ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಯಗಳ ತವರೂರು:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ಭಾರತದ ಧಾರ್ಮಿಕ ಪರಂಪರೆ ಮತ್ತು ಧಾರ್ಮಿಕ ಇತಿಹಾಸಕ್ಕೆ ಪೂರಕವಾಗಿ ಬುಡಕಟ್ಟು ಸಂಸ್ಕೃತಿಯ ಮ್ಯಾಸಬೇಡರ ಪೂಜಾ ಕಾರ್ಯಗಳು ಹಾಗೂ ಧಾರ್ಮಿಕ ನಡವಳಿಕೆಗಳು ನಡೆದುಕೊಂಡು ಬರುತ್ತಿವೆ ಎಂದು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನ ಬೋಸೆ ದೇವರಹಟ್ಟಿ ಗ್ರಾಮದಲ್ಲಿ ಬೋಸೇದೇವರ ಜಾತ್ರಾ ಮಹೋತ್ಸವದ ನಾಲ್ಕನೇ ದಿನದ ಪೂಜಾ ಕಾರ್ಯಗಳ ದೇವರು ಗುಡಿ ತುಂಬವ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದರು.

 

 

ದಕ್ಷಿಣ ಭಾರತದಲ್ಲಿ ಬುಡಕಟ್ಟು ಸಂಸ್ಕೃತಿಯು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಮತ್ತು  ಚಳ್ಳಕೆರೆ ತಾಲೂಕಿನಲ್ಲಿ ಅತ್ಯಂತ ಶ್ರೀಮಂತ ಮತ್ತು ವೈಶಿಷ್ಟ್ಯ ಪೂರ್ಣವಾಗಿದೆ. ಬುಡಕಟ್ಟು ಜನರು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಸಂಪ್ರದಾಯದ ಮೂಲಕ ದೇವರುಗಳನ್ನು ಆರಾಧಿಸುತ್ತಾರೆ. ದೇವರ ಎತ್ತುಗಳನ್ನು ಕೂಡ ಆರಾಧಿಸುತ್ತಾರೆ. ಇತಿಹಾಸದಂತೆ ದ್ವಾಪರ ಯುಗದಲ್ಲಿನ ಯಾದವರು ಅತಿ ಹೆಚ್ಚು ಭಕ್ತಿ ಮತ್ತು ಶ್ರದ್ಧೆಗಳಿಂದ ಗೋಗಳನ್ನು ಪೂಜಿಸಿ ಆರಾಧಿಸುತ್ತಿದ್ದರು ಮತ್ತು ಶ್ರೀ ಕೃಷ್ಣನು ಗೋವುಗಳ ಪರಿಪಾಲಕನಾಗಿದ್ದನು. ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲೂಕಿನ ಪ್ರತಿಯೊಂದು ಭಾಗದಲ್ಲೂ ಕೂಡ ಈಗಲೂ ದೇವರ ಎತ್ತುಗಳಿಗೆ ವಿಶಿಷ್ಟ ಸ್ಥಾನಮಾನವನ್ನು ನೀಡಿದ್ದಾರೆ. ಪೂಜಾ ವಿಧಿ ವಿಧಾನಗಳು ಆರಂಭದಿಂದ ಅಂತ್ಯದವರೆಗೆ ದೇವರ ಎತ್ತುಗಳ ವಿಶಿಷ್ಟ  ಪೂಜೆ ದೇವರ ಎತ್ತುಗಳ ಓಡಿಸುವುದು ಮತ್ತು ದೇವರ ಎತ್ತುಗಳಿಗೆ ನೀಡುವ ಹಾರೈಕೆಯು ಕೂಡ ವೈವಿಧ್ಯತೆಗಳಿಂದ ಕೂಡಿರುತ್ತದೆ. ಒಂದು ಸಂಸ್ಕೃತಿ ಮತ್ತು ಆರಾಧನೆಯನ್ನು ಬೇರೆ ಎಲ್ಲಿಯೂ ಕೂಡ ನಾವು ಇವತ್ತಿನ ದಿನಗಳಲ್ಲಿ ಕಾಣಲು ಸಾಧ್ಯವಿಲ್ಲ.

ಭಕ್ತಿ ಮತ್ತು ಭಾವ ಪರವಶರಾಗಿ ತಾಲೂಕಿನ ಬುಡಕಟ್ಟು ಜನಾಂಗದ ಮತ್ತು ಬೇರೆ ಜನಾಂಗದವರು ಕೂಡ ಈ ರೀತಿ ಒಟ್ಟಿಗೆ ಸೇರಿ ನಾಲ್ಕು ದಿನಗಳ ಕಾಲ ಈ ಬೊಸೆ ದೇವರ ಆರಾಧನೆಯನ್ನು ಮತ್ತು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ಅಂತಿಮ ದಿನ ದೇವರನ್ನು ಗುಡಿ ತುಂಬಿಸಿದ್ದಾರೆ. ಈ ಭಾಗದ ಎಲ್ಲರಿಗೂ ಕೂಡ ನೆಮ್ಮದಿ ಆರೋಗ್ಯ ಮತ್ತು ಶಾಂತಿ ಹಾಗೂ ಸೌಭಾಗ್ಯ ವನ್ನು ದೇವರು ನೀಡುತ್ತಾನೆ ಎಂಬ  ನಂಬಿಕೆ  ಈ ಜನರಲ್ಲಿದೆ ಇದು ವಾಸ್ತವವೂ ಕೂಡ ಆಗಿದೆ. ಎಷ್ಟೇ ವೈಜ್ಞಾನಿಕ ಮತ್ತು ತಾಂತ್ರಿಕತೆ ನಮಗೆ ಹಾಸಕೊಕ್ಕಾದ್ದರು  ಕೂಡ ಈ ಧಾರ್ಮಿಕ ಭಾವನೆಗಳು ಮತ್ತು ಆಧ್ಯಾತ್ಮಿಕ ಭಾವನೆಗಳು ಮೊದಲು ನಮ್ಮಲ್ಲಿ ನೆಲೆಯೂರಬೇಕು  ವಿಶ್ವಶಾಂತಿ ಕಾಣಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ , ಮುಖಂಡರಾದ ಮುದಿಯಪ್ಪ, ಬಸವರಾಜ್, ಮತ್ತೆ ಟಿ. ಓಬಣ್ಣ ಗ್ರಾಮಸ್ಥರುಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours