ಎಣ್ಣೆ ನಗರಿಗೆ ಸಂಭ್ರಮದಿ ಬಂದ ಬಣ್ಣ ಬಣ್ಣದ ಗಣಪ

 

 

 

 

 

*ಚಳ್ಳಕೆರೆ ವೀರೇಶ್*

ಚಳ್ಳಕೆರೆ-12 : ಕಳೆದ‌ ಎರಡು ವರ್ಷಗಳಿಂದ ಕೋವಿಡ್ ಹೊಡೆತದಿಂದ‌ ನಲುಗಿದ ಜನರಿಗೆ ಈ ಭಾರಿ ಉತ್ಸಾಹ ಹೆಚ್ಚಿಸಿದೆ. ಇನ್ನೂ ಒಂದು ತಿಂಗಳಿರುವಾಗಲೇ ಗಣೇಶ ಮೂರ್ತಿ ನಗರದಲ್ಲಿ ಆಗಲೇ ಬಂದು ಕುಳಿತು ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ.
ನಗರದ ಹಲವಾರು ಗೋಡಾನ್ ಸೇರುತ್ತಿವೆ. ಈ‌ ಭಾರಿ ಭಕ್ತರ ಉತ್ಸಾಹ ಹೆಚ್ಚಿದ ಹಿನ್ನೆಲೆಯಲ್ಲಿ ಬೃಹತಾದ ಗಣೇಶ ಮೂರ್ತಿಗಳು ಬಂದು ತಮ್ಮ ಸ್ಥಾನಭದ್ರಪಡಿಸಿಕೊಂಡಿವೆ. ಗಣೇಶ ಹಬ್ಬಕ್ಕೆ ಇನ್ನೂ ಒಂದು 20 ದಿನಗಳಿರುವಾಗಲೇ ಸುಮಾರು 10, 15, 18 ಅಡಿಗಳ ಗಣೇಶ ಮೂರ್ತಿಗಳು ಬಂದಿವೆ. ಹಲವಾರು ರೂಪದ ಗಣೇಶ ಮೂರ್ತಿಗಳು ಜನರ‌ ಮನಸೆಳೆಯುತ್ತಿವೆ. ಜನರೂ ಸಹ ಗಣೇಶನನ್ನು ಮನೆಗೆ ಕೊಂಡ್ಯೊಯಲು ಕಾತುರದಿಂದಲ್ಲೇ ಎದುರು ನೋಡುತ್ತಿದ್ದಾರೆ.
ಬಣ್ಣ ಬಣ್ಣದ ಕಲಾಕೃತಿ ಜನರ ಮನಸೆಳೆಯುತ್ತಿವೆ, ಡೊಳ್ಳುಹೊಟ್ಟೆ, ಉಗ್ರರೂಪಿ, ಸರ್ಪದ ಮೇಲೆ‌ ಕುಳಿತ ಗಣಪ, ಶಿವರೂಪಿ ಗಣಪ, ನಾಟ್ಯ ಗಣಪ, ಸಾಧು ಗಣಪ, ಉಗ್ರಸಂಹಾರ ಗಣಪ ಹೀಗೆ ನೂರಾರು ಥರಹೆವಾರಿ ಗಣೇಶ ಮೂರ್ತಿಗಳು ನಗರಕ್ಕೆ ಬಂದು‌ ಇಳಿದವು. ಜನರೂ ಸಹ ಗಣೇಶ ಮೂರ್ತಿಯ ಬೆಲೆ‌ ಕೇಳುವಲ್ಲಿ ತಲ್ಲೀನರಾಗಿದ್ದರು. ಈ ಭಾರಿಯ ಗಣೇಶ ಉತ್ಸವ ಹೆಚ್ಚು ಹುಮ್ಮಸ್ಸು ತುಂಬಲಿದೆ.‌

 

 

ಬಾಕ್ಸ್ ಮಾಡಬಹುದು :-
ನೂರಾರು ನಿರೀಕ್ಷೆಗಳನ್ನಿಟ್ಟು ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವಾರು ಜಿಲ್ಲೆ, ರಾಜ್ಯಗಳಿಂದ ನೂರಾರು ಗಣೇಶ ಮೂರ್ತಿಯನ್ನು ತಂದಿದ್ದೇವೆ. ಈ ಭಾರಿಯ ಹಬ್ಬ ಹೆಚ್ಚು ಸಂಭ್ರಮದಿಂದ ಕೂಡಿರಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಜನರೂ ಈಗಾಗಲೇ ಗಣೇಶ ಮೂರ್ತಿಗಳನ್ನು ನೋಡಲು ಬರುತ್ತಿದ್ದಾರೆ. ಜನರ ಉತ್ಸಾಹ ಹೆಚ್ಚಾಗಿದೆ ನಾವೂ ಸಹ ಹೆಚ್ಚಿನ ನಿರೀಕ್ಷೆ ಹೊಂದಿದ್ದೇವೆ.

ಮಾರುತೇಶ್ ಗಣೇಶ ಮೂರ್ತಿ ವ್ಯಾಪಾರಿ.

ಗಣೇಶ ಹಬ್ಬಕ್ಕೂ ಮುನ್ನವೇ ನೂರಾರು ಬಣ್ಣ ಬಣ್ಣದ ಗಣೇಶ ಮೂರ್ತಿಗಳು ನಗರಕ್ಕೆ ಬಂದಿವೆ. ನಾನು ಎಷ್ಟು ಅಡಿಯ ಗಣೇಶ ಖರೀದಿಸಬೇಕು ಎಂದು ಲೆಕ್ಕಾಚಾರ ಹಾಕಿಕೊಂಡಿಲ್ಲ. ಈಗಾಗಲೇ ಮಾರುಕಟ್ಟೆ ಬಂದಿರುವ ಮೂರ್ತಿಗಳನ್ನು ನೋಡಿ ಯಾವುದು ಕೊಂಡುಕೊಳ್ಳಬೇಕು ಎನ್ನುವುದೇ ಗೊಂದಲವಾಗಿದೆ.

ಪ್ರಸನ್ನಕುಮಾರ್ ಮೂರ್ತಿ ಖರೀದಿಸುವವ.

[t4b-ticker]

You May Also Like

More From Author

+ There are no comments

Add yours