ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ದ ಲೈಂಗಿಕ‌ ಕಿರುಕುಳದ ಆರೋಪ,ಪೋಕ್ಸೊ ಕಾಯ್ದೆ ಕೇಸ್ ದಾಖಲು

 

 

 

 

ಚಿತ್ರದುರ್ಗ, ಆ.27: ಮಠದ ಅನಾಥಲಯದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಡಿ ಇಲ್ಲಿನ ಮುರುಘಾಮಠದ ಡಾ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ 5 ಜನರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಮೈಸೂರಿನ ನಜಾರ್ ಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿತ್ರದುರ್ಗದ ಮುರುಘಾ ಮಠದಲ್ಲಿರುವ ಅನಾಥಾಲಯದ ಹಲವು ವಿದ್ಯಾರ್ಥಿನಿಯರಿಗೆ ಹಣ್ಣು ನೀಡುವ ವೇಳೆ ಹಾಗೂ ಸ್ನಾನ ಮಾಡುವಾಗ ಬೆನ್ನು ಉಜ್ಜಲು ಕರೆದು ಸ್ವಾಮೀಜಿ ಅವರು ಹಲವು ದಿನಗಳಿಂದಲೂ ಲೈಂಗಿಕವಾಗಿ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಯಾರಲ್ಲೂ ಸಹ ಹೇಳದಂತೆ ಜೀವ ಬೆದರಿಕೆ ಇತ್ತು ಎಂದು ದೂರಿನಲ್ಲಿ ಇಬ್ಬರು ಹೆಣ್ಣು ಮಕ್ಕಳು ತಿಳಿಸಿದ್ದಾರೆ.
ಅನಾಥಾಲಯದಲ್ಲಿ ವ್ಯಾಸಾಂಗ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳನ್ನು ಸ್ವಾಮೀಜಿಗಳು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು, ಇದಕ್ಕೆ ಹಾಸ್ಟೆಲ್ ವಾರ್ಡನ್ ಕೂಡ ಒತ್ತಾಯ ಮಾಡಿ ಕಳುಹಿಸುತ್ತಿದ್ದರು, ಮತ್ತು ಮಠದಲ್ಲಿ ನಮ್ಮನ್ನು ಲೈಂಗಿಕ ಕೃತ್ಯಕ್ಕೆ ಸಾಥ್ ನೀಡುವಂತೆ ಇತರೆ ಮೂರು ಜನರು ನಮಗೆ ದೌರ್ಜನ್ಯ ಮಾಡುತ್ತಿದ್ದರು.
ಒಬ್ಬ ಬಾಲಕಿ 3 ವರ್ಷದಿಂದ ಸ್ವಾಮೀಜಿ ಲೈಂಗಿಕ
ದೌರ್ಜನ್ಯ ಮಾಡಿದ್ದಾರೆ ಎಂದು ತಿಳಿಸಿದ್ದು, ಮತ್ತೊಬ್ಬ ಬಾಲಕಿ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದ ಜುಲೈ 24 ರಂದು ಅನಾಥಲಯದಿಂದ ಹಾಸ್ಟೆಲ್ ವಾರ್ಡನ್ ಕಿರಿಕಿರಿ ಮಾಡಿ ಹೊರ ಹಾಕಿದ್ದರು ಎಂದು ಹೇಳಿಲಾಗುತ್ತಿದ್ದು, 24 ರಂದು ಬೆಂಗಳೂರಿಗೆ ಬಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುಂದಾಗಿದ್ದರು. ಆಗ ಬೆಂಗಳೂರಿನ ಆಟೋ ಚಾಲಕರೊಬ್ಬರ ಸಹಾಯದಿಂದ ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಆದರೆ ಅಲ್ಲಿ ಕೆಲವರು ಮಧ್ಯಸ್ಥಿಕೆ ವಹಿಸಿ ಪ್ರಕರಣ ಬೆಳಕಿಗೆ ಬಾರದಂತೆ ಮಾಡಿದರು ಎಂದು ಬಾಲಕಿಯರು ತಿಳಿಸಿದ್ದಾರೆ.
ಹೀಗಾಗಿ ನ್ಯಾಯ ದೊರಕುವ ಕುರಿತು ಯಾವುದೇ ವಿಶ್ವಾಸವಿಲ್ಲ ಎಂದು ತೊಂದರೆಗೊಳಗಾದ ವಿದ್ಯಾರ್ಥಿನಿಯರು ಮೈಸೂರಿನಲ್ಲಿರುವ ಒಡನಾಡಿ ಸಂಸ್ಥೆಯ ಕದ ತಟ್ಟಿದ್ದಾರೆ. ಸಂಸ್ಥೆ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶುಕ್ರವಾರ ವಿಚಾರಣೆ ನಡೆಸಿದೆ. ತೊಂದರಗೊಳಗಾದ ವಿದ್ಯಾರ್ಥಿನಿಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಮುರುಘಾ ಶರಣರ ವಿರುದ್ಧ ಸ್ವಾಮೀಜಿ ವಿರುದ್ದ ಪೋಕ್ಸೊ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ನೀಡಿದ ದೂರು ಆಧರಿಸಿ ನಜರ್‌ಬಾದ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಂಜೆವಾಣಿ ಪತ್ರಿಕೆ ಮುರುಘಾಮಠದಲ್ಲಿ ಇಂದು ಬೆಳಗ್ಗೆ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಭೇಟಿ ಮಾಡಲು ಹೋಗಾದ ಪತ್ರಿಕೆಗೆ ಯಾವುದೇ ಹೇಳಿಕೆಗಳನ್ನು ನೀಡಲು ನಿರಾಕರಿಸಿದ್ದು, ಮಠದ ವಕೀಲರಾದ ವಿಶ್ವನಾಥಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾಮೀಜಿಗಳು ಯಾವುದೇ ಪ್ರತಿಕ್ರೀಯೆ ನೀಡುವ ಸ್ಥಿತಿಯಲ್ಲಿ ಇಲ್ಲ. ಮಠದ ವಿರೋಧಿ ಬಣ ಅತಿ ಆಸೆಯಿಂದ ಬಾಲಕಿಯರ ಮೇಲೆ ಒತ್ತಡ ಹಾಕಿ ದೂರು ನೀಡಿದ್ದಾರೆ ಇದರಿಂದ ತೀವ್ರ ನೊವ್ವಾಗಿದೆ ಎಂದು ಶರಣರು ತಿಳಿಸಿರುವುದಾಗಿ ಹೇಳಿದರು.

 

 

[t4b-ticker]

You May Also Like

More From Author

+ There are no comments

Add yours