ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಲು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಆಗ್ರಹ

 

 

 

 

ಚಿತ್ರದುರ್ಗ ಜು. ೦೨

ನೂಪುರ್ ಶರ್ಮರ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರನ್ನು ಅತ್ಯಂತ ಭಯಾನಕ, ಭೀಭತ್ಸ, ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕುರಿ, ಕೋಳಿ ಹತ್ಯೆಗಿಂತ ಭೀಕರವಾಗಿ ಹತ್ಯೆ ನಡೆದಿದೆ. ಇದು ಅತ್ಯಂತ ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಅವರು ಟೀಕಿಸಿದರು.

ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು, ವಿಡಿಯೋ ಮಾಡಿ ಹತ್ಯೆ ಮಾಡಲಾಗಿದೆ. ಹಂತಕರನ್ನು ಬಂಧಿಸಲಾಗಿದೆ. ಇದು ಈ ದೇಶದಲ್ಲಿ ಈಚೆಗೆ ನಡೆದ ಅತ್ಯಂತ ಭೀಕರ ಘಟನೆ. ಕನ್ಹಯ್ಯಲಾಲ್ ೧೫ ದಿನ ಮೊದಲೇ ಜೀವ ಬೆದರಿಕೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಅಲ್ಲಿನ ಪೊಲೀಸರು ರಾಜಿ ಮಾಡಿಸಿದ್ದರು. ಆದ್ದರಿಂದ ಈ ದುರ್ಘಟನೆಗೆ ಕಾಂಗ್ರೆಸ್ ಸರಕಾರವೇ ಕಾರಣ ಆದ್ದರಿಂದ ಹತ್ಯೆಗೆ ನೇರ ಕಾರಣವಾದ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಬೇಕೆಂದು ಅವರು ರಾಷ್ಟ್ರ ಪತಿಗಳು ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

 

 

ಕಾಶ್ಮೀರಿ ಪಂಡಿತರನ್ನು ಇದೇ ರೀತಿ ಕುರಿ, ಮೇಕೆಗಳಂತೆ ಹತ್ಯೆ ಮಾಡಿದ್ದರು. ಉಟ್ಟ ಬಟ್ಟೆಯಲ್ಲಿ ಓಡುವಂತೆ ಮಾಡಿದ್ದರು. ಅವತ್ತೇ ಇದನ್ನು ನಿಯಂತ್ರಿಸಿದ್ದರೆ ಈ ರೀತಿ ಅಟ್ಟಹಾಸ, ಅಹಂಕಾರ ಮೆರೆಯಲು ಅವಕಾಶ ಇರುತ್ತಿರಲಿಲ್ಲ. ಪರಿಣಾಮವಾಗಿ ಕರ್ನಾಟಕದಲ್ಲೂ ಹರ್ಷನ ಕೊಲೆ ನಡೆಯಿತು. ಅದೇ ಕತ್ತಿಗಳೇ ಕನ್ಹಯ್ಯ ಲಾಲ್ ಹತ್ಯೆ ಮಾಡಿವೆ ಎಂದು ಆರೋಪಿಸಿ ಯಾವುದೇ ಸಮಸ್ಯೆಗಳನ್ನು ಕಾನೂನು ಮಾತುಕಥೆ ಹೋರಾಟದ ಮೂಲಕ ಬಗೆಹರಿಸಿಕೊಳ್ಳಬಹುದು ಎಲ್ಲದಕ್ಕು ಹಿಂಸೆ, ಹತ್ಯೆಯೇ ಪರಿಹಾರವಲ್ಲ, ಜಿಹಾದಿಗಳ ಮನಸ್ಥಿತಿ ಸಂಘಟನೆ ಉಗ್ರರಿಂದ ಅಮಾಯಕ ಹಿಂದು ದರ್ಜೆಯೆ ಹತ್ಯೆ ಹಿನ್ನಲೆಯಲ್ಲಿ ಕೂಡಲೇ ರಾಜಸ್ಥಾನ ಸರ್ಕಾರದ ಮೇಲೆ ರಾಷ್ಟçಪತಿ ಆಳ್ವಿಕೆ ಹೇರಬೇಕೆಂದು ಒತ್ತಾಯಿಸಿದ್ದು ರಾಜಸ್ಥಾನ ಸರ್ಕಾರ ಈ ಪ್ರಕರಣದಲ್ಲಿ ಮೌನವಾಗಿದ್ದು, ಆರೋಪಿಗಳಿಗೆ ಬೆಂಬಲ ನೀಡುತ್ತಿದೆ.

ಉದಯಪುರ ವಿಚಾರದಲ್ಲಿ ಕಾಂಗ್ರೆಸ್‌ನ ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ. ಬಿಜೆಪಿ ಒಂದು ಜವಾಬ್ದಾರಿಯುತ ಪಕ್ಷವಾಗಿ ಇಡೀ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದೆ; ಇಡೀ ದೇಶದ ಜನರು ಇದನ್ನು ಖಂಡಿಸುತ್ತಿದ್ದಾರೆ ಎಂದರು.

 

[t4b-ticker]

You May Also Like

More From Author

+ There are no comments

Add yours