ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಸಮಾಜಕ್ಕೆ ಮೋಸ ಮಾಡುತ್ತಿದೆ: ಶಾಸಕ ಟಿ.ರಘುಮೂರ್ತಿ ಕಿಡಿ

 

 

 

 

ಚಿತ್ರದುರ್ಗ: ವಾಲ್ಮೀಕಿ ಶ್ರೀಗಳ ಹೋರಟಕ್ಕೆ  ೧೫೦ ದಿನದ  ಪ್ರತಿಭಟನೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ  ಸರಕಾರ ಸ್ಪಂದಿಸದ ಕಾರಣ ಹೋರಾಟಕ್ಕೆ ಪೂರಕವಾಗಿ ಈ ಪ್ರತಿಭಟನೆ ನಡೆಸುತ್ತಿದ್ದೇವೆ. ವಿಶೇಷವಾಗಿ ೧೫೨ ದಿನಕ್ಕೆ ಹೋರಾಟ ಬಂದಿದೆ. ರಾಜನಹಳ್ಲಿಯಿಂದ ರಾಜಧಾನಿವರೆಗೆ ಹೋರಾಟ. ನಾಗಮೋಹನದಾಸ್ ಸಮಿತಿ ರಚನೆಯಾಯಿತು. ಪ್ರತಿಪಕ್ಷವಾಗಿದ್ದಾಗ ಬೆಂಬಲ ಸೂಚಿಸಿದ್ದರು. ನಮ್ಮ ಸರಕಾರ ಬಂದರೆ ೨೪ ಗಂಟೆಯಲ್ಲಿ ಮೀಸಲು ಹೆಚ್ಚಿಸುವ ಭರವಸೆ ನೀಡಿದ್ದರು. ಎಲ್ಲ ಗಮನಿಸಿದ ಮೇಲೆ ಪಕ್ಷಾತೀತವಾಗಿ ಸಮಾಲೋಚನೆ ನಡೆಸಿ, ದೃಢ ನಿರ್ಧಾರದಿಂದ ಹೋರಾಟ ಆರಂಭಿಸಿದರು. ಪರಿಶಿಷ್ಟ ಶಾಸಕರು ಮೂರು ಬಾರಿ ಅಧಿವೇಶನದಲ್ಲಿ ಹೋರಾಟ ಮಾಡಿದ್ದೇವೆ.

 

 

ಜನಸಂಖ್ಯೆಗೆ ಮೀಸಲು ನೀಡಬೇಕು ಎಂದು ಆಗ್ರಹಿಸಿದ್ದೇವೆ. ಶಿಕ್ಷಣ, ಉದ್ಯೋಗದಲ್ಲಿ ನೀಡಿಲ್ಲ. ಏನೇನೋ ನೆಪ ಹೇಳಿ ಮುಂದೂಡುತ್ತಿದ್ದಾರೆ. ಈಗಿನ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ  ಮೋಸ ಮಾಡುತ್ತಿದೆ. ಇದು ಜನಾಂಗದ ಪ್ರಶ್ನೆ. ನಮ್ಮ ಮನಸ್ಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲರೂ ಸೇರಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಸರಕಾರಕ್ಕೆ ಎಚ್ಚರಿಕೆ ಕೊಡಬೇಕು. ಈ ಹೋರಾಟ ನಿರಂತವಾಗಿ ಮುನ್ನಡೆಸಬೇಕು.

[t4b-ticker]

You May Also Like

More From Author

+ There are no comments

Add yours