ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಅವರು  ಅಂಬು ಕತ್ತರಿಸಿ ಮೂಲಕ ಅಂಬಿನೋತ್ಸವಕ್ಕೂ ಚಾಲನೆ

 

 

 

 

ಚಿತ್ರದುರ್ಗ: ಸಂಪ್ರದಾಯದಂತೆ ದಸರಾ ಹಬ್ಬದ ಪ್ರಯುಕ್ತ ತುರುವನೂರು ರಸ್ತೆಯಲ್ಲಿನ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

 

 

ಬಗೆ ಬಗೆಯ ಪುಷ್ಪಗಳಿಂದ ಸಿಂಗಾರಗೊಳಿಸಿ ಮರದ ರಥದಲ್ಲಿ ಕುಳ್ಳಿರಿಸಲಾಗಿದ್ದ ಲಕ್ಷ್ಮಿದೇವಿ , ಪದ್ಮಾವತಿ ದೇವಿ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿಯ ತೇರನ್ನು ಎಳೆಯುವ ಮೂಲಕ ಅಪಾರ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಚಿತ್ರದುರ್ಗ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಂಡರು.
ಸಂಪ್ರದಾಯದಂತೆ  ಗರುಡ ಪ್ರಾಕಾರ ನಡೆದ ನಂತರ ಸ್ವಾಮಿಯನ್ನು ಬ್ರಹ್ಮರಥೋತ್ಸವಕ್ಕಾಗಿ ಕರೆತರಲಾಯಿತು. ಗರುಡ ವಾಹನದ ಮೇಲೆ ಸ್ವಾಮಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಭಕ್ತರಿಂದ ಹರ್ಷೋದ್ಘಾರ ಮೊಳಗಿದವು. ನಂತರ ಕೆಲ ಭಕ್ತರು ಸ್ವಾಮಿಯ ಹೂವಿನ ಹಾರಗಳನ್ನು ಹರಾಜಿನಲ್ಲಿ ಖರೀದಿಸಿದರು.
ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಭಕ್ತರು ಬನ್ನಿ ಮುಡಿಯುವ ಮೂಲಕ ಪರಸ್ಪರ ಹಬ್ಬದ ಸಂಭ್ರಮ ಹಂಚಿಕೊಂಡರು. ಬನ್ನಿ ಮುಡಿಯುವ ಸಂಪ್ರದಾಯ ದಸರಾ ಹಬ್ಬದಲ್ಲಿ ವಿಶೇಷವಾಗಿದ್ದು, ಕಿರಿಯರು ಬನ್ನಿ ನೀಡಿ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಗರದ ನಾನಾ ದೇವತೆಗಳು ಅಂಬಿನೋತ್ಸವದ ತರುವಾಯ ಬನ್ನಿ ಪೂಜೆಯಲ್ಲಿ ಪಾಲ್ಗೊಂಡು ಸಂಜೆ ದೇವಸ್ಥಾನಗಳಿಗೆ ಹಿಂದಿರುಗಿದವು.
ಶರನ್ನವರಾತ್ರಿ ಪ್ರಯುಕ್ತ ವೆಂಕಟರಮಣ ಸ್ವಾಮಿಗೆ ನಿತ್ಯ ವಿಶೇಷ ಪೂಜೆಗಳು ನೆರವೇರಿದ್ದು, ಬುಧವಾರ ಬೆಳಗ್ಗೆ ಧ್ವಜ ಅವರೋಹಣ, ಓಕಳಿ, ಉಯ್ಯಾಲೆ ಉತ್ಸವ ಜರುಗಿತು. ಬೆಳಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಅವರು  ಅಂಬು ಕತ್ತರಿಸಿ  ಅಂಬಿನೋತ್ಸವಕ್ಕೂ ಚಾಲನೆ ನೀಡಲಾಯಿತು.
ವಾಡಿಕೆಯಂತೆ ಪ್ರತಿವರ್ಷದ ವಿಜಯದಶಮಿ ಹಬ್ಬದಂದು ಸ್ವಾಮಿಗೆ ಮುಂಜಾನೆ ಸುಪ್ರಭಾತ, ಪುಷ್ಪಾರ್ಚನೆ, ಮಹಾಮಂಗಳಾರತಿ ಸೇರಿದಂತೆ ನಾನಾ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

 

[t4b-ticker]

You May Also Like

More From Author

+ There are no comments

Add yours