ಶ್ರೀ ಪ್ರಸನ್ನ ಗಣಪತಿಯಿಂದ ನಗರದ ಜನತೆಯಲ್ಲಿ ಭಾವೈಕ್ಯತೆಯನ್ನು ಮೂಡಿಸುವಂತ ಕೆಲಸ: ಎಂಲ್ಸಿ ಕೆ.ಎಸ್.ನವೀನ್ ಪ್ರಶಂಸೆ

 

ಚಿತ್ರದುರ್ಗ ಸೆ.೯
ಬಾಲಗಂಗಾಧರನಾಥ್‌ತಿಲಕ್‌ರವರು ಗಣಪತಿಯ ಉತ್ಸವವನ್ನು ಪ್ರಾರಂಭ ಮಾಡಿ ಜನ ಜಾಗೃತಿಯನ್ನು ಮೂಡಿಸುವಂತ ಕೆಲಸವನ್ನು ಮಾಡಿದರೆ, ಚಿತ್ರದುರ್ಗ ನಗರದಲ್ಲಿ ಶ್ರೀ ಪ್ರಸನ್ನ ಗಣಪತಿಯ ಸೇವಾ ಸಮಿತಿಯವರು ಕಳೆದ ೬೫ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ನಗರದ ಜನತೆಯಲ್ಲಿ ಭಾವೈಕ್ಯತೆಯನ್ನು ಮೂಡಿಸುವಂತ ಕೆಲಸವನ್ನು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
ನಗರದ ಶ್ರೀಪ್ರಸನ್ನ ಗಣಪತಿ ಸೇವಾ ಸಮಿತಿಯವತಿಯಿಂದ ಕಳೆದ ಅ.೩೧ ರಿಂದ ನಡೆಯುತ್ತಿರುವ ೬೫ನೇ ವರ್ಷದ ಗಣಪತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಿತಿ ಯವರು ಕಳೆದ ೬೫ ವರ್ಷದಿಂದ ನಿರಂತರವಾಗಿ ಕೆಲಸವನ್ನು ಮಾಡುತ್ತಾ ಬರುತ್ತಿರುವುದು ಸುಲಭದ ಮಾತಲ್ಲ, ಯಾವುದೇ ರೀತಿಯ ತೊಂದರೆ ಇಲ್ಲದೆ ನಿರ್ವಿಘ್ನವಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.
ನಾವು ಸಹಾ ಹಳ್ಳಿಯಿಂದ ಬಂದವರಾಗಿದ್ದೇವೆ, ನಾವು ಬಂದ ಸಮಯದಲ್ಲಿಯೇ ಶ್ರೀಪ್ರಸನ್ನ ಗಣಪತಿಯನ್ನು ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ನಾವು ಇಲ್ಲಿಗೆ ಬಂದು ೬೫ವರ್ಷವಾದಂತೆ ಆಗಿದೆ. ಗಣಪತಿ ಇಷ್ಟು ವರ್ಷ ನಿರಂತರವಾಗಿ ಭಕ್ತಾಧಿಗಳಿಂದ ಪೂಜೆಯನ್ನು ಪಡೆಯುತ್ತಿದ್ದಾನೆ ಎಂದರೆ ಇದು ಆತನ ಇಷ್ಠಾರ್ಥವಾಗಿದೆ. ಮುಂದಿನ ದಿನದಲ್ಲಿಯೂ ಸಹಾ ಗಣಪತಿ ಪೂಜೆಯನ್ನು ಭಕ್ತಾಧಿಗಳಿಂದ ಪಡೆಯುವಂತಾಗಲೀ ಎಂದು ನವೀನ್ ಆಶಿಸಿದರು.
ಗಣಪತಿಯ ಪೂಜೆ ನಿಮಿತ್ತ ಮಾತ್ರ, ಇದರಿಂದ ಮತ್ತೋಂದೆಡೆ ಈ ವೇದಿಕೆಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ, ಇದು ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಇದರಿಂದ ಅವರಲ್ಲಿರುವ ಪ್ರತಿಭೆ ಹೊರಬರಲು ಅವಕಾಶ ನೀಡಿದಂತೆ ಆಗುತ್ತದೆ. ಈ ಕಾರ್ಯ ಮತ್ತಷ್ಟು ಹೆಚ್ಚಾಗಲೀ ಯುವ ಪ್ರತಿಭೆಗಳು ಹೊರ ಬರಲು ಅವಕಾಶ ಸಿಕ್ಕಂತೆ ಆಗುತ್ತದೆ ಎಂದು ತಿಳಿಸಿದರು.
ನಗರಸಭಾ ಸದಸ್ಯರಾದ ಶಶಿಧರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಶ್ರೀ ಪ್ರಸನ್ನ ಗಣಪತಿ ಪೂಜಾ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಬೆಳಕಿನ ಕೂರತೆ ಇದೆ. ನಿಮ್ಮ ಅನುದಾನದಲ್ಲಿ ಹೈಮಾಸ್ಕ್ ಬೀದಿ ದೀಪವನ್ನು ಅಳವಡಿಸುವುದರ ಮೂಲಕ ಇಲ್ಲಿಎ ಬೆಳಕನ್ನು ನೀಡಬೇಕು, ಅದೇ ರೀತಿ ಅಕ್ಕ-ಪಕ್ಕದಲ್ಲಿ ಗುಡ್ಡ ಇದೆ ಅಲ್ಲಿ ಉತ್ತಮವಾದ ಉದ್ಯಾನವನ್ನು ನಿರ್ಮಾಣ ಮಾಡಿದರೆ ಚನ್ನಾಗಿ ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿಧರ್, ಶ್ರೀ ಪ್ರಸನ್ನ ಗಣಪತಿಯ ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧವ್,ಉಪಾಧ್ಯಕ್ಷರಾದ ರಾಜಕುಮಾರ್,ನಾಗರಾಜ್ ಬೇದ್ರೇ,ಪ್ರಧಾನ ಕಾರ್ಯದರ್ಶೀ ಶಿವಕುಮಾರ್, ಸಹಾ ಕಾರ್ಯದರ್ಶೀ ನಾರಾಯಣರಾವ್,ನಿರ್ದೇಶಕರಾದ ಶ್ಯಾಂ ಪ್ರಸಾದ್ ಸ್ಥಪತಿ, ಗಜೇಂದ್ರ, ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours