ಚಿತ್ರದುರ್ಗ ಪೋಲಿಸರಿಂದ ಮರುಘಾ ಶರಣ ಕೇಸ್ ನ 694 ಪುಟದ ಚಾರ್ಜ್ ಶೀಟ್ ಕೋರ್ಟಿಗೆ ಸಲ್ಲಿಕೆ:ಎಸ್ಪಿ ಪರಶುರಾಮ್ ಮಾಹಿತಿ

 

 

 

 

ಚಿತ್ರದುರ್ಗ :ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧ ಫೋಕ್ಸೋ ಪ್ರಕರಣ ಸಂಬಂಧಿಸಿದಂತೆ  ಇಂದು ಚಿತ್ರದುರ್ಗ ಪೊಲೀಸರಿಂದ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ.ಆರೋಪಿ 1ಮುರುಘಾ ಸ್ವಾಮಿ ವಿರುದ್ಧ 347 ಪುಟಗಳ ಚಾರ್ಜ್ ಶೀಟ್.

ಆರೋಪಿ 2 ಲೇಡಿ ವಾರ್ಡನ್, ಆರೋಪಿ 4 ಮಠದ ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ 347 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

 

 

ಆರೋಪಿ 3 ಮಠದ ಉತ್ತರಾಧಿಕಾರಿ (ಬಸವಾದಿತ್ಯ-17) ,5 ನೇ ಆರೋಪಿ  ವಕೀಲ ಗಂಗಾಧರಯ್ಯ ವಿರುದ್ಧ ಈವರೆಗೆ ಸಾಕ್ಷ ಅಲಭ್ಯ ಹಿನ್ನೆಲೆ ತನಿಖೆ ಮುಂದುಸಲಿದ್ದೇವೆ ಎಂದಿದ್ದು  ಚಿತ್ರದುರ್ಗ ಜಿಲ್ಲಾ 2ನೇ ಅಪರ & ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ನೇತೃತ್ವದಲ್ಲಿ ನಡೆದಿದ್ದ ತನಿಖೆ ಇದಾಗಿದೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಇಂದು ಕೋರ್ಟಿಗೆ ಸಲ್ಲಿಸಲಾಗಿದೆ  ಎಂದು ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.

ಆಗಷ್ಟ್ 26ರಂದು ಮೈಸೂರಿನ ನಜರಾಬಾದ್ ನಲ್ಲಿ ಕೇಸ್ ದಾಖಲು.ಆಗಷ್ಟ್ 27 ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ. ಸೆಪ್ಟೆಂಬರ್‌ 1ರಂದು ಮುರುಘಾ ಸ್ವಾಮಿ ಬಂಧನ ಆಗಿತ್ತು. ಇದರ ಹಿನ್ನಲೆಯಲ್ಲಿ ತನಿಖೆ ಮಾಡಿದ್ದು  ಇಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours