27 ರಂದು ಹಿರಿಯ ನಾಗರಿಕರಿಗೆ ಕ್ರೀಡಾಕೂಟ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಸೆಪ್ಟಂಬರ್ 22:
ವಿಶ್ವ ಹಿರಿಯ ನಾಗರಿಕ ದಿನಾಚರಣೆಯ ಅಂಗವಾಗಿ ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 27ರಂದು ಬೆಳಿಗ್ಗೆ 10 ಗಂಟೆಗೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆ ಏರ್ಪಡಿಸಲಾಗಿದೆ.
ಆಸಕ್ತ ಹಿರಿಯ ನಾಗರಿಕರು ಸೆಪ್ಟೆಂಬರ್ 27ರಂದು ಬೆಳಿಗ್ಗೆ 9.30ಕ್ಕೆ ಹೆಸರು ನೋಂದಾಯಿಸಿ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಕೋರಿದೆ.
60-69 ವರ್ಷದ ಪುರುಷ ಮತ್ತು ಮಹಿಳೆಯರಿಗೆ 200 ಮೀ. ನಡಿಗೆ, ರಿಂಗ್‍ನ್ನು ಬಕೆಟ್‍ನಲ್ಲಿ ಎಸೆಯುವುದು, ಮ್ಯೂಜಿಕಲ್ ಚೇರ್, 70-79 ವಯಸ್ಸಿನವರಿಗೆ 100 ಮೀ. ನಡಿಗೆ, ರಿಂಗ್‍ನ್ನು ಬಕೆಟ್‍ನಲ್ಲಿ ಎಸೆಯುವುದು, ಮ್ಯೂಜಿಕಲ್ ಚೇರ್, 80 ವರ್ಷ ಮೇಲ್ಪಟ್ಟವರಿಗೆ 50 ಮೀ. ನಡಿಗೆ, ರಿಂಗ್‍ನ್ನು ಬಕೆಟ್‍ನಲ್ಲಿ ಎಸೆಯುವುದು, ಮ್ಯೂಜಿಕಲ್ ಚೇರ್ ಮತ್ತು ಏಕ ಪಾತ್ರಾಭಿನಯ, ಗಾಯನ ಸ್ವರ್ಧೆ, ಚಿತ್ರಕಲೆ ಆಯೋಜಿಲಾಗಿದೆ ಎಂದು ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.
==========

 

 

[t4b-ticker]

You May Also Like

More From Author

+ There are no comments

Add yours