ತಾಲೂಕು ಆಡಳಿತದಿಂದ ನೀರಿನ ಬಗ್ಗೆ ಜನರಲ್ಲಿ ಜಾಗೃತಿ ಅಭಿಯಾನ:ತಹಶೀಲ್ದಾರ್ ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ:  ಒಬಳಾಪುರ  ಮತ್ತು ದೊಡ್ಡ ಉಳ್ಳಾರ್ತಿ  ರಸ್ತೆ ಸಂಪೂರ್ಣ ಸ್ಥಗಿತ ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.  ಕಳೆದ ನಾಲ್ಕೈದು ದಿನಗಳಿಂದ ಬಿದ್ದಂತಹ ಬಾರಿ ಮಳೆಯಿಂದ ಕಲ್ಯಾಣದುರ್ಗವನ್ನು ಸಂಪರ್ಕಿಸುವ ಓಬಳಾಪುರ ರಸ್ತೆ ಸಂಪೂರ್ಣ ಸಂಪರ್ಕ ಕಡಿತ ಗೊಂಡಿರುವುದರಿಂದ ಯಾವುದೇ ವಾಹನಗಳು ಓಡಾಡದೆ ಪರದಾಡುವಂತಗಿದೆ. ಇಂದು ಬೆಳಗ್ಗೆ ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ರೇಣುಕಪುರ ಮತ್ತು ಬೂದಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಆಲೋಚಿಸಿ ರಸ್ತೆಯ ಮೇಲೆ ಮೂರು ಅಡಿ ನೀರು ಹರಿಯುತ್ತಿರುವುದರಿಂದ ಯಾವುದೇ ದ್ವಿಚಕ್ರ ವಾಹನ ನಾಲ್ಕು ಚಕ್ರಗಳ ವಾಹನವನ್ನು ಓಡಾಡುವುದನ್ನು ನಿರ್ಬಂಧಿಸಲಾಗಿದೆ. ಪೊಲೀಸರಿಂದ ಸರ್ಪಗಾವಲು  ಹಾಕಲಾಗಿದೆ. ಈ ಪ್ರವಾಹದಿಂದ ಬಾದೀತರಾಗಿರುವ  ರೈತರ ತೋಟಗಾರಿಕೆ ಹಾಗೂ ಕೃಷಿ ಪ್ರವಾಹದಿಂದ ನಷ್ಟವಾಗಿರುವ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಅಂದಾಜಿಸಲಾಗುತ್ತಿದೆ. ಕೆಲವು ಮನೆಗಳಿಗೆ ನೀರು ನುಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ ಹಲವಾರು ಮನೆಗಳು ಜಕಮಗೊಂಡಿವೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾಳಾಗಿವೆ ಸಾರ್ವಜನಿಕ ರಸ್ತೆಗಳು ಹಾಳಾಗಿವೆ ಇವೆಲ್ಲವುಗಳ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.  ರೇಣುಕಾಪುರ ಗ್ರಾಮದಲ್ಲಿ ಪ್ರವಾಹ ನಗ್ಗಿ ಗ್ರಾಮದ ಸಾರ್ವಜನಿಕ ರಸ್ತೆಗಳು ಶಾಲಾ ಕಟ್ಟಡಗಳು ಜಖಂಗೊಂಡಿದ್ದು ಇವುಗಳ‌ ಅಂದಾಜನ್ನು ಕೂಡ ತಯಾರಿಸಲಾಗುತ್ತಿದೆ ಎಂದು ಹೇಳಿದರು.

 

 

ಈ ಸಂದರ್ಭದಲ್ಲಿ ಬೂದಿಹಳ್ಳಿ ಮತ್ತು ರೇಣುಕಾ ಪರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಬೂದಿಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯರಾಜು ತಿಮ್ಮರಾಜು ಯಜಮಾನಪ್ಪ ರಾಜು ರಾಜೇಶ್ವ ನಿರೀಕ್ಷಕರದಂತ ತಿಪ್ಪೇಸ್ವಾಮಿ ಗ್ರಾಮ ಲೆಕ್ಕಾಧಿಕಾರಿ ಹರೀಶ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours