ವೇದಾವತಿ ನದಿ ಪಾತ್ರದಲ್ಲಿ ನೀರಿನ ಮಟ್ಟ ಹೆಚ್ಚಳ, ಜನರು ದಂಡೆಯ ಬಳಿ ತೆರಳದೇ ಎಚ್ಚರಿಕೆ ವಹಿಸಿ: ತಹಶೀಲ್ದಾರ್ ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ:   ಆಲಿ ಗೊಂಡನಹಳ್ಳಿ ,ಬೊಮ್ಮನಕುಂಟೆ,  ಕೊನಿಗರಹಳ್ಳಿ  ಗ್ರಾಮದ ಸಾರ್ವಜನಿಕರು ಯಾವುದೇ ಕಾರಣಕ್ಕೂ  ನದಿ ಪಾತ್ರದಲ್ಲಿ ಹತ್ತಿರ ಹೋಗಬಾರದು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

 

 

ಇಂದು ಬೆಳಿಗ್ಗೆ 7 ಗಂಟೆಗೆ ಹಾಲಿ ಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಂತರ  ಸೂರನಹಳ್ಳಿ ಕೊನಿಗನಹಳ್ಳಿ ಮತ್ತು ಬೊಮ್ಮನ ಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ ಇತ್ತೀಚಿನ ಮಳೆಯಿಂದ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಎರಡು ಮೂರು ಮನೆಗಳಿಗೆ ಸ್ವಲ್ಪ ನೀರು ನುಗ್ಗಿದೆ ಹಾಗಾಗಿ ಇಂತಹ ಮನೆಗಳಲ್ಲಿರುವಂತ ಸಾರ್ವಜನಿಕರನ್ನು ತಕ್ಷಣ ಶಾಲೆಗಳಿಗೆ  ಸ್ಥಳಾಂತರಿಸಲಾಗುವುದು.  ವಿವಿ ಸಾಗರ ಕೋಡಿ ಬೀಳುವ ಹಂತಕ್ಕಿರುವುದರಿಂದ  ಈ  ನೀರಿನ ಪ್ರಮಾಣ ಹೆಚ್ಚಾಗಬಹುದು ಎಂದರು.  ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಆಸೆಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ರೀತಿ ನೀರು ಹೆಚ್ಚಾದಲ್ಲಿ ಎಷ್ಟು ಕುಟುಂಬಗಳು ಮತ್ತು ಎಷ್ಟು ಜನರಿಗೆ ಪುನರ್ ವಸತಿ ಕಲ್ಪಿಸಬಹುದು ಎಂಬ ಬಗ್ಗೆ ಸಂಬಂಧಿಸಿದ ಪಿಡಿಒ ಮತ್ತು ರಾಜಸ್ಥನಿ ರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಅಂತ ಪರಿಸ್ಥಿತಿ ಏನೂ ಇಲ್ಲ ಮುಂದೆ ಈ ರೀತಿ ನೀರು ಹೆಚ್ಚಾದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತಾಲೂಕು ಆಡಳಿತ ಸಾರ್ವಜನಿಕರ ಜೊತೆಗಿದ್ದು ನೆರವು ನೀಡುವುದರ ಜೊತೆಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತದೆ. ಯಾವುದೇ ಸಾರ್ವಜನಿಕರು ಏನೇ ತೊಂದರೆ ಇದ್ದರೂ ತಕ್ಷಣ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದರು.  ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತಿ ಸದಸ್ಯರಾದ ಗುಜ್ಜರಪ್ಪ,  ತಿಪ್ಪೇಸ್ವಾಮಿ ಗ್ರಾಮ ಪಂಚಾಯಿತಿ ಪಿಡಿಒ ಗುಂಡಪ್ಪ ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ ಹಾಜರಿದ್ದರು ಮತ್ತು ಗ್ರಾಮಸ್ಥರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours