ಮತದಾರರ ಪಟ್ಟಿ ಪರಿಷ್ಕರಣೆಯ ಸೂಪರ್‍ ಚೆಕ್ ನಡೆಸಿದ ಜಿಲ್ಲಾಧಿಕಾರಿಗಳು

 

 

 

 

ಚಿತ್ರದುರ್ಗ ಡಿ. 13 (ಕರ್ನಾಟಕ ವಾರ್ತೆ) :
ಜಿಲ್ಲೆಯಲ್ಲಿ ಕಳೆದ ಡಿ. 08 ರವರೆಗೂ ಜರುಗಿದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿ ನಮೂನೆಗಳಿಗೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ನಿರ್ದೇಶನದಂತೆ ಸೂಪರ್ ಚೆಕ್ ಕಾರ್ಯದಡಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಭೀಮಸಮುದ್ರ ಬಳಿಯ ವಿ.ವಿ. ಪಾಳ್ಯ ಗ್ರಾಮದ ಮತಗಟ್ಟೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಕಳೆದ ಡಿ. 08 ರವರೆಗೂ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಜರುಗಿದ್ದು, ಈ ಅವಧಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ನಮೂನೆ-06, ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆಗೆ ನಮೂನೆ-07, ತಿದ್ದುಪಡಿ, ವರ್ಗಾವಣೆ, ಎಪಿಕ್ ಕಾರ್ಡ್ ಬದಲಾವಣೆ ಮುಂತಾದ ಕಾರ್ಯಕ್ಕಾಗಿ ನಮೂನೆ-08 ರ ಅರ್ಜಿಗಳನ್ನು ಆಯಾ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‍ಒ) ಸಾರ್ವಜನಿಕರಿಂದ ಸ್ವೀಕರಿಸಿದ್ದಾರೆ. ಬಿಎಲ್‍ಒ ಗಳಿಂದ ಸ್ವೀಕೃತಗೊಂಡ ಅರ್ಜಿಗಳನ್ನು, ಆಯಾ ತಹಸಿಲ್ದಾರರು ಬಳಿಕ, ಉಪವಿಭಾಗಾಧಿಕಾರಿಗಳು ಪರಿಶೀಲಿಸಿ, ದಾಖಲಿಸಿರುತ್ತಾರೆ.  ಈ ರೀತಿ ನಡೆದ ಪ್ರಕ್ರಿಯೆಯಲ್ಲಿ, ಅರ್ಜಿಗಳು ಹಾಗೂ ದಾಖಲಾತಿಗಳು ನಿಯಮಾನುಸಾರವಾಗಿ ನಡೆದಿರುವ ಬಗ್ಗೆ, ಚುನಾವಣಾ ಆಯೋಗದ ನಿರ್ದೇಶನದಂತೆ ಗಣಕೀಕೃತವಾಗಿ ಆಯ್ಕೆಯಾದ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕ್ಷೇತ್ರ ಭೇಟಿ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಪರಿಶೀಲಿಸಬೇಕಿದ್ದು, ಇದರನ್ವಯ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಮಂಗಳವಾರ ಭೀಮಸಮುದ್ರ ಬಳಿಯ ವಿ.ವಿ. ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಬಿಎಲ್‍ಒ ಗಳಿಂದ ಮಾಹಿತಿ ಪಡೆದು, ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಿರುವವರ ಎಪಿಕ್ ಕಾರ್ಡ್‍ಗಳು ಆಯಾ ಮತದಾರರ ಮನೆ ವಿಳಾಸಕ್ಕೆ ಅಂಚೆ ಮೂಲಕ ಉಚಿತವಾಗಿ ತಲುಪಿಸಲಾಗುವುದು, ಇದಕ್ಕಾಗಿ ಮತದಾರರು ಯಾವುದೇ ಹಣ ನೀಡುವ ಅಗತ್ಯವಿರುವುದಿಲ್ಲ.
ಸಾರ್ವಜನಿಕರು, ವದಂತಿಗಳನ್ನು ನಂಬಿ, ಹಣ ಕೊಟ್ಟು ಖಾಸಗಿಯವರಲ್ಲಿ ಮತದಾರರ ಗುರುತಿನ ಚೀಟಿ ಪಡೆಯಲು ಮುಂದಾಗಬಾರದು.  ಇಂತಹ ಕಾರ್ಡ್‍ಗಳು ಅನಧಿಕೃತ ಕಾರ್ಡ್‍ಗಳಾಗಿದ್ದು, ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ.  ಹೀಗಾಗಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಗಾಗಿ ಸಾರ್ವಜನಿಕರು ಖಾಸಗಿ ಕಂಪ್ಯೂಟರ್ ಸೆಂಟರ್ ಅಥವಾ ಖಾಸಗಿ ವ್ಯಕ್ತಿಗಳನ್ನು ಸಂಪರ್ಕಿಸಬಾರದು,  ಎಪಿಕ್ ಕಾರ್ಡ್ ಕಳೆದುಹೋಗಿದ್ದಲ್ಲಿ, ಅಥವಾ ಬದಲಿ ಕಾರ್ಡ್ ಪಡೆಯಲು ಸಂಬಂಧಪಟ್ಟ ಬಿಎಲ್‍ಒ, ತಹಸಿಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿಯೇ ಅರ್ಜಿಯನ್ನು ಸಲ್ಲಿಸಿ, ಉಚಿತವಾಗಿ ಕಾರ್ಡ್ ಪಡೆಯಬಹುದು.   ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಅಥವಾ ಸಂಶಯಗಳಿದ್ದಲ್ಲಿ ಮತದಾರರ ಸಹಾಯವಾಣಿ 1950 ಕರೆಮಾಡಿ, ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದರು.
ಚಿತ್ರದುರ್ಗ ತಹಸಿಲ್ದಾರ್ ಸತ್ಯನಾರಾಯಣ ಸೇರಿದಂತೆ ಮತಗಟ್ಟೆಗೆ ಸಂಬಂಧಿತ ಬಿಎಲ್‍ಒ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours