌ನಿಲ್ಲುತ್ತದೆ ಎಂಬುದು ತಿಳಿಸಿದ್ದು ಯಡಿಯೂರಪ್ಪ ಸಹ ಎಲ್ಲಾ ಮಾತುಗಳನ್ನು ಆಲಿಸಿದ್ದು ಮುಂದಿನ ದಿನಗಳಲ್ಲಿ ಡಿಸಿಎಂ ಸ್ಥಾನ ನೀಡುವ ಮಾತುಗಳನ್ನು ಹಾಡಿದ್ದಾರೆ ಎಂಬುದು ರಾಜಕೀಯ ಚರ್ಚೆಗಳು ನಡೆಯುತ್ತಿದ್ದು ಯಡಿಯೂರಪ್ಪ ಭರವಸೆಯ ಮೇರೆಗೆ ಶ್ರೀರಾಮುಲು ತಣ್ಣಗಾಗಿದ್ದು ರಾಮುಲು ವಿಚಾರದಲ್ಲಿ ಯಡಿಯೂರಪ್ಪ ಯಾವ ತಿರ್ಮಾನ ಕೈಗೊಳ್ಳತ್ತಾರೆ ಎಂಬುದು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours