ಕೆರೆಗಳು ತುಂಬಿದ್ದು ರೈತರ ಕೃಷಿ ಚಟುವಟಿಕೆಗಳನ್ನು ಆಸರೆ: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ-11 ತಾಲ್ಲೂಕಿನ ಎಲ್ಲಾ ಕೆರೆಗಳು ಕೋಡಿ‌ ಬೀಳುವ ಮೂಲಕ ಜನರ‌ಕುಡಿಯುವ ನೀರು, ರೈತರ ಕೃಷಿ ಚಟುವಟಿಕೆಗಳನ್ನು ಆಸರೆಯಾಗಲಿವೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

 

 

ಅವರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾಣೀಕೆರೆ, ಮಟ್ಲಗೆರೆ ಗೋಸಿಕೆರೆ ಗ್ರಾಮಗಳ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದರು.‌ ತಾಲ್ಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದು ರೈತರು ಹಾಗೂ ಜನರಲ್ಲಿ ಸಂತಸ ಉಂಟು ಮಾಡಿವೆ.‌ ಆದರೆ ಗ್ರಾಮದ‌ ಜನರು ಅತಿ ಕಾಗರೂತಕೆಯಿಂದ ಇರಬೇಕಾಗುತಗತದೆ. ಕೆರೆ, ಕಟ್ಟೆ, ಕುಂಟೆಗಳಲ್ಲಿ ನೀರು ತುಂಬಿವೆ ಮಕ್ಕಳ, ಜನರು, ಜಾನುವಾರುಗಳ ಕೆರೆಯತ್ತ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ಸುಮಾರು ಒಂದು ವಾರದಿಂದ ಸುರಿದ ಮಳೆಗೆ ತಾಲೂಕಿನಾದ್ಯಂತ ಕೆರೆಕಟ್ಟೆಗಳು ಮೈದುಂಬಿ ಹರಿಯುತ್ತಿವೆ ಎಂದರು.


ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ಮೂರ್ತಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಆಂಜನೇಯ, ನಗರಸಭೆ ಸದಸ್ಯರಾದ ರಮೇಶ್ ಗೌಡ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಓಬಮ್ಮ ರಾಮಣ್ಣ, ಹಾಗೂ ಉಪಾಧ್ಯಕ್ಷರು, ಸದಸ್ಯರುಗಳಾದ ರಾಮಣ್ಣ, ಓಂಕಾರ್ ಮೂರ್ತಿ ಮತ್ತು ಮುಖಂಡರುಗಳಾದ ಕೇಶವಣ್ಣ, ಬಸವರಾಜ್ , ನಾಗೇಂದ್ರಪ್ಪ, ಪ್ರಕಾಶ್, ನವೀನ್, ಕಿರಣ್, ಸಣ್ಣಪ್ಪ, ಕಿಸನ್ ಸೆಲ್ಲ ಅಧ್ಯಕ್ಷರಾದ ನಾಗರಾಜ್ ಹಾಗೂ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours