ಚಿಕ್ಕ ಮುದುರೈ ಕೆರೆ ಕೋಡಿ ಬಿದ್ದಿದ್ದು ವೃದ್ದರು ಮತ್ತು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು ಈಗಾಗಲೇ ಚಿಕ್ಕ ಮದುರೈ ಕೆರೆ ಕೋಡಿ ಬಿದ್ದಿದ್ದು 4 ಅಡಿ ನೀರು ಕೋಡಿಯಲ್ಲಿ ಆದು ಹೋಗುತ್ತಿದ್ದು ಈ ಕೆರೆಯ ನೀರಿನಿಂದ ರಾಣಿಕೆರೆ ತುಂಬುವ ಮುನ್ಸೂಚನೆಯಿದ್ದು ಕೆರೆಯ ಆಸುಪಾಸಿನಲ್ಲಿ ಸಾರ್ವಜನಿಕರು ಮಕ್ಕಳನ್ನು ಮತ್ತು ವೃದ್ಧರನ್ನು ಜೋಪಾನವಾಗಿಟ್ಟು ಕೊಳ್ಳಬೇಕೆಂದು ಚಳ್ಳಕೆರೆ  ತಹಶೀಲ್ದಾರ್  ಎನ್. ರಘುಮೂರ್ತಿ ಹೇಳಿದರು

 

 

ಇಂದು ಚಿಕ್ಕಮಧುರೆ ಕೆರೆಯು ಕೋಡಿ ಬಿದ್ದಿದ್ದು   ಭೇಟಿ ನೀಡಿ ಪರಿಶೀಲಿಸಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ರವಿಕುಮಾರ್ ಅವರಿಗೆ  ಸೂಚನೆ ನೀಡಿ ಇದರಿಂದ ಯಾವುದೇ ಅನಾಹುತ ಆಗದಂತೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಆಗದಂತೆ  ಕ್ರಮವಹಿಸಲು ತಹಶೀಲ್ದಾರ್  ಸೂಚಿಸಿದರು.

ರಾಮಜೋಗಿಹಳ್ಳಿ ಗ್ರಾಮದಲ್ಲಿ ಕೆರೆಯ ಹಿಂಭಾಗದಲ್ಲಿರುವ  ತಡೆಗೋಡೆ ಕುಸಿದಿದ್ದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು  ಕಾವ್ಯ ಅವರಿಗೆ ಸೂಚಿಸಿದರು. ಕೆರೆಯ ಆಸುಪಾಸಿನಲ್ಲಿ ಇರುವಂತ ಜನರಿಗೆ ಕಟ್ಟೆಚ್ಚರವಹಿಸುವಂತೆ ಸ್ಥಳೀಯವಾಗಿ ಪ್ರಚಾರ ಕಾರ್ಯ ಕೈಗೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು ಇದೇ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ರಾಜಸ್ವನಿರೀಕ್ಷಕರ ದ ಲಿಂಗೇಗೌಡ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours