ಯುವ ಬರಹಗಾರರಿಂದ ಅರ್ಜಿ: ಅವಧಿ ವಿಸ್ತರಣೆ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಸೆಪ್ಟೆಂಬರ್ 06:
ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳಲ್ಲಿ ವೈಜ್ಞಾನಿಕ ನಾಟಕಗಳ ಕೊರತೆಯನ್ನು ನೀಗಿಸಲು ಯುವ ಬರಹಗಾರರಿಗೆ ಮಕ್ಕಳ ನಾಟಕ ರಚನಾ ಶಿಬಿರ ಆಯೋಜಿಸಲು ಉದ್ದೇಶಿಸಿದೆ.
ರಾಜ್ಯದ ಪ್ರತಿ ವಿಭಾಗ ಮಟ್ಟದಿಂದ 10 ಯುವ ಬರಹಗಾರರಿಗೆ ಅವಕಾಶವಿದೆ. 3 ದಿನಗಳ ವಸತಿಯುತ ಈ ಕಮ್ಮಟದಲ್ಲಿ ಭಾಗವಹಿಸಲು ಆಸಕ್ತಿ ಇರುವ ಯುವ ಬರಹಗಾರರು ತಮ್ಮ ಬರಹದ ಬಗೆಗಿನ ಮಾಹಿತಿಯೊಂದಿಗೆ ಸ್ವ-ವಿವರಗಳನ್ನೊಳಗೊಂಡ ಅರ್ಜಿಯನ್ನು ಸಲ್ಲಿಸಲು ಅವಧಿ ವಿಸ್ತರಿಸಿ ಸೆಪ್ಟೆಂಬರ್ 15 ರೊಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇ ಔಟ್ ಹಿಂಭಾಗ, ಕೆ.ಎಚ್.ಬಿ ಕಾಲೋನಿ ಲಕಮನಹಳ್ಳಿ ಧಾರವಾಡ-580004 ಇಲ್ಲಿಗೆ ತಲುಪುವಂತೆ ಕಳುಹಿಸುವುದು.
ಅಕಾಡೆಮಿ ಇ-ಮೇಲ್ ವಿಳಾಸ- balavikasacademy@gmail.com. ತದನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಈ ಕೆಳಗಿನ ನಿಬಂಧನೆಗಳಿಗೊಳಪಟ್ಟು ಅರ್ಜಿಗಳನ್ನು ಸಲ್ಲಿಸುವುದು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2461666 ಗೆ ಸಂಪರ್ಕಿಸಬಹುದು.
ನಿಬಂಧನೆಗಳು: ಯುವ ಬರಹಗಾರರು 18 ರಿಂದ 35 ವರ್ಷ ವಯೋಮಿತಿಯೊಳಗಿರಬೇಕು. ಕನಿಷ್ಠ ಒಂದು ಪುಸ್ತಕವನ್ನು ಪ್ರಕಟಗೊಳಿಸಿರಬೇಕು ಅಥವಾ ಪತ್ರಿಕೆಯಲ್ಲಿ ಲೇಖನ/ ಕಥೆ ಪ್ರಕಟಗೊಂಡಿರಬೇಕು. ಅಥವಾ ಯಾವುದೇ ಸ್ವಂತ ಲೇಖನದ ಹಸ್ತ ಪ್ರತಿ ಅಥವಾ ಝರಾಕ್ಸ ಪ್ರತಿಯನ್ನು ಸಲ್ಲಿಸಬೇಕು. ಮಹಿಳಾ ಯುವ ಬರಹಗಾರರಿಗೆ ಆದ್ಯತೆಯನ್ನು ನೀಡಲಾಗುವುದು. ಆಯ್ಕೆಗೊಂಡ (ಮಹಿಳೆ/ಪುರಷ) ಬರಹಗಾರರು ಕಾರ್ಯಾಗಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಕಡ್ಡಾಯವಾಗಿ ವಸತಿಯುತವಾಗಿ ಭಾಗವಹಿಸುವುದು. ಭಾಗವಹಿಸುವ ಶಿಬಿರಾರ್ಥಿಗಳಿಗೆ ವಸತಿ ಹಾಗೂ ಬಂದು ಹೋಗುವ ನಿಗದಿತ ಪ್ರಯಾಣ ಭತ್ಯೆಯನ್ನು ನೀಡಲಾಗುವುದು ಎಂದು ಧಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours