ಇಂದು ಕೋಟೆ ನಾಡಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕಾರ್ಯಕ್ರಮ ವಿವರ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.21:
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ನವೆಂಬರ್ 22 ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ನವೆಂಬರ್ 22ರಂದು ಬೆಳಿಗ್ಗೆ 10.15ಕ್ಕೆ ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲೆಕಾಪ್ಟರ್ ಮೂಲಕ ಹೊರಟು, ಬೆಳಿಗ್ಗೆ 11ಕ್ಕೆ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಮುರಾರ್ಜಿ ದೇಸಾಯಿ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದ ಹೆಲಿಪ್ಯಾಡ್‍ಗೆ ಆಗಮಿಸುವರು. ಬೆಳಿಗ್ಗೆ 11.15ಕ್ಕೆ ಹಿರಿಯೂರು ತಾಲ್ಲೂಕಿನ ಐತಿಹಾಸಿಕ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡುವರು. ಬೆಳಿಗ್ಗೆ 11.45ಕ್ಕೆ ವಿವಿ ಸಾಗರದಿಂದ ರಸ್ತೆಯ ಮೂಲಕ ಹೊರಟು, ಮಧ್ಯಾಹ್ನ 12ಕ್ಕೆ ಹಿರಿಯೂರಿನ ನೆಹರು ಮೈದಾನ (ಕಡಲೆಕಾಯಿ ಮಂಡಿ)ಯಲ್ಲಿ ಆಯೋಜಿಸಿರುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 2ಕ್ಕೆ ಹಿರಿಯೂರು ರಸ್ತೆಯ ಮೂಲಕ ಮಧ್ಯಾಹ್ನ 2.30ಕ್ಕೆ ಚಳ್ಳಕೆರೆಗೆ ಆಗಮಿಸಿ, ಮೀರಾಸಾಬಿಹಳ್ಳಿ ರಾಣಿಕೆರೆಗೆ ಬಾಗಿನ ಅರ್ಪಣೆ ಮಾಡುವರು. ನಂತರ ಚಳ್ಳಕೆರೆಯ ಬಿ.ಎಂ.ಜಿ.ಹೆಚ್.ಎಸ್.ರಂಗಮಂದಿರದ ಆವರಣದಲ್ಲಿ ಆಯೋಜಿಸಿರುವ ಪಕ್ಷದ ಕಾರ್ಯಕ್ರಮದಲ್ಲಿ  ಭಾಗವಹಿಸುವರು. ಸಂಜೆ 5ಕ್ಕೆ ಚಳ್ಳಕೆರೆಯಿಂದ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನಬಸವೇಶ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours