ಸರ್ಕಾರಿ ನೌಕರರ ದಿನಾಚರಣೆ ಆಚರಣೆಗೆ ಸಿಎಂ ಗೆ ಧನ್ಯವಾದಗಳು: ಜಿಲ್ಲಾಧ್ಯಕ್ಷ ಕೆ.ಮಂಜುನಾಥ್

 

 

 

 

ಕರ್ನಾಟಕ:  ಭಾರತ ದೇಶದ ಇತಿಹಾಸದಲ್ಲಿ *ಸರ್ಕಾರಿ ನೌಕರರ ದಿನಾಚರಣೆಯನ್ನು* ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಆಚರಿಸಿ ಆಡಳಿತ ಯಂತ್ರದ ಭಾಗವಾದ ಸರ್ಕಾರಿ ನೌಕರರಿಗೆ ಕರುನಾಡಿನ ದೊರೆ, ಕನಾಟಕದ ಜನಸಾಮಾನ್ಯರ, ಮುಖ್ಯಮಂತ್ರಿಗಳು, ಜನಸಾಮಾನ್ಯರಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಬಡವರ ದೀನ ದಲಿತರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಬೇಕೆನ್ನುವ ಆಶಯಹೊಂದಿರುವ ಶ್ರೀ ಎಸ್ ಬಸವರಾಜ್ ಬೊಮ್ಮಾಯಿ ಯವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ

*1)ಕೇಂದ್ರಕ್ಕೆ ಸರಿಸಮಾನವಾದ ವೇತನ 7ನೇ ವೇತನ ಆಯೋಗ ಅಕ್ಟೋಬರ್ ತಿಂಗಳಲ್ಲಿ ರಚನೆ ಮಾಡುತ್ತೇನೆ ಎಂದು* ಹೇಳಿರುವ ಮುಖ್ಯಮಂತ್ರಿಗಳಿಗೆ

 

 

ಹಾಗೂ

*2)ನಗದು ರಹಿತ ಚಿಕಿತ್ಸೆ (ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ) ಜಾರಿ ಮಾಡಿದ್ದಕ್ಕೆ ,*

ಈ ಬಗ್ಗೆ ಹಗಲಿರುಳು ಶ್ರಮಿಸಿರುವ ಹಿರಿಯ ಅಧಿಕಾರಿ ವರ್ಗದವರಿಗೆ ಹಾಗೂ ಈ ಕುರಿತಾಗಿ ಸರ್ಕಾರದ ಮುಂದೆ ಒತ್ತಡ ತಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಹಾಗೂ ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಇಲಾಖೆಗಳ ನೌಕರರಿಗೆ ಕೃತಜ್ಞತಾಪೂರ್ವಕವಾದ ಧನ್ಯವಾದಗಳು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours