ಚಿತ್ರದುರ್ಗ: ಸಾರಿಗೆ ಸಚಿವ ಬಿ.ಶ್ರೀರಾಮುಲು ತವರಲ್ಲೇ RTO ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ 4 ಮಂದಿ RTO ಕಚೇರಿಯ ಸಿಬ್ಬಂದಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಸಾರ್ವಜನಿಕರ ಬಳಿ ರಾಜಾರೋಷವಾಗಿ ಲಂಚ ಪೀಕುತ್ತಿರುವ ನಾಲ್ವರ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. RTO ಕಚೇರಿಯಲ್ಲಿ ಸೂಪರ್ಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಳೀನ, FDA ಕಸ್ತೂರಿ, FDA ವಿಶ್ವನಾಥ್ ಹಾಗೂ ಕಂಪ್ಯೂಟರ್ ಆಪರೇಟರ್ ಸಂದೀಪ್ ಎಂಬುವವರ 4 ಮಂದಿಯ ಲಂಚ ಸ್ವೀಕರಿಸುವ ವಿಡಿಯೋ ವೈರಲ್ ಆಗಿದೆ. ಇನ್ನೂ ಕಚೇರಿಯಲ್ಲಿ ಪೈಲ್ ಮೂವ್ ಮಾಡಲು , DL ಪಡೆಯಲು, ವಾಹನ ರಿಜಿಸ್ಟರ್ ಮಾಡಲು ಪ್ರತಿ ಟೆಬಲ್ ಗೂ ಹಣ ಪೀಕುತ್ತಿದ್ದಾರೆಂಬುದು ಇದ್ರಿಂದ ಸಾಬೀತಾಗುತ್ತಿದ್ದು, ನಿತ್ಯವೂ ಬಡ ಜನರಿಂದ ಅಕ್ರಮ ಹಣ ಲೂಟಿ ಮಾಡುತ್ತಿದ್ದಾರೆ. ಇನ್ನೂ ಸಾರಿಗೆ ಸಚಿವರು ಎಲ್ಲವೂ ಆನ್ ಲೈನ್ ಮಾಡಿದ್ದೇವೆ ಎಂಬು ಬೊಬ್ಬೆ ಹೊಡೆಯುತ್ತಿದ್ರು, ಇತ್ತ ಅಧಿಕಾರಿಗಳು ಮಾತ್ರ ಸಾರ್ವಜನಿಕರಿಂದ ಹಣ ಪೀಕುವುದು ಮಾತ್ರ ನಿಲ್ಲಿಸಿಲ್ಲ ಎಂಬುದಕ್ಕೆ , RTO ಕಚೇರಿಯಲ್ಲಿನ ಭ್ರಷ್ಟಾಚಾರದ ಈ ವೀಡಿಯೋ ತುಣುಕುಗಳೇ ಸಾಕ್ಷಿಕರಿಸುವಂತಿವೆ. ಇನ್ನೂ ಎಗ್ಗಿಲ್ಲದೆ ಕಚೇರಿಯ ಒಳಬಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಕೂಡಾ ಹಿರಿಯ ಅಧಿಕಾರಿಗಳ ಕಂಡು ಕಾಣದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
[t4b-ticker]
+ There are no comments
Add yours