ಗ್ರಾಮದ ರಸ್ತೆಗಳ ವಿಚಾರಕ್ಕೆ ದ್ವೇಷ ಅಸೂಯೆ ಬೆಳೆಸಿಕೊಳ್ಳದೆ ಸಾಮರಸ್ಯದಿಂದ ಬದುಕಿ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ಸಾರ್ವಜನಿಕರು ಗ್ರಾಮಗಳಲ್ಲಿ ದ್ವೇಷ ಅಸೂಯೆ ಮತ್ಸರದ  ಭಾವನೆಗಳನ್ನು ದೂರ ಮಾಡಿ ಸಾಮರಸ್ಯ ಬದುಕಿನ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೆಂದು ತಹಸೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ತಾಲೂಕಿನ  ಪರಶುರಾಮಪುರ ಹೋಬಳಿ ಚೌಳೂರು ಗ್ರಾಮದ ಸರ್ವ್ ನಂ 88 ರ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ ತಾಲೂಕಿನಲ್ಲಿ ಸಾಕಷ್ಟು ಗ್ರಾಮಗಳಲ್ಲಿ ನಕಾಶೆ ಕಂಡ ದಾರಿ ಮತ್ತು ರೂಢಿ ಬಾರಿಗೆ ಸಂಬಂಧಿಸಿದಂತ ವಿವಾದಗಳಿವೆ ಈ ಎಲ್ಲಾ ವಿವಾದಗಳಿಗೂ ಕೂಡ ಕಾನೂನಾತ್ಮಕವಾಗಿ ಪರಿಹಾರ ಒದಗಿಸುವುದು ಕಷ್ಟ ಸಾಧ್ಯದ ಮಾತು. ಎಲ್ಲಿ ಎಲ್ಲಿ ಈ ರೂಡಿ ದಾರಿಗಳಿವೆ ಅಲ್ಲಿನ ರೈತರು ವೈಯಕ್ತಿಕ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ವಿವಾದಗಳನ್ನು ಸೃಷ್ಟಿಸಿಕೊಂಡಿರುವುದು ಬಹುತೇಕ ಕಂಡು ಬಂದಿದೆ ರೈತರಿಗೆ ದಾರಿಗಳು ಅವನ ಒಕ್ಕಲುತನದ ಕೆಲಸ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ.

 

 

40-50 ವರ್ಷಗಳಿಂದ ಉಪಯೋಗಿಸಿಕೊಂಡು ಬಂದಿರುವಂತ ಜಮೀನಿನಲ್ಲಿಯೂ ಕೂಡ ಈಗ ವಿವಾದಗಳನ್ನು ಸೃಷ್ಟಿಸಿಕೊಂಡಿರುವುದು ಕಂಡುಬಂದಿದೆ.  ಈ ರೀತಿಯ ರೂಡಿ ದಾರಿಗಳಿಗೆ ಸರ್ಕಾರದಿಂದ ಸಕ್ರಮೀಕರಣಗೊಳಿಸಲು ನಿಯಮಾವಳಿಯಲ್ಲಿ ಅವಕಾಶವಿದೆ. ಆದಾಗ್ಯೂ ಕೂಡ ಯಾವುದೇ ರೈತರು ಇಂಥ ವಿವಾದಗಳನ್ನು ಸೃಷ್ಟಿಸಿಕೊಳ್ಳಬಾರದು ಹಾಲಿ ಈ ಗ್ರಾಮದಲ್ಲಿ ಉಪಯೋಗಿಸುತ್ತಿರುವಂತಹ ಈ ರೂಡಿ ದಾರಿ ಸರ್ಕಾರಿ ಸ್ವಾಮ್ಯದ ನಿಯಮಾವಳಿಗಳಲ್ಲಿ ಒಳಪಟ್ಟಿದ್ದು ಇದನ್ನು ಸರ್ಕಾರದ ವತಿಯಿಂದ ಸಕ್ರಮಿಗೊಳಿಸಲಾಗುವುದು ಹಾಗೆ ಈ ದಾರಿ ವಿವಾದ ಸುಖಾಂತ್ಯ ಕಂಡಿದೆ. ಮುಂದಿನ ದಿನಗಳಲ್ಲಿ ಈ ದಾರಿ ವಿಚಾರದಲ್ಲಿ ಯಾರೂ ಕೂಡ ವಿವಾದ ಸೃಷ್ಟಿಸಿಕೊಳ್ಳಬಾರದೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚವಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಣ್ಣ ಶಿಕ್ಷಕ ವೀರಭದ್ರಪ್ಪ ತಾಲೂಕ್ ಸರ್ವೇರ್ ಪ್ರಸನ್ನ ಕುಮಾರ್ , ರಾಜೇಶ್ವ ನಿರೀಕ್ಷಕರಾದಂತಹ ಮೋಹನ್ ಕುಮಾರ್ ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours