ತಹಶೀಲ್ದಾರ್ ಎನ್.ರಘುಮೂರ್ತಿ ದಾಳಿಗೆ ಬೆದರಿದ ಗುಟಕ ಅಂಗಡಿ ಮಾಲೀಕರು ರಾಶಿ ರಾಶಿ ಗುಟಕಗಳು ವಶ.

 

 

 

 

ಚಳ್ಳಕೆರೆ:ಮಾದಕ ವಸ್ತುಗಳು ಯುವ ಸಮೂಹವನ್ನು ಹಾಳು ಮಾಡುತ್ತ ಜೀವವನ್ನು  ಕಳೆದಕೊಳ್ಳುವ ಸ್ಥಿತಿಗೆ ತೆಗೆದುಕೊಂಡ ಹೋಗುತ್ತವೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ನಗರದಲ್ಲಿ ಇಂದು  ಸಮನ್ವಯ  ಸಮಿತಿ ಪೋಲಿಸ್ ಇಲಾಖೆ ಆರೋಗ್ಯ ಇಲಾಖೆ,  ನಗರ ಸಭೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಂಬಾಕು ಮುಕ್ತ ನಗರ ಕಾರ್ಯಕ್ರಮ ಅಂಗವಾಗಿ ನಗರದ ವಾಸವಿ ಕಾಲೇಜ್,  ಸರ್ಕಾರಿ ಪಿಯು ಕಾಲೇಜ್ ,ಬಾಪೂಜಿ ಕಾಲೇಜ್ ಹಾಗೂ ಸಾರ್ವಜನಿಕ ಸ್ಥಳದಲ್ಲಿ,  ವಾಲ್ಮೀಕಿ ಸರ್ಕಲ್ , ಪರಿವೀಕ್ಷಣ ಮಂದಿರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾರಾಟ ಹಾಗೂ ಮಧ್ಯಪಾನ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ ದಾಳಿಯಲ್ಲಿ ಧೂಮಪಾನದ ಉತ್ಪನ್ನಗಳಾದ ಬೀಡಿ ಸಿಗರೇಟ್ ತಂಬಾಕು ಗುಟುಕ ಹೊಗೆ ಸೊಪ್ಪು ಹಾಗೂ ಮಧ್ಯದ ಪೌಚ್ ವಶಕ್ಕೆ ಪಡೆದು ಸುಮಾರು 16 ಪ್ರಕರಣಗಳನ್ನು ದಾಖಲಿಸಿಕೊಂಡರು.

 

 

ಉಳಿದಂತಹ ಅಂಗಡಿ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದರು  ಸಾರ್ವಜನಿಕರನ್ನು ಕುರಿತು ಮಾತನಾಡಿದ ತಹಶೀಲ್ದಾರ್  ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕು.  ಶಾಲಾ ಆವರಣ ,  ಶಾಲಾ ಮುಂಭಾಗ ಮುಖ್ಯರಸ್ತೆ ಸಾರ್ವಜನಿಕ ಸ್ಥಳ ಆಸ್ಪತ್ರೆ, ಸರ್ಕಾರಿ ಕಚೇರಿ, ಅಂಗನವಾಡಿ ಇಂತಹ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು  ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ಇಂತಹ ಸ್ಥಳಗಳಲ್ಲಿ ಧೂಮಪಾನವಾಗಲಿ ಮಧ್ಯಪಾನವಾಗಲಿ, ಮಾಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರ.

ತಾಲೂಕು ವೈದ್ಯಾಧಿಕಾರಿ ಡಾ. ಕಾಶಿ  ಮಾತನಾಡಿ ಈಗಾಗಲೇ ನಗರದ ಎಲ್ಲಾ ಅಂಗಡಿ ಹಾಗೂ ಡಾಬಾ ಬಸ್ ನಿಲ್ದಾಣ, ಶಾಲಾ ಅಕ್ಕಪಕ್ಕ ಅಂಗಡಿಗಳಿಗೆ ತಂಬಾಕು ಮಾರಾಟ ನಿಷೇಧ ನಾಮಫಲಕಾಗುವಂತೆ ಸೂಚನೆ ನೀಡಲಾಗಿದೆ.  ಅದರಂತೆ ಇಂದು ಸಹ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಹಲವು ಅಂಗಡಿಗಳ ಮೇಲೆ ದಾಳಿ ತಂಬಾಕು ಉತ್ಪನ್ನ ಹಲವು ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ ಎಂದರು.

ಈ‌ ಸಂದರ್ಭದಲ್ಲಿ   ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಬಿ ತಿಪ್ಪೇಸ್ವಾಮಿ, ತಂಬಾಕು ನಿಯಂತ್ರಣ ಅಧಿಕಾರಿ ತಿಪ್ಪೇಸ್ವಾಮಿ, ಸಿಡಿಪಿಓ ಕೃಷ್ಣಪ್ಪ ಪೌರಯುಕ್ತ  ಸಿ. ಚಂದ್ರಪ್ಪ, ಪಿ ಎಸ್ ಐ ತಿಮ್ಮಪ್ಪ ಆರೋಗ್ಯ ಅಧಿಕಾರಿಗಳಾದ ಮಹಾಲಿಂಗಪ್ಪ ಗಣೇಶ್ ಏ ಎಸ್ ಐ ಗಳಾದ ರವಿ ಪಿಸಿ ಗಳಾದ ಶ್ರೀನಿವಾಸ್ ಚಂದ್ರು ಸೇರಿದಂತೆ ನಗರಸಭೆ ಅಧಿಕಾರಿಗಳು ಆರೋಗ್ಯ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours