ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದಲ್ಲಿ ಸ್ಮಶಾನ ಭೂಮಿ ವಿವಾದಕ್ಕೆ ತೆರೆ

 

 

 

 

ಚಳ್ಳಕೆರೆ: ತಾಲೂಕಿನ   ಜಿಂಜರಗುಂಟೆ ಗ್ರಾಮದ ಸರ್ವೇ ನಂಬರ್ 35 ರಲ್ಲಿ  4 ಎಕರೆ 15  ಗುಂಟೆ  ಸ್ಮಶಾನ ಭೂಮಿ ವಿವಾದ ವನ್ನು  ತಹಶೀಲ್ದಾರ್  ಎನ್ ರಘುಮೂರ್ತಿ ಬಗೆಹರಿಸಿದ್ದಾರೆ.

 

 

ಪರಶುರಾಂಪುರ ಹೋಬಳಿ ಜಿಂಜರ್ಗುಂಟೆ ಗ್ರಾಮದ ಸರ್ವೆ ನಂಬರ್ 35ರಲ್ಲಿ ನಾಲ್ಕು ಎಕರೆ 15 ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಮೀಸಲಿರಿಸಲಾಗಿತ್ತು.  ಈ ಸ್ಮಶಾನವನ್ನು ಕೆಲವರು ಒತ್ತುವರಿ ಮಾಡಿದ್ದು ಮತ್ತು ಓಡಾಡಲು ವ್ಯವಸ್ಥಿತ ದಾರಿ ಇಲ್ಲ ಎಂಬ ಕಾರಣಕ್ಕೆ ಸ್ಮಶಾನದ ವಿವಾದ ಉಂಟಾಗಿದ್ದು ಗ್ರಾಮಸ್ಥರು ತಹಶೀಲ್ದಾರ್  ಕಚೇರಿಗೆ ಹೋಗಿ ಸ್ಮಶಾನದ ವಿವಾದವನ್ನು ಬಗೆಹರಿಸುವಂತೆ ಕೋರಿದ್ದರು.ತಕ್ಷಣ ಸ್ಪಂಧಿಸಿದ ತಹಶೀಲ್ದಾರ್  ರಘಮೂರ್ತಿ,  ತಾಲೂಕ್ ಸರ್ವೆರ್ ಮತ್ತು ಕಂದಾಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಒತ್ತುವರಿಯನ್ನು ತೆರೆವುಗೊಳಿಸಿ ಸದರಿ ಸ್ಮಶಾನಕ್ಕೆ 40 ಅಡಿ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದಾಗಿ ಇದಕ್ಕೆ ಸಂಬಂಧಿಸಿದಂತೆ  ಸರ್ವೇಯರ್ ಅವರಿಗೆ ಸೂಚನೆ ನೀಡಿ ಭೂ ಕಂದಾಯ ಕಾಯ್ದೆಯ ನಿಯಮ 71ರಂತೆ ಸಾರ್ವಜನಿಕ ರಸ್ತೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ನಾಗೆ ಗ್ರಾಮಸ್ಥರಿಗೆ ಕಿವಿಮಾತು ಹೇಳಿ ಸ್ಮಶಾನಕ್ಕೆ ಹೋಗಲು ದಾರಿ ಮುಂತಾದ ಕಾರಣಕ್ಕೆ ಅಡ್ಡಿಪಡಿಸುವುದು ಯಾರಿಗೂ ಶೋಭೆ ತರುವುದಿಲ್ಲ ಮನುಷ್ಯ ಸತ್ತಾಗ ಅವನಿಗೆ ಸದ್ಗತಿ ಸಿಗುವ ಹಾಗೆ ನೋಡಿಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯವಾಗಿದೆ ಹಾಗೆ ಸ್ಮಶಾನವನ್ನು ಪಂಚಾಯಿತಿಯಿಂದ ಅಭಿವೃದ್ಧಿಪಡಿಸಿ ಈ ಭಾಗದ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವಂತೆ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಮನವಿ ಮಾಡಿದರು ಸಂದರ್ಭದಲ್ಲಿ ಚೌಳೂರು ಪಂಚಾಯತಿ ಅಧ್ಯಕ್ಷ ಚಿಕ್ಕಣ್ಣ ಮತ್ತು ಎಲ್ಲಾ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours