ಚಿತ್ರದುರ್ಗ ಮಹಿಳಾ ಮಕ್ಕಳ‌ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಭರ್ಜರಿ ಸಂಬಳ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ26:
ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ “ಸಖಿ” (ಒನ್ ಸ್ಟಾಪ್ ಸೆಂಟರ್) ಘಟಕಕ್ಕೆ (24*7) ಆಧಾರದ ಮೇಲೆ ಕೆಲಸ ನಿರ್ವಹಿಸಲು 2023-24ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅರ್ಹ ವಿದ್ಯಾರ್ಹತೆ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆ ಇದೇ ಜುಲೈ 26 ರಿಂದ ಆರಂಭವಾಗಿದ್ದು, ಆಗಸ್ಟ್ 9 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ, ವಿದ್ಯಾರ್ಹತೆ, ಗೌರವಧನದ ವಿವರ ಇಂತಿದೆ. ಕೇಂದ್ರದ ನಿರ್ವಾಹಕರು/ಘಟಕ ಆಡಳಿತಗಾರರು-1 ಹುದ್ದೆಗೆ ಎಂಎಸ್‍ಡಬ್ಲ್ಯೂ, ಕಾನೂನು, ಎಂಎಸ್ಸಿ ಗೃಹ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (ಮಾನವ ಅಭಿವೃದ್ಧಿ ಮತ್ತು ಕುಟುಂಬ  ಸಂಬಂಧ), ಎಂಎಸ್ಸಿ ಸೈಕಾಲಜಿ, ಎಂಎಸ್ಸಿ ಮನೋವೈದ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಮಾಲೋಚನಾ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ. ಮಾಸಿಕ ರೂ.40,000/- ವೇತನ ನೀಡಲಾಗುವುದು.
ಸಮಾಲೋಚಕರು-(ಸೈಕೋ ಸೋಶಿಯಲ್ ಕೌನ್ಸೆಲಿಂಗ್ ) 1 ಹುದ್ದೆಗೆ ಎಂಎಸ್‍ಡಬ್ಲ್ಯೂ, ಎಂಎಸ್ಸಿ ಗೃಹ ವಿಜ್ಞಾನ (ಮಾನವ ಅಭಿವೃದ್ಧಿ ಮತ್ತು ಕುಟುಂಬ  ಸಂಬಂಧ), ಮನೋವಿಜ್ಞಾನ, ಮನೋವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಸಮಾಲೋಚನಾ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ. ಮಾಸಿಕ 30,000/- ವೇತನ ನೀಡಲಾಗುವುದು.
ಕೇಸ್ ವರ್ಕರ್/ಸಮಾಜ ಕಾರ್ಯಕರ್ತ-2 ಹುದ್ದೆಗಳಿದ್ದು, ಈ ಹುದ್ದೆಗೆ ಬಿಎಸ್‍ಡಬ್ಲ್ಯೂ, ಬಿ.ಎ (ಸಮಾಜಶಾಸ್ತ್ರ) ಮಹಿಳಾ ಅಧ್ಯಯನದಲ್ಲಿ ಪದವೀಧರಾಗಿರಬೇಕು. ಎರಡು ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಮಾಸಿಕ 25,000/-ವೇತನ ನೀಡಲಾಗುವುದು.
ವಿವಿಧೋದ್ದೇಶ ಕ್ಲೀನರ್/ಸೆಕ್ಯೂರಿಟಿ-2 ಹುದ್ದೆಗಳಿದ್ದು, ಈ ಹುದ್ದೆಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಕನಿಷ್ಟ 7ನೇ ತರಗತಿ ವಿದ್ಯಾರ್ಹತೆ ಹೊಂದಿದ್ದು, ಓದು ಬರಹ ಬಲ್ಲವರಾಗಿದ್ದು, ಜವಾನ ಹುದ್ದೆಯ ಮತ್ತು ಸೆಕ್ಯೂರಿಟಿ ಕೆಲಸಗಳು 24*7 ಹಗಲು ರಾತ್ರಿ ಪಾಳೆಯದಲ್ಲಿ ನಿರ್ವಹಿಸಲು ಸಿದ್ದರಿರಬೇಕು. ಮಾಸಿಕ 15,000/- ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಒನಕೆ ಓಬವ್ವ ಸ್ಟೇಡಿಯಂ ಹತ್ತಿರ, ಜಿಲ್ಲಾ ಬಾಲಭವನ ಆವರಣ, ಚಿತ್ರದುರ್ಗ ಇ-ಮೇಲ್ ddwcdcta@gmail.com ಹಾಗೂ ದೂರವಾಣಿ ಸಂಖ್ಯೆ 08194-235259 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಭಾರತಿ ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours