ವೀರ ಹೋರಟಗಾರರ ತ್ಯಾಗ ಬಲಿದಾನವನ್ನ ಸ್ಮರಿಸಿ ಮನೆ ಮನೆಗೆ ತಲುಪಿಸೋಣ: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ-06 ಕೇಂದ್ರ ಸರ್ಕಾರದ ಡೊಂಗಿ ರಾಷ್ಟ್ರೀಯತೆ ತೋರಿಸಿ ಜನರಿಗೆ ಮಂಕುಬೂದಿ ಹಚ್ಚುತ್ತಿದ್ದಾರೆ ಎಂದು ಮಾಜಿ ಸಂಸದ, ಕೆಪಿಪಿಸಿ ಉಪಾಧ್ಯಕ್ಷ ಬಿ.ಎನ್.ಚಂದ್ರಪ್ಪ ತಿಳಿಸಿದರು.

 

 

ತಾಲ್ಲೂಕಿನ ಮೋದೂರು ಗ್ರಾಮದಿಂದ ತುರುವನೂರು ಗ್ರಾಮದವರೆಗೂ ಸುಮಾರು 101 ಕಿ.ಮೀ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು‌.
ಶಾಸಕ ರಘುಮೂರ್ತಿ, ಮಾಜಿ ಸಂಸದ ಚಂದ್ರಪ್ಪ 75ನೇ ಸ್ವಾತಂತ್ರ್ಯೋತ್ಸವದ ಅಮೃತ ನಡಿಗೆ ಯಶಸ್ವಿ ಮಾಡಬೇಕು ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬ್ರಿಟಿಷರ ಹೊಡೆದು ಆಳುವ ನೀತಿಯ ವಿರುದ್ದ ಲಕ್ಷಾಂತರ ಜನರ ತ್ಯಾಗ ಬಲಿದನದಿಂದ ನಮ್ಮ ದೇಶ ಆಗಸ್ಟ್‌ 15, 1947 ರಂದು ಸ್ವಾತಂತ್ರ್ಯ ಬಂದಿತು. ಇದರ 75ನೇ ಅಮೃತಮಹೋತ್ಸವದ ವೀರ ಹೋರಟಗಾರರ ತ್ಯಾಗ ಬಲಿದಾನವನ್ನ ಸ್ಮರಿಸಿ ಮನೆ ಮನೆಗು ತಲುಪಿಸುವ ಉದ್ದೇಶದಿಂದ 101 ಕಿ ಮಿ ಅಮೃತ ನಡಿಗೆಯ ಪಾದಯಾತ್ರೆಯ ಮೊದಲದ ದಿನ ಪ್ರಾರಂಭಿಸಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಕಿರಣ್ ಶಂಕರ್ ಶಿವಕುಮಾರ್, ಸ್ವಾಮಿ, ಭದ್ರಿ,
ನಗರಸಭಾ ಅಧ್ಯಕ್ಷ ಸುಮಕ್ಕ, ಉಪಾದ್ಯಕ್ಷ ಮಂಜುಳ, ಮುಖಂಡರಾದ ಪ್ರಸನ್ನಕುಮಾರ್ ಕೃಷ್ಣಮೂರ್ತಿ, ಪ್ರಕಾಶ್ ಮೂರ್ತಿ, ಗೀತಾಬಾಯಿ, ಲಕ್ಷಿದೇವಿ, ಉಷಾ ಭಾಗ್ಯಮ್ಮ, ದೊಡ್ಡ ರಂಗಪ್ಪ, ಬಸವರಾಜ್, ಆನಂದ, ಮಂಜುನಾಥ್, ವಿಶ್ವ ಮುಂಚುಣಿ ಘಟಕಗಳ ಪದಾದಿಕಾರಿಗಳು ಸದಸ್ಯರು ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದರು.

[t4b-ticker]

You May Also Like

More From Author

+ There are no comments

Add yours