ದಾರಿ ವಿವಾದಗಳಿಗೆ ಗಲಾಟೆ ಬೇಡ, ಹೊಂದಾಣಿಕೆ ಮಾಡಿಕೊಂಡು ಮುನ್ನೆಡೆಯಿರಿ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ಕೆಲವೊಂದು ದಾರಿ ವಿವಾದಗಳು ಸಾರ್ವಜನಿಕರ ಪ್ರಾಣಹಾನಿಗೆ ಕಾರಣವಾಗಿವೆ.  ಆದರೆ  ಸಾಮರಸ್ಯದ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಿಂದ ಜೀವನ ಮಾಡಲು ಸಹಕಾರಿಯಾಗುವಂತ ವಾತಾವರಣವನ್ನು ಸೃಷ್ಟಿ  ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಇಂದು ಬೊಮ್ಮನ ಕುಂಟೆ ಗ್ರಾಮದಲ್ಲಿ ಸರ್ವೆ ನಂಬರ್ 65 ಮತ್ತು 68ರ  ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸ್ ನಿರೀಕ್ಷಕರಾದ ಕಾಂತರಾಜು ಅವರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತಾಲೂಕ್ ಸರ್ವೆರ್ ಅವರಿಂದ ಅಳತೆ ಮಾಡಿಸಿ ಸಾರ್ವಜನಿಕ ದಾರಿಗೆ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳೊಂದಿಗೆ ಚರ್ಚಿಸಿ ಜೆಸಿಬಿಯಿಂದ  ವಿವಾದಿತ ಜಮೀನಿನ ಸಮತಟ್ಟು ಮಾಡಿಸಿ ರಸ್ತೆ ನಿರ್ಮಾಣ ಮಾಡಿಸಿದರು.

 

 

ಈ ಸಂದರ್ಭದಲ್ಲಿ  ಈಗ ನಿರ್ಮಾಣ ಮಾಡುತ್ತಿರುವ ರಸ್ತೆಗೆ ಗ್ರಾಮ ಪಂಚಾಯಿತಿಯ ಎನ್ ಆರ್ ಇ ಜಿ ಅನುದಾನದಲ್ಲಿ ಪಕ್ಕ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮಸ್ಥರಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಯಾವುದೇ ಸ್ವತ್ತುಗಳನ್ನು ಒಂದು ವೇಳೆ ಗ್ರಾಮಕ್ಕೆ ಜಮೀನು ಬೇಕಾದಲ್ಲಿ ಸರ್ಕಾರದ ವತಿಯಿಂದಲೇ ಗುರುತಿಸಿ ಸಂಬಂಧಿಸಿದ ಪಂಚಾಯಿತಿಗೆ ಜಮೀನನ್ನು ಹಸ್ತಾಂತರ ಮಾಡಲಾಗುವುದು. ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪರಶುರಾಂಪುರ ಪಿಎಸ್ಐ ಕಾಂತರಾಜು ತಾಲೂಕ್ ಸರ್ವೆಯರ್ ಪ್ರಸನ್ನ ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಬಸವರಾಜು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours