ಸ್ವರ್ಧಾತ್ಮಕ ಪರೀಕ್ಷೆಗೆ ತರಬೇತಿ ಜೊತೆಗೆ ನಿರಂತರ ಅಭ್ಯಾಸ ಮುಖ್ಯ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ವಿದ್ಯಾರ್ಥಿಗಳು  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ತರಬೇತಿ ಜೊತೆಗೆ ನಿರಂತರ ಅಧ್ಯಯನ ಅತ್ಯವಶ್ಯಕ  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ  ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಮತ್ತು ಸರ್ಕಾರಿ ಕಲಾ ಕಾಲೇಜು ಇವರ ಸಹಯೋಗದಲ್ಲಿ  “ಪೇ ಬ್ಯಾಕ್ ಟು ಸೊಸೈಟಿ ” ವತಿಯಿಂದ ಪೋಲಿಸ್ ನೇಮಕಾತಿ  ತರಬೇತಿ  ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಸಂಘವು  ಬಡ ವಿದ್ಯಾರ್ಥಿಗಳನ್ನು  ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ.  ಅಂಬೇಡ್ಕರ್ ನೀಡಿದ ಸಂವಿಧಾನ ಅಡಿಯಲ್ಲಿ  ನಮ್ಮೆಲ್ಲರಿಗೂ ಎಲ್ಲಾ ಕ್ಷೇತ್ರದಲ್ಲಿ  ಮುಕ್ತವಾಗಿ ಅವಕಾಶಗಳು  ದೊರಕುತ್ತಿದೆ ಎಂದರು. ಯುವಕ ಯುವತಿಯರು ಕೇವಲ ಪೋಲಿಸ್ ಇಲಾಖೆಗೆ ಅಷ್ಟೆ ಅಲ್ಲದೇ ಕೆಎಎಸ್ , ಐಎಎಸ್ ಪರೀಕ್ಷೆಗಳ ಬರೆಯುವ ಕಡೆ  ನಿಮ್ಮ ಗುರಿ ಇರಲಿ ಎಂದು ವಿದ್ಯಾರ್ಥಿಗಳಿಗೆ  ಕಿವಿ ಮಾತು ಹೇಳಿದರು.  ಕೃಷ್ಣಪ್ಪ ಅವರ ನೇತೃತ್ವದಲ್ಲಿ ಸಾಕಷ್ಟು ಹೋರಟಗಳು ನಡೆದಿವೆ. ಬಡವರಿಗೆ,ಹಿಂದುಳಿದ ಸಮಾಜಗಳಿಗೆ  ನ್ಯಾಯ ಒದಗಿಸುವ ಕೆಲಸ ಮಾಡುವುದಕ್ಕೆ ಸಾಕಷ್ಟು ಶ್ರಮಿಸಿದ್ದಾರೆ.
ನಮ್ಮ ದೇಶಕ್ಕೆ ಅಂಬೇಡ್ಕರ್ ಕೊಡುಗೆ ನಾವು ಎಂದು ಮರೆಯುವಂತಿಲ್ಲ.ಎಸ್ಸಿ, ಎಸ್ಟಿ,ಹಿಂದುಳಿದವರು ಇಂದು ದೊಡ್ಡ ಹುದ್ದೆಗಳನ್ನು ಅಲಂಕಾರಿಸಿದ್ದಾರೆ ಎಂದರೆ ಅದು ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಫಲವಾಗಿದೆ.‌ಅಂಬೇಡ್ಕರ್ ತತ್ವ ಆದರ್ಶಗಳನ್ನು ಯುವ ಸಮೂಹ ಜೀವನದಲ್ಲಿ ಅಳವಡಿಕೊಂಡು ಬದುಕಿನ ಬಂಡಿ ನಡೆಸಿದರೆ ಮಾಡುವ ಕೆಲಸ ಸುಗಮವಾಗಿ ಯಶಸ್ಸು ಕಾಣುತ್ತದೆ.
ಬಡವರಿಗೆ ಆರ್ಟಿಇ ಸೀಟು ನೀಡುವಲ್ಲಿ ಬದಲಾವಣೆ  ಆಗಬೇಕಿದೆ. ಸರ್ಕಾರಿ ಉದ್ಯೋಗ ಪಡೆಯುವುದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ ಯುವತಿಯರು ಸರ್ಕಾರದ ಸೌಲಭ್ಯ ಪಡೆದುಕೊಂಡು ಉದ್ಯಮ ಆರಂಭಿಸುವ  ಕಡೆ ಗಮನ ಹರಿಸಬೇಕಿದೆ. ಪಿಎಂಇಜಿಪಿ, ಸಿಎಂಇಜಿಪಿ ಯೋಜನೆ, ಮುದ್ರಾ, ನಿಗಮಗಳ ಮೂಲಕ ಸಾಲ ಸೌಲಭ್ಯ ಬಳಸಿಕೊಂಡು ದೊಡ್ಡ ಉದ್ಯಮ ಆರಂಭಿಸಬಹುದು ಎಂದರು.
120 ವಿದ್ಯಾರ್ಥಿಗಳು 60 ದಿನಗಳ ಕಾಲ ಉತ್ತಮ ತರಬೇತಿಯನ್ನು ಪಡೆಯಬೇಕು‌. ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಯಶಸ್ಸು ಪಡೆಯಬಹದು. ತರಬೇತಿಯಲ್ಲಿ 60 ದಿನದ ಕಲಿಕೆಯನ್ನು ತರಬೇತಿ‌ ನಂತರ ಸಹ ಅವರ ಸಲಹೆಗಳನ್ನು ಅಭ್ಯಾಸದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ತಮ್ಮ ಜನಾಂಗದ ಮೀಸಲಾತಿಯನ್ನು ಪಡೆದ ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ತಮ್ಮ ಸಮಾಜದ ಯುವ ಪೀಳಿಗೆಯನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ. ಮೀಸಲಾತಿ ಪಡೆದ ಎಲ್ಲಾರೂ ಸಹ ತಮ್ಮ ಜೀವನದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದರೆ ಮಾತ್ರ ಸಮಾಜ ಸಾರ್ಥಕವಾಗುತ್ತದೆ  ಎಂದರು.
ಪ್ರಸ್ತುತ ದಿನಗಳಲ್ಲಿ  ತಂದೆ ತಾಯಿಯ ಪೋಷಣೆ ಮಾಡುವುದು ಕಡೆಮೆ ಆಗಿದೆ. ಅವರು  ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಕ್ಕಳನ್ನು ಸಾಕಿ ಸಲುವಿದ ಪೋಷಕರನ್ನು ಎಂದು ಸಹ ಕೈ ಬಿಡಬಾರದು. ತಂದೆ ತಾಯಿ ಉಪವಾಸ ಇದ್ದರು ಸಹ ಮಕ್ಕಳಿಗೆ ಎಂದು  ಕಷ್ಟವನ್ನು ಕೊಡದೇ ಶಿಕ್ಷಣ ನೀಡಿ ಉತ್ತಮ ಪ್ರಜೆಯಾಗಿ ಮಾಡುತ್ತಾರೆ.ಆದರೆ ಅಂತಹ ತಂದೆ ತಾಯಿಯನ್ನು  ಬೀದಿಯಲ್ಲಿ ಬಿಟ್ಟು ಹೋಗಿತ್ತಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಪೋಷಕರನ್ನು ಕಾಪಡಿಕೊಳ್ಳುವ ಕೆಲಸ ಎಲ್ಲಾರೂ ಮಾಡಬೇಕಿದೆ ಎಂದು ತಿಳಿಸಿದರು.
ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ ಡಾ.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಎಲ್ಲಾ ಬಡವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡತ್ತಿದೆ. ಸಮಸ್ಯೆಗಳ ಕುರಿತು   ಸರ್ಕಾರದ ಗಮನಕ್ಕೆ ತರುವ ಕೆಲಸ ಈ ಸಂಘಟನೆ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಬದುಕಿನ ಬಗ್ಗೆ ಇರುವ ಸವಾಲನ್ನು ಎಚ್ಚರಿಸುವ ಕೆಲಸ ಮಾಡುವ ಕೆಲಸ ನಮ್ಮ ಸಂಘಟನೆ ಮಾಡುತ್ತಿದೆ. ಯುವಕರು ನಿರಂತರವಾಗಿ ಸರ್ಕಾರಿ ಕೆಲಸಕ್ಕೆ  ಪ್ರಯತ್ನ ಮಾಡಬೇಕು. ಸ್ವಯಂ ಉದ್ಯೋಗಕ್ಕೆ ಒತ್ತು ನೀಡಬೇಕು ಎಂದರು. ಸರ್ಕಾರದಿಂದ ಕರೆಯ ಎಲ್ಲಾ ಸರ್ಕಾರಿ ಉದ್ಯೋಗಕ್ಕೆ  ಅರ್ಜಿ ಹಾಕವುದಕ್ಕೆ ಉತ್ತಮ ಅಡಿಪಾಯ ಹಾಕುವ ಕೆಲಸ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಮಾಡುತ್ತಿದೆ‌. ಮಕ್ಕಳು ಬೇರೆ ಯಾವುದೇ ಇತರೆ  ಜಿಲ್ಲೆಗೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ಬಡಮಕ್ಕಳಿಗೆ ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಉಚಿತ ತರಬೇತಿ ಮಾಡಲು ತಿರ್ಮಾನಿಸಿದ್ದು ಇದಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಬೆನ್ನೆಲುಬಾಗಿ ನಿಲ್ಲುವ ಜೊತೆಗೆ 120 ಮಕ್ಕಳಿಗೆ  ಊಟ ಮತ್ತು ವಸತಿ ವ್ಯವಸ್ಥೆ ಹಾಗೂ 3 ಸಾವಿರ ಸ್ಪರ್ಧಾತ್ಮಕ ಪುಸ್ತಕಗಳನ್ನು  ಶಾಸಕರು ನೀಡಿದ್ದಾರೆ‌. ಒಟ್ಟಿನಲ್ಲಿ ಕಾರ್ಯಕ್ರಮದ ರೂವಾರಿಗಳು ಶಾಸಕರು ಅವರಿಗೆ ನಾವು ಸದಾ ಋಣಿಯಾಗಿರುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು‌. ಸಂಸದರ ಸಹಕಾರ ಕೂಡ ಈ ಕಾರ್ಯಕ್ರಮಕ್ಕೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಆರ್. ರಂಗಪ್ಪ, ನಿವೃತ್ತ ಡಿಡಿಪಿಯು ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಿ.ಪಿ. ಪ್ರಕಾಶ್ ಮೂರ್ತಿ, ನಿವೃತ್ತ ಪ್ರೋ. ಲಿಂಗಪ್ಪ, ಡಿಡಿಪಿಯು  ರಾಜು, ಸಂಸದರ ಅಪ್ತ ಸಹಾಯಕ ಡಾ.ಮೋಹನ್, ನಿವೃತ ತೋಟಗಾರಿಕೆ ಅಧಿಕಾರಿ ಚಂದ್ರಪ್ಪ, ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಧ್ಯಪಕ  ಪಿ.ಸ್.ಗಂಗಾಧರ್,ಮಲ್ಲಡಿಹಳ್ಳಿ ಪ್ರಥಮ ದರ್ಜೆ ಕಾಲೇಜಿ ಪ್ರಾಂಶುಪಾಲ ಸಿದ್ದಲಿಂಗಮ್ಮ, ಜಿಲ್ಲಾ  ಉಪನ್ಯಾಸಕರ ಸಂಘದ ಅಧ್ಯಕ್ಷ ಮಲೇಶ್,  ವಕೀಲರಾದ  ಶರಣಪ್ಪ, ಜಯ್ಯಪ್ಪ, ನರಹರಿ, ಉಪನ್ಯಾಸಕ ಬಿ.ಎಂ.ಗುರುನಾಥ್ ಪ್ರಾರ್ಥನೆ ಮಾಡಿದರು, ಪ್ರೋ.ನಾಗರಾಜ್ ಸ್ವಾಗತಿಸಿದರು.
[t4b-ticker]

You May Also Like

More From Author

+ There are no comments

Add yours