ಧ್ವನಿ ಇಲ್ಲದ ಜನರಿಗೆ ಧ್ವನಿ‌ ನೀಡಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್: ತಹಶೀಲ್ದಾರ್ ಎನ್.ರಘುಮೂರ್ತಿ ಬಣ್ಣನೆ

 

 

 

 

ಚಳ್ಳಕೆರೆ: ಡಾ.ಬಿಆರ್ ಅಂಬೇಡ್ಕರ್ ಅವರು  ಅವಮಾನ ಅಪಮಾನ ಸಹಿಸಿಕೊಂಡು ಸಂವಿಧಾನ  ರಚನೆಯ ಪರಿಣಾಮವಾಗಿ ಎಲ್ಲಾ ಸೌಲಭ್ಯಗಳನ್ನು ಧ್ವನಿ ಇಲ್ಲದವರು ಪಡೆಯುತ್ತಿದ್ದೇವೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ತಾಲ್ಲೂಕಿನ  ನನ್ನಿವಾಳ ಗ್ರಾಮದ ಎಸ್ಸಿ ಕಾಲೊನಿ ಲಕ್ಷ್ಮಿ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ನನ್ನಿವಾಳ  ಗ್ರಾಮಪಂಚಾಯಿತಿ ಪೋಲೀಸ್ ಇಲಾಖೆ,  ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದು  ಕುಂದು ಕೊರತೆ ಹಾಗೂ ದಲಿತ ಪರಿವರ್ತನೆ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ  ಮಾತನಾಡಿದರು.

 

 

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರದಲ್ಲಿ ಸಿಗುವಂತಹ ಅನುಕೂಲಗಳನ್ನು ಶೋಷಿತರಿಗೆ ದಲಿತರಿಗೆ ತಲುಪಿಸಲು ಶ್ರಮಿಸಬೇಕು.  ಸಮಾಜದಲ್ಲಿ ಅಧಿಕಾರಿಗಳು ಮತ್ತು ನೌಕರರು ಶೋಷಿತರ ಕಣ್ಣೊರೆಸುವ ಕೆಲಸ ಮಾಡಿದರೆ ಅದು ನಮಗೆ ಸಂವಿಧಾನವನ್ನು ಕೊಟ್ಟ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಕೊಟ್ಟಂತಹ ಕಾಣಿಕೆಯಾಗುತ್ತದೆ.  ತಮ್ಮ ಜೀವಿತ  ಅವಧಿಯಲ್ಲಿ ಸಮಾಜದಲ್ಲಿನ ಬಡವರ ಶೋಷಿತರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಮಗೆ ಎಷ್ಟೇ ಅವಮಾನ ಮಾಡಿದರು ಸಹ   ಸಮರ್ಥವಾಗಿ ಎದುರಿಸಿ ಭಗವದ್ಗೀತೆಯ ಮೂಲಕ  ಸಂವಿಧಾನವನ್ನು ರಾಷ್ಟ್ರಕ್ಕೆ ಅರ್ಪಿಸಿದರು.

ಸಂವಿಧಾನದ ಫಲವನ್ನು  ಫಲಾನುಭವಿಗಳು ಸ್ವಾರ್ಥಿಗಳಾಗಬಾರದು ಎಂದು ಎಚ್ಚರಿಕೆ ನೀಡಿದರು.   ಆದರೆ ಇಂದಿನ ನಮ್ಮ ಸಮೂಹ ಇವರು ಗಮನಿಸಿದಂತಹ ಎಚ್ಚರಿಕೆಯನ್ನು ಪರಿಪಾಲಿಸಿ ಸಮಾಜದ ಬಡವರ ದಿನ ದಲಿತರ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು  ಸಾರ್ವಜನಿಕರಿಗೆ ಪಾರದರ್ಶಕವಾಗಿ ಸರ್ಕಾರಿ ಸೌಲಭ್ಯ  ನೀಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಈ ಸಮಯದಲ್ಲಿ ದಲಿತ ಮುಖಂಡ ವಿಜಯಕುಮಾರ್,ಗ್ರಾಮಪಂಚಾಯಿತಿ ಅಧ್ಯಕ್ಷ ಬಸವರಾಜ್ ಪೋಲೀಸ್ ಇನ್ಸ್ಪೆಕ್ಟರ್ ಜಿ.ಬಿ.ಉಮೇಶ,ಪಿ ಎಸ್ ಐ ಸತೀಶ ನಾಯ್ಕ್,ದಲಿತ ಮುಖಂಡ ಮಹೇಶ,ನಾಗರಾಜ್ ಮಾತನಾಡಿದರು.
ಈ ಸಭೆಯಲ್ಲಿ ಮುಖಂಡರಾದ ರಾಮದಾಸ್ ದಲಿತ ಮುಖಂಡ ಚೌಳೂರು ಪ್ರಕಾಶ ಉಮೇಶ ಚಂದ್ರ ಬ್ಯಾನರ್ಜಿ,ಆನಂದ,ಹೊನ್ನೂರುಸ್ವಾಮಿ ಮಾರ್ಕಂಡಪ್ಪ,ವಿನೋದ್,ದೊರೆ ಅಪ್ಪಣ್ಣ, ನಾಗರಾಜ್ ಶಿವಣ್ಣ ಮಹೇಶ,ಚಿನ್ನೊಬಯ್ಯ, ಭದ್ರಿ ಹಾಗೂ ಗ್ರಾಮಸ್ಥರು ಇದ್ದರು.ದಲಿತ ಮುಖಂಡ ಇದ್ದರು.

[t4b-ticker]

You May Also Like

More From Author

+ There are no comments

Add yours