ನನ್ನ ಕ್ಷೇತ್ರದಲ್ಲಿ 170 ಹೊಸ ಶಾಲಾ ಕೊಠಡಿಗಳ ನಿರ್ಮಾಣ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ನನ್ನ ಕ್ಷೇತ್ರದಲ್ಲಿ 170 ಹೊಸ ಶಾಲಾ ಕಟ್ಟಡಗಳು ನಿರ್ಮಾಣವಾಗಿದ್ದು ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುತ್ತಿದ್ದೇನೆ  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ತಾಲೂಕಿನ ವಿವಿಧ ಶಾಲೆಗಳ ಮತ್ತು ರಸ್ತೆ  ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ  ಪೂಜೆಯನ್ನು ನೇರವೇರಿಸಿ ಮಾತನಾಡಿದರು.
ಸರ್ಕಾರಿ  ಶಾಲೆಗಳನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಡಿಎಂಎಫ್ ಅನುದಾದವನ್ನು 20 ಕೋಟಿ ನೀಡಿದ್ದೇನೆ. ಇಲಾಖೆಯಿಂದ ಸಹ 30 ಕೊಠಡಿಗಳಿಗೆ  ಹಣ ಬಂದಿದೆ. ಖಾಸಗಿ ಶಾಲೆಗಳ ಲಕ್ಷಾಂತರ ರುಪಾಯಿ ಹಣ ಕಟ್ಟಲಾಗದೇ ನೂರಾರು ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದು  ಮಕ್ಕಳಿಗೆ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲದಂತೆ ಕೊಠಡಿಗಳು,ಶೌಚಾಲಯ ಸೇರಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುವ ಮುಖಾಂತರ ಮಕ್ಕಳಿಗೆ ಕಲಿಕೆಗೆ ಇನ್ನು ಹೆಚ್ಚಿನ  ಉತ್ತಮ ವಾತಾವರಣ ನಿರ್ಮಾಣ ಮಾಡಲಾಗುತ್ತದೆ.ಒಂದು ಕೊಠಡಿಗೆ 14 ರಿಂದ 16 ಲಕ್ಷ ಹಣ ನೀಡಿದ್ದು ಒಟ್ಟು  170 ನೂತನ  ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.
 ಮಲ್ಲಪುರ ಗೊಲ್ಲರಹಟ್ಟಿಗೆ ಶಾಲಾ ಕೊಠಡಿಗೆ 13.90ಲಕ್ಷ, ಮೂತ್ತಮಹಟ್ಟಿ 13.90 ಲಕ್ಷದ ಕೊಠಡಿಗೆ ಭೂಮಿ ಮತ್ತು  ಬಚ್ಚಬೋರನಹಟ್ಟಿಯಲ್ಲ 32 ಲಕ್ಷದ ಎರಡು ಕೊಠಡಿ ಹಾಗೂ ಸಾಸಲಹಟ್ಟಿಯಲ್ಲಿ16 ಲಕ್ಷದ ಶಾಲಾ ಕೊಠಡಿ ಉದ್ಘಾಟಿಸಿದ್ದೇನೆ. ಕಾವಡಿಗರಹಟ್ಟಿಯಲ್ಲಿ 12 ಲಕ್ಷ ವೆಚ್ಚದ ಅಂಗಮವಾಡಿ ಉದ್ಘಾಟಿಸಿದ್ದು ಕ್ಷೇತ್ರ ಅತ್ಯಗತ್ಯ ಮತ್ತು ತುರ್ತು ಇರುವ ಎಲ್ಲಾ ಕಡೆ ಮೊದಲು ನೀಡಿದ್ದು ಮುಂದಿನ ದಿನದಲ್ಲಿ ಎಲ್ಲಾ ಕಡೆಯಲ್ಲಿ ಅನುದಾನ ನೀಡುವ ಕೆಲಸ ಮಾಡುತ್ತೇನೆ ಎಂದರು.
ರಸ್ತೆ ಕಾಮಗಾರಿಗೆ ಚಾಲನೆ ಮತ್ತು ಉದ್ಘಾಟನೆ: ಬಚ್ಚಬೋರನಹಟ್ಟಿ ಗ್ರಾಮದಲ್ಲಿ 30 ಲಕ್ಷ ವೆಚ್ಚದ ನೂತನ ರಸ್ತೆ ಉದ್ಘಾಟನೆ ಮಾಡಿದ್ದು ಹೆಚ್ಚುವರಿ 40 ಲಕ್ಷ ರಸ್ತೆ ಅಭಿವೃದ್ಧಿಗೆ ನೀಡಿದ್ದೇನೆ‌. ಕಲ್ಲೇನಹಳ್ಳಿ ಗ್ರಾಮದಲ್ಲಿ 20 ಲಕ್ಷ ಮತ್ತು ಸಾಸಲಹಟ್ಟಿ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಸಾಸಲುಹಟ್ಟಿ ಗ್ರಾಮಕ್ಕೆ 35 ಲಕ್ಷ ಅನುದಾನ ನೀಡಿದ್ದು ಸರ್ಕಾರದಿಂದ ಮುಂಜೂರಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು. ಪ್ರತಿ ಹಳ್ಳಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡಿದ್ದು ಚಿಕ್ಕ ಪುಟ್ಟ ರಸ್ತೆಗಳು ಬಿಟ್ಟರೆ ಉಳಿದ ಎಲ್ಲಾ ರಸ್ತೆಗಳನ್ನು ಮಾಡಿದ್ದೇನೆ ಎಂದರು.
ಆದರ್ಶ ಗ್ರಾಮಕ್ಕೆ ಆಯ್ಕೆ: ನನ್ನ ಕ್ಷೇತ್ರದ ಕಲ್ಲೇನಹಳ್ಳಿ ಮತ್ತು ಗೋನೂರು ಗ್ರಾಮಗಳು ಪ್ರಧಾನ ಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆ ಆಗಿದ್ದು ಗ್ರಾಮದ ಶಾಲೆಗಳು, ರಸ್ತೆಗಳು ಸೇರಿ ಮೂಲಭೂತ ಸೌಲಭ್ಯವನ್ನು ಮಾಡಲಾಗುತ್ತದೆ. ಒಂದು ಗ್ರಾಮಕ್ಕೆ 20.35 ಲಕ್ಷ  ನೀಡಲಾಗುತ್ತಿದ್ದು ಇದನ್ನು ಪೂರ್ಣವಾಗಿ ಪರಿಶಿಷ್ಟ ಪಂಗಡ ಜನಾಂಗದವರು ವಾಸವಿರುವ ಗ್ರಾಮಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗಿದೆ.  ಗೋನೂರು, ಸಾಸಲಹಟ್ಟಿ, ಬಚ್ಚಬೋರನಹಟ್ಟಿ ಗ್ರಾಮದ ಸುತ್ತಮುತ್ತಲೂ 6 ರಿಂದ 7 ಚಕ್ ಡ್ಯಾಂ ಹಾಕಲಾಗಿದೆ. ಮಲ್ಲಪುರ ಗೊಲ್ಲರಹಟ್ಟಿ ಗ್ರಾಮದ ಎರಡು ದೇವಸ್ಥಾನಗಳಿಗೆ 10 ಲಕ್ಷ, ಸಾಸಲಹಟ್ಟಿ ದೇವಸ್ಥಾನಕ್ಕೆ 5 ಲಕ್ಷ, ಬಚ್ಚಬೋರನಹಟ್ಟಿ ದೇವಸ್ಥಾನಕ್ಕೆ 5 ಲಕ್ಷ ಹಣ ನೀಡಲಾಗಿದೆ. ಇನ್ನು ಕೆಲವು ರಸ್ತೆಗಳು ಮತ್ತು ಚಕ್ ಡ್ಯಾಂ ಗಳು ಯೋಜನೆಗಳು ಸರ್ಕಾರಕ್ಕೆ ಹೋಗಿದ್ದು ಬಂದ ತಕ್ಷಣ ಸಿ.ಸಿ.ರಸ್ತೆಗಳಿಗೆ ಹಣ ನೀಡುತ್ತೇನೆ. ರೈತರ ಬೊರವೆಲ್ ಮತ್ತು ಕುಡಿಯುವ ನೀರಗೆ ಚಕ್ ಡ್ಯಾಂ ಸಾಕಷ್ಟು ಉಪಯೋಗವಾಗಿದ್ದು ಹಳ್ಳಿಗಳಿಗೆ ಒಂದಲ್ಲ ಒಂದು ರೀತಿ ಎಲ್ಲಾ ಯೋಜನೆಯನ್ನು ತಲುಪಿಸುವ ಕೆಲಸ ನಾನು ಮಾಡಿದ್ದೇನೆ ಎಂದು ಹೇಳಿದರು.
ಮಲ್ಲಪುರ ಗೊಲ್ಲರಹಟ್ಟಿ ಮತ್ತು ಮುತ್ತಯ್ಯನಹಟ್ಟಿ ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರಾತಿ ಆದೇಶ ಪತ್ರವನ್ನು ಶಾಸಕರು ವಿತರಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಗೀತಾ ,ರಘು ಜಯಲಕ್ಷ್ಮಿ, ಕಾಟಯ್ಯ,ಕಮಲಮ್ಮ, ಸಾಕಮ್ಮ, ಜಯಮ್ಮ, ಬಿಇಓ ತಿಪ್ಪೇಸ್ವಾಮಿ,ಕಂದಾಯ ನಿರೀಕ್ಷಕ ಶರಣಪ್ಪ, ಪಿಆರ್ಡಿ ಇಂಜಿನಿಯರ್ ಪಾತಪ್ಪ, ಪಿಡ್ಲ್ಯೂಡಿ ಇಂಜಿನಿಯರ್ ಗೋಪಲ್ ಮತ್ತು ಪಿಡಿಓ ಮತ್ತು ಗ್ರಾಮಸ್ಥರು ಇದ್ದರು.
[t4b-ticker]

You May Also Like

More From Author

+ There are no comments

Add yours