ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ವೇಳೆ ರಾಹುಲ್ ಬಂಧನಕ್ಕೆ ಜಿಲ್ಲಾ ಕಾಂಗ್ರೆಸ್ ಖಂಡನೆ

 

 

 

 

ಚಿತ್ರದುರ್ಗ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಯುವ ನೇತಾರ ರಾಹುಲ್‍ಗಾಂಧಿಯನ್ನು ಪೊಲೀಸರು ಬಂಧಿಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ತೀವ್ರವಾಗಿ ಖಂಡಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಷ್ಟ್ರಧ್ವಜವನ್ನು ಬಿಜೆಪಿ.ಕಚೇರಿಯಲ್ಲಿಯೇ ಮಾರಾಟಕ್ಕಿಟ್ಟು, ರಾಷ್ಟøಧ್ವಜಕ್ಕೆ ಅವಮಾನ ಮಾಡಲಾಗಿದೆ. ಕೇಂದ್ರದಲ್ಲಿ ಅವರ ಪಕ್ಷವೇ ಅಧಿಕಾರದಲ್ಲಿರುವುದರಿಂದ ರಾಷ್ಟ್ರಧ್ವಜ ಮಾರಾಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಎಂ.ಕೆ.ತಾಜ್‍ಪೀರ್ ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಪಾಲ್ಗೊಳ್ಳಲು ಕಳೆದ ಮೂರರಂದು ರಾಹುಲ್‍ಗಾಂಧಿ ಚಿತ್ರದುರ್ಗದ ಮುರುಘಾಮಠಕ್ಕೆ ಆಗಮಿಸಿದಾಗ ಎಲ್ಲರಿಗೂ ಪ್ರವೇಶ ನೀಡಲು ಆಗಲಿಲ್ಲ. ಅದಕ್ಕೆ ಬಿಗಿ ಭದ್ರತೆ ಇದ್ದುದು ಕಾರಣ. ಸಿದ್ದರಾಮಯ್ಯನವರ ಜನ್ಮದಿನದಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಜಮಾಯಿಸಿ ಯಶಸ್ವಿಗೊಳಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ ಸಿಕ್ಕು 75 ವರ್ಷಗಳಾಗಿರುವುದರಿಂದ ಅಮೃತ ಮಹೋತ್ಸವ ಜಿಲ್ಲೆಯಲ್ಲಿ 75 ಕಿ.ಮೀ.ಪಾದಯಾತ್ರೆ ನಡೆಸುವಂತೆ ಎ.ಐ.ಸಿ.ಸಿ.ಸೂಚಿಸಿರುವುದರಿಂದ ಜಿಲ್ಲೆಯ ಅರು ತಾಲ್ಲೂಕಿನಲ್ಲಿ ಈಗಾಗಲೆ ಪಾದಯಾತ್ರೆ ಆರಂಭಗೊಂಡಿದೆ. ಪಕ್ಷಾತೀತವಾಗಿ ಎಲ್ಲರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಎಂ.ಕೆ.ತಾಜ್‍ಪೀರ್ ಮನವಿ ಮಾಡಿದರು.
ಆ.15 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಮೃತ ಮಹೋತ್ಸವ ಪಾದಯಾತ್ರೆಯಲ್ಲಿ ನಮ್ಮ ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಭಾರತ್ ಜೋಡೋ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕರ್ನಾಟಕದ ಗುಂಡ್ಲುಪೇಟೆಯಿಂದ ಪಾದಯಾತ್ರೆ ಹೊರಡಲಿದೆ. ಜಿಲ್ಲೆಯಲ್ಲಿ 130 ಕಿ.ಮೀ.ಪಾದಯಾತ್ರೆ ನಡೆಯಲಿದ್ದು, ರಾಹುಲ್‍ಗಾಂಧಿ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಮೂಲಕ ಬಳ್ಳಾರಿ, ರಾಯಚೂರು ಮಾರ್ಗವಾಗಿ ತೆಲಂಗಾಣ ತಲುಪಲಿದ್ದಾರೆ. ಆ ಸಂದರ್ಭದಲ್ಲಿ ಸ್ವಾಮಿಜಿಗಳ ಜೊತೆ ಮಾತನಾಡಲು ಸಮಯ ಸಿಗಬಹುದು ಎಂದು ಹೇಳಿದರು. ಪಕ್ಷದ ಕಾರ್ಯಕರ್ತರಿಗೂ ಅಲ್ಲಿ ಅವಕಾಶ ಒದಗಿಸಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಡಿ.ಟಿ.ವೆಂಕಟೇಶ್, ಎಸ್.ಎನ್.ರವಿಕುಮಾರ್, ಕೆ.ಪಿ.ಸಿ.ಸಿ.ಕೋಆರ್ಡಿನೇಟರ್ ಅನಿಲ್‍ಕುಮಾರ್, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಸಾಧಿಕ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಫೋಟೋ ವಿವರಣೆ: ಭಾರತ್ ಜೋಡೋ ಕಾರ್ಯಕ್ರಮದಡಿ ಅಕ್ಟೋಬರ್ ತಿಂಗಳಿನಲ್ಲಿ ರಾಹುಲ್‍ಗಾಂಧಿಯಿಂದ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಯುವ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಎಂ.ಕೆ.ತಾಜ್‍ಪೀರ್. ಫೋಟೋ-1.

 

 

ಚಿತ್ರದುರ್ಗ: ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್, ಕರ್ನಾಟಕ ಬಾಡಿ ಬಿಲ್ಡ್‍ರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಮಿಸ್ಟರ್ ಚಿತ್ರದುರ್ಗ ಸಿಟಿ ಇನ್ಸ್‍ಟಿಟ್ಯೂಟ್-2022 ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಆರು ಜಿಲ್ಲೆಗಳ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಆ.14 ರಂದು ಸಿಟಿ ಇನ್ಸ್‍ಟಿಟ್ಯೂಟ್ ಟೌನ್ ಕ್ಲಬ್‍ನಲ್ಲಿ ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಪಾರಿತೋಷಕ ಮತ್ತು ನಗದು ಬಹುಮಾನವಿರುತ್ತದೆ. ಮಿಸ್ಟರ್ ಚಿತ್ರದುರ್ಗ ಸಿಟಿ ಇನ್ಸ್‍ಟಿಟ್ಯೂಟ್-2022 ಟ್ರೋಫಿ ಹಾಗೂ ರೂ.ಹತ್ತು ಸಾವಿರ.
ಪ್ರಥಮ ಬಹುಮಾನ ಮೂರು ಸಾವಿರ ರೂ, ದ್ವಿತೀಯ ಬಹುಮಾನ ಎರಡು ಸಾವಿರ ರೂ, ತೃತೀಯ ಬಹುಮಾನ ಒಂದು ಸಾವಿರ ರೂ.
ಆಸಕ್ತರು ಫಾತ್ಯರಾಜನ್ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್, ಮೊ: 9845380102, ಜಿ.ಡಿ.ಭಟ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಬಾಡಿ ಬಿಲ್ಡ್‍ರ್ಸ್ ಅಸೋಸಿಯೇಷನ್, ಬೆಂಗಳೂರು ಮೊ: 9448526462 ಹಾಗೂ ಎನ್.ಡಿ.ಕುಮಾರ್ ಕಾರ್ಯದರ್ಶಿ ಚಿತ್ರದುರ್ಗ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಮೊ: 9880884123 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಶಿವರಾಂ ಕೆ. ತಿಳಿಸಿದ್ದಾರೆ.

 

[t4b-ticker]

You May Also Like

More From Author

+ There are no comments

Add yours