ಸಾವಿರಾರು ಹಿರಿಯ ನಾಗರಿಕರ ಜೀವನಕ್ಕೆ ಪಿಂಚಣಿ ಆಧಾರ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಸೆ:30  ಸಾವಿರಾರು ಹಿರಿಯ ನಾಗರಿಕರು, ವಿಕಲಚೇತನರು, ಅವಿವಾಹಿತರ ಜೀವನಕ್ಕೆ  ಪಿಂಚಣಿ ಆಧಾರವಾಗಿದ್ದು ಅಧಿಕಾರಿಗಳು ಶ್ರಮ  ವಹಿಸಿ ಪಿಂಚಣಿ ವಂಚಿತರಿಗೆ ಪಿಂಚಣಿ ಸೌಲಭ್ಯ ದೊರಕಿಸಿದ್ದಾರೆ  ಎಂದು ಶಾಸಕ  ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ತಾಲ್ಲೂಕು ಆಡಳಿತದ ವತಿಯಿಂದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ವೃದ್ದರು, ವಿಧವೆಯರು, ಅಂಗವಿಕಲರಿಗೆ ಮಂಜೂರಾಗಿರುವ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಬಡವರಿಗೆ ನಾನಾ ರೀತಿಯ ಸಮಸ್ಯೆಗಳಿರುತ್ತವೆ ಎನ್ನುವ ಕಾರಣಕ್ಕಾಗಿ ಕಳೆದ ನಾಲ್ಕು ತಿಂಗಳ ಹಿಂದೆ ತಹಶೀಲ್ದಾರ್ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದ್ದೆ ಅದರಂತೆ ಚಿತ್ರದುರ್ಗ ಕಸಬಾ ಸುತ್ತಮುತ್ತ, ಹಿರೇಗುಂಟನೂರು ಹೋಬಳಿ, ನಗರದ ಐದಾರು ವಾರ್ಡ್‍ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಶ್ರಮ ವಹಿಸಿ ಅರ್ಹರನ್ನು ಹುಡುಕಿ ಪಿಂಚಣಿ ಮಂಜೂರು ಮಾಡಿರುವುದು ನಿಜವಾಗಿಯೂ ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯಿಂದ ಯಾರು ವಂಚಿತರಾಗಬಾರದು. ಅಂಗವಿಕಲರು ಮನೆಯಲ್ಲಿಯೇ ಕುಳಿತು ದುಡಿಮೆ ಮಾಡಬಹುದು ಸಾಕಷ್ಟು ಅವಕಾಶಗಳಿವೆ. ಸರ್ಕಾರದ ಪಿಂಚಣಿ ಮುಪ್ಪಿನ ಕಾಲದಲ್ಲಿ ನೆರವಾಗಲಿದೆ. ನನ್ನ ಕ್ಷೇತ್ರದಲ್ಲಿ ಎಲ್ಲರಿಗೂ ಅಧಿಕಾರಿಗಳು ಪಿಂಚಣಿ ಮುಟ್ಟಿಸಿದ್ದಾರೆ. ಉಳಿದಂತೆ ಯಾರಾದರೂ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅವರಿಗೂ ಸಿಗಲಿದೆ ನಿರಾಸೆಯಾಗುವುದು ಬೇಡ ಎಂದರು.

ಯಾರಿಗಾದರೂ ಪಿಂಚಣಿ ಸಮಸ್ಯೆ ಇದ್ದರೆ ಕೂಡಲೇ ಮಾಡಿಸಿಕೊಳ್ಳಬಹುದು.  ನಗರದಲ್ಲಿ ಹಡುಕಿ  180 ಜನರಿಗೆ ಪಿಂಚಣಿ ವ್ಯವಸ್ಥೆ ಕೊಡಿಸಲಾಗಿದೆ.150-200 ಆಧಾರ್ ಮತ್ತು ಬ್ಯಾಂಕ್ ಅಕೌಂಟ್ ಹೊಂದಾಣಿಕೆ ಆಗಿಲ್ಲ. ಅದನ್ನು ಸಹ ಬಗೆಹರಿಸಿ ಒಂದೆರಡು ತಿಂಗಳಲ್ಲಿ ಅವರಿಗೂ ಪಿಂಚಣಿ ನೀಡಲಾಗುತ್ತದೆ.  ಜೀವನವ ನಡೆಸಲು ಎಲ್ಲಾ ದುಬಾರಿ ಕಾಲವಾಗಿದ್ದು ನಮ್ಮ ಸರ್ಕಾರ ಪಿಂಚಣಿ ಹೆಚ್ಚಿಸುವ ಮೂಲಕ ಜನಪರ ಕಾಳಜಿಗೆ ಒತ್ತು ನೀಡಿದೆ. ತಾಲೂಕಿನಾದ್ಯಂತ 3200 ಹೊಸದಾಗಿ ಮತ್ತು ಪಿಂಚಣಿ ಸ್ಥಗಿತವಾಗಿರುವ 2560 ಒಟ್ಟು 5760 ಜನರಿಗೆ ಪಿಂಚಣಿ ಪ್ರಾರಂಭವಾಗಿದ್ದು ತಹಶೀಲ್ದಾರ್ ಸತ್ಯನಾರಾಯಣ ಉತ್ತಮ ಕೆಲಸಕ್ಕೆ ಅಷ್ಟು ಜನರು ಪಿಂಚಣಿ ಭಾಗ್ಯ ದೊರೆತಿದೆ. ಜೊತೆಗೆ ಗ್ರಾಮ ಲೆಕ್ಕಧಿಕಾರಿಗಳು ಸಹ ಪಿಂಚಣಿ ದೊರಕಿಸುವಲ್ಲಿ ಶ್ರಮವಹಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ, ಗ್ರೇಡ್-ಟು ತಹಶೀಲ್ದಾರ್ ಬೀಬಿ ಫಾತಿಮ, ಕಂದಾಯ ನಿರೀಕ್ಷಕರಾದ ಶರಣಪ್ಪ , ಮಮತ, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಪಾಡುರಂಗಪ್ಪ, ಕಾವ್ಯ, ನರಸಿಂಹಮೂರ್ತಿ ಸೇರಿ ಎಲ್ಲಾ ಗ್ರಾಮ ಲೆಕ್ಕಧಿಕಾರಿಗಳು  ಇದ್ದರು.

[t4b-ticker]

You May Also Like

More From Author

+ There are no comments

Add yours