ನದಿ ಪಾತ್ರದ ಜನರು ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ನಿಮ್ಮೊಂದಿಗೆ ನಾನಿದ್ದೇನೆ: ಶಾಸಕ ಟಿ.ರಘುಮೂರ್ತಿ ಅಭಯ

 

 

 

 

ಚಳ್ಳಕೆರೆ: ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ, ನದಿ ಸಮೀಪ ಇರುವಂತಹ ಎಲ್ಲಾ ಕುಟುಂಬಗಳನ್ನು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ ರಘು ಮೂರ್ತಿ ಹೇಳಿದರು.

ತಾಲೂಕಿನ ಹಾಲುಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡದರು   ಹಾಲು ಗೊಂಡನಹಳ್ಳಿ ಎಸ್‌ಸಿ ಕಾಲೋನಿಯ ಜನರು ವೇದಾವತಿ ನದಿ ಸಮೀಪ ಮನೆಗಳನ್ನು ಕಟ್ಟಿಕೊಂಡಿದ್ದು ವೇದವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಲ್ಲಿನ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದ್ದು ಗ್ರಾಮಸ್ಥರು ಆತಂಕ ಪಡುವಂತಾಗಿತ್ತು.  ಅಂತ ಕುಟುಂಬಗಳಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು ಇಲ್ಲಿನ ಕುಟುಂಬಗಳನ್ನು ಸಂಪೂರ್ಣ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಇಂದು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.ಈ‌ ಸಂದರ್ಭದಲ್ಲಿ  ಮಾತನಾಡಿ  ಗ್ರಾಮ ಅತಿ ಸೂಕ್ಷ್ಮ ಗ್ರಾಮ ಎಂದು ಎಲ್ಲರಿಗೂ ಮನದಟ್ಟಾಗಿದೆ. ಮಳೆ ಬಂದಾಗ ಎಲ್ಲಾ ಅಧಿಕಾರಿಗಳು ನಿಮ್ಮ ಗ್ರಾಮದಲ್ಲೇ ಇರುತ್ತಾರೆ. ಹಾಗಾಗಿ ಯಾರು ಆತಂಕ ಪಡುವಂತಹ ಅವಶ್ಯಕತೆ ಇಲ್ಲ ಸಮಸ್ಯೆ ಉದ್ಭವವಾಗಿ ದಿನವೇ  ನಾನು ಅಧಿಕಾರಿಗಳನ್ನು ಕಳುಹಿಸಿದ್ದೆ ಅದರಂತೆ ಅವರು ಇಲ್ಲಿಗೆ ಬಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ. .ನಿಮ್ಮಗಳಿಗೆ ಶಾಶ್ವತ ಪರಿಹಾರ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಈ ಗ್ರಾಮದಲ್ಲಿ 10 ಎಕರೆ ಸರ್ಕಾರಿ ಗೋಮಾಳವನ್ನು ಗುರುತಿಸಲಾಗಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಕಲ್ಪಿಸಲಾಗಿತ್ತು. ಸರ್ಕಾರವು ಸಹ 10 ಎಕರೆ ಮಂಜೂರು ಮಾಡಿದೆ. ಅದರಂತೆ ಇಲ್ಲಿನ ಸಮಸ್ಯೆ ಇರುವ ಕುಟುಂಬಗಳನ್ನು ಸ್ಥಳಾಂತರ ಮಾಡಲು ಎಲ್ಲಾ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ನಿಮ್ಮೊಂದಿಗೆ ನಾನಿದ್ದೇನೆ ಅಧಿಕಾರಿಗಳು ಸಹ ಜೊತೆಯಾಗಿ ಇರುತ್ತಾರೆ. ವಾಣಿವಿಲಾಸ ಸಾಗರದಲ್ಲಿ ಕೊಡಿ ಬಿದ್ದ ಹಿನ್ನೆಲೆಯಲ್ಲಿ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಬಹುದು ಹಾಗೆ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತವಾಗಿ ಇಲ್ಲಿನ ಕುಟುಂಬಗಳನ್ನು ಸ್ಥಳಾಂತರಕ್ಕೆ ಎಲ್ಲ ವ್ಯವಸ್ಥೆಗಳನ್ನು ಕಲ್ಲಿಪಿಸಲಾಗುವುದು. ಇಲ್ಲಿನ ಗ್ರಾಮಸ್ಥರು ಆದಷ್ಟು ಜಾಗರೂಕತೆಯಿಂದ ಇರಬೇಕಾಗುತ್ತದೆ. ಗ್ರಾಮದಲ್ಲಿನ ಸಮುದಾಯ ಭವನ ಶಾಲೆಗಳಲ್ಲಿ ಇರಲು ವ್ಯವಸ್ಥೆ ಕಲ್ಪಿಸಲಾಗುವುದು ಶಾಶ್ವತವಾಗಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಕುಟುಂಬಗಳನ್ನು ಸ್ಥಳಾಂತರ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಈಗ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡಿ ಮೂಲಸೌಕರ್ಯಾದ ಕೊರತೆ ಕಾಡದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವೇದಾವತಿ ನದಿಯ ನೀರಿನ ಹೆಚ್ಚಳವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮಾತನಾಡಿದರು.

 

 

ತಹಶೀಲ್ದರ್ ಎನ್.ರಘುಮೂರ್ತಿ ಮಾತನಾಡಿ ಎರಡು ದಿನಗಳ ಹಿಂದೆ ವೇದವತಿ ನದಿ ಸಮೀಪದಲ್ಲಿರುವ ಹಾಲು ಗೊಂಡನಹಳ್ಳಿ ಗ್ರಾಮದ ಜನ ವೇದವತಿ ನದಿಯಲ್ಲಿ ನೀರು ಹೆಚ್ಚಳದಿಂದ ಕೆಲವು ಮನೆಗಳು ಮುಳುಗಡೆಯಾಗಿ ಎನ್ನುವ ಮಾಹಿತಿ ಮೇರೆಗೆ ಇಲ್ಲಿಗೆ ಭೇಟಿ ನೀಡಿದ್ದೆವು.  ಅಂದು ಕೆಲವು ಮನೆಗಳು ನೀರಿಂದ  ಆವೃತಗೊಂಡಿದ್ದ ಹಿನ್ನೆಲೆಯಲ್ಲಿ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು..  ವೇದಾವತಿ ನದಿಯಲ್ಲಿ ನೀರು ತಗ್ಗಿದ ಕಾರಣದಿಂದಾಗಿ ಮತ್ತೆ ಯಾವಾಗ ಬೇಕಾದರೂ ನೀರು ಹೆಚ್ಚಳವಾಗಬಹುದು ಆದ್ದರಿಂದ ಚಳ್ಳಕೆರೆ ಶಾಸಕರ ಸೂಚನೆಯಂತೆ ಇಲ್ಲಿನ ಕುಟುಂಬಗಳನ್ನು ಸ್ಥಳಾಂತರಕ್ಕೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 10 ಎಕರೆ ಗೋಮಾಳವನ್ನು ಗುರುತಿಸಿ ವೇದಾವತಿ ನದಿಯಲ್ಲಿ ಸಮಸ್ಯೆ ಒಳಗಾದ ಕುಟುಂಬಗಳನ್ನು ಸ್ಥಳಾಂತರಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಸಮಸ್ಯೆಯಲ್ಲಿ ಸಿಲುಕಿರುವಂತಹ 16 ಕುಟುಂಬಗಳು ಮಾತ್ರ ಇಲ್ಲಿಂದ ಸ್ಥಳಾಂತರಿಸಲಾಗುವುದು. ಉಳಿದಂತೆ ಕುಟುಂಬಗಳನ್ನು ಬರುವ ದಿನಗಳಲ್ಲಿ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುವುದು. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಶಾಸಕರು ನಿಮ್ಮಗಳ ಬಗ್ಗೆ ಕಾಳಜಿ ಇದ್ದು ಅವರ ಸೂಚನೆಯಂತೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಸಕರು ಈಗಾಗಲೇ ತಾಲೂಕಿನಾದ್ಯಾಂತ ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಅದರಲ್ಲೂ ನಿಮ್ಮ ಗ್ರಾಮದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿ ದೂರವಾಣಿ ಕರೆಗಳ ಮೂಲಕ ಇಲ್ಲಿನ ಪ್ರತಿದಿನದ ಮಾಹಿತಿ ಪಡೆಯುತ್ತಿದ್ದು ಇಂದು ಅವರೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ್ದು ಮುಂದಿನ ವ್ಯವಸ್ಥೆ ಬಗ್ಗೆ ಸಮಗ್ರವಾಗಿ ತಿಳಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯಾ ನಿರ್ವಾಹಣಾಧಿಕಾರಿ ಹೊನ್ನಯ್ಯ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಸಂಪತ್ ಕುಮಾರ್ ಪಿಡಿಒ ಗುಂಡಯ್ಯ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಮುಖಂಡರಾದ ಗುಜ್ಜಾರಪ್ಪ ತಿಪ್ಪೇಸ್ವಾಮಿ, ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಮುಖಂಡರು ಇದ್ದರು.

[t4b-ticker]

You May Also Like

More From Author

+ There are no comments

Add yours