ಕಲೆಯು ಯಾವ ಗುಂಪಾದರೇನು ಪ್ರತಿಭೆ ಮುಖ್ಯ:ಬಾಬು ಲಾಲಜೀ ಪಟಿಯಾತ್

 

 

 

 

ಚಿತ್ರದುರ್ಗ: ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವಂತಹ ವಿದ್ಯಾರ್ಥಿಗಳ ಯಾವ ಕಲೆಗಳ ಗುಂಪಾದರೇನು ಅವರ ಪ್ರತಿಭೆ ಮುಖ್ಯ ಎಂದು ಶ್ರೀ ಪಾರ್ಶ್ವನಾಥ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬು ಲಾಲಜೀ ಪಟಿಯಾತ್ ತಿಳಿಸಿದರು.
ನಗರದ ಪಾಶ್ರ್ವನಾಥ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಿತ್ರದುರ್ಗ ಇವರ ವತಿಯಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿನ ಕಲೆಯಲ್ಲಿ ವಿದ್ಯಾರ್ಥಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ ಪ್ರಥಮ ಸ್ಥಾನ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನ ಕಲೆಯಲ್ಲಿ ಭಾಗವಹಿಸಬೇಕು. ಸೋಲು ಗೆಲುವು ನೋಡದೆ ಕ್ರಿಯಾಶೀಲತ್ಮಕವಾಗಿ ಸ್ಪರ್ಧೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕರಾದ ಸೈಯದ್ ಇನಾಯತ್ ಮಾತನಾಡಿ, ಮಕ್ಕಳು ಅರಳುವ ಹೂಗಳು ಇದ್ದ ಹಾಗೆ. ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಕೊಡಬೇಕು. ಪ್ರತಿಯೊಬ್ಬ ಮಕ್ಕಳಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆಯು ಇದ್ದೇ ಇರುತ್ತೆ. ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೊತ್ಸಾಹಿಸಬೇಕು ಎಂದು ತಿಳಿಸಿದರು.
ಓದು, ಕ್ರೀಡೆ, ಸಾಂಸ್ಕøತಿಕ ಹೀಗೆ ಅನೇಕ ಪ್ರತಿಭೆಯಲ್ಲಿ ಸಕ್ರಿಯವಾಗಿ ತೊಡಗಿರುವ  ಮಕ್ಕಳಿಗೆ ಈಗಿನಿಂದಲೇ ತರಬೇತಿ ನೀಡುವುದರ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕರಾದ ರವೀಂದ್ರ ಮಾತನಾಡಿ, ಪ್ರತಿಭಾ ಕಾರಂಜಿ ಎಲ್ಲರನ್ನೂ ಆನಂದವನ್ನುಂಟು ಮಾಡುವ ವಿಷಯವಾಗಿದೆ. ಮಕ್ಕಳನ್ನು ಬರಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಳೆಯಬಾರದು ಬೇರೆ ಕ್ಷೇತ್ರದಲ್ಲಿ ತೊಡಗಿರುವ ಮಕ್ಕಳ ಬುದ್ಧಿಶಕ್ತಿಗಳನ್ನು ನಾವು ತಿಳಿದುಕೊಳ್ಳಬೇಕು. ಶಿಕ್ಷಣದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗುತ್ತಿದೆ. ಸಾಂಸ್ಥಿಕ ಚಟುವಟಿಕೆ ಪಠ್ಯ ಪುಸ್ತಕದಲ್ಲೂ ಸಹ ಮುಂದಿನ ದಿನಗಳಲ್ಲಿ ತರಲಾಗುವುದು. ಮಕ್ಕಳ ಭಾವನೆಗಳು, ಸೈದಾಂತಿಕ ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಅನುಗುಣವಾಗಿ ಬೆಳೆಯುವಂತಹ ಕ್ಷೇತ್ರಕ್ಕೆ ಸಹಾಯ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಿ ಆರ್ ಪಿ ಓ.ಶ್ವೇತಾ ದ್ವಾರಕನಾಥ್,  ಪಾಶ್ರ್ವನಾಥ ಶಾಲೆಯ ಉಪಾಧ್ಯಕ್ಷ ಉತ್ತಮ್ ಚಂದ್, ವಿದ್ಯಾವಾಹಿನಿ ಕಾರ್ಯದರ್ಶಿ ಆನಂದ್, ಮುಖ್ಯಶಿಕ್ಷಕರಾದ ಮೂಡಲಗಿರಿಯಪ್ಪ, ನಜಿಮಾ, ವಿಜಯಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours