ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ಹಿತಕಾಯುವಲ್ಲಿ ಸಂಪೂರ್ಣ ವಿಫಲ: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ-13 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ಹಿತಕಾಯುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು‌ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 41 ಕಾರ್ಮಿಕ ದಿನಾಚರಣೆಗೆ ಚಾಲನೆ‌ ನೀಡಿ ಮಾತನಾಡಿದರು.
ಕಾರ್ಮಿಕ ಸಂಘಟನೆ ಒಗ್ಗೂಡಬೇಕಿದೆ. ಮೇ 01 ಕಾರ್ಮಿಕ ಶಕ್ತಿ ಪ್ರದರ್ಶನಬೇಕಿದೆ. ಕಾರ್ಮಿಕರನ್ನು ಸರ್ಕಾರ ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿದೆ. ಜನಸಾಮಾನ್ಯರಿಗೆ ಕೈಹಸ್ತ ನೀಡುವ ಸರ್ಕಾರ ಇಂದು ಇಲ್ಲವಾದಿದೆ. 45ಕೋಟಿ ಕಾರ್ಮಿಕ ಹಿತ ಕಾಯುವಲ್ಲಿ ವಿಫಲ ಕಾರ್ಮಿಕರ ಬದುಕು ಅತಂತ್ರದಲ್ಲಿದೆ. ಎಂಟು ವರ್ಷಗಳಿಂದ ಅಧಿಕಾರ ನಡೆಸುವ ಸರ್ಕಾರ ಜನರವದಿಕ್ಕು ತಪ್ಪಿಸುತ್ತಿದೆ. ನೂರಾರು ರೈತರು ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆಸಿದರೂ ಯಾರೂ ಕಿವಿಗೊಡಲಿಲ್ಲ. ಜೀತ ಮಾಡುವ ಜನರಿಗೆ ಭೂಮಿ ನೀಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಇಂದು ಶ್ರೀಮಂತರ ಪರವಾದ ಆಡಳಿತ ಪ್ರಾರಂಭವಾಗಿದೆ ಇದನ್ನು ವಿರೋಧಿಸಲು ಇಂತಹ ಕಾರ್ಮಿಕ ಸಂಘಟನೆ ಅಗತ್ಯವಾಗಿ ಬೇಕು ಎಂದರು.
ಸಂಘಟಕ ಜಾಫರ್ ಶರೀಫ್ ಮಾತನಾಡಿ, ಕಾರ್ಮಿಕ ಹೋರಾಟಕ್ಕೆ ಅಡಿಪಾಯ ಹಾಕಿದ್ದು ಚಳ್ಳಕೆರೆ ಚಿತ್ರದುರ್ಗ, ಕಾರ್ಮಿಕರ ಕಲ್ಯಾಣಕ್ಕೆ ಉದ್ಯಮಿಗಳ ಜೊತೆಯಲ್ಲಿ ಹೋರಾಟ ಮಾಡಿದ ಸಂಘಟನೆ ಎಐಟಿಯುಸಿ ಸಂಘಟನೆ. ಕಾರ್ಮಿಕರ ಮೇಲಿನ ದಬ್ಬಾಳಿಕೆ ತಡೆಯಲು ಎಲ್ಲರೂ ಹೊಂದಾಗಿ. ಕಾರ್ಮಿಕ ಹಕ್ಕು ಕಸಿದಿಕೊಳ್ಳುವ ಕೆಲಸ ನರೇಂದ್ರ ಮೋದಿ ಮಾಡಿದ್ದಾರೆ. ಕಾರ್ಮಿಕ ತೇಜೋಓದೆ ಮಾಡು ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಪ್ರತಿಯೊಂದು ಕಾರ್ಮಿಕ ಬದುಕಿನ ಕೇಂದ್ರ ಸರ್ಕಾರ ಕಾಯ್ದೆ ಮೂಲಕ ತೆಗೆದು ಹಾಕಿ ದಿವಾಳಿ ಮಾಡಿದೆ. ದೊಡ್ಡ ದೊಡ್ಡ ಕಂಪನಿಗಳ ಖಾಸಗೀಕರಣ, ದೊಡ್ಡವರೊಂದಿಗೆ ಶಾಮಿಲಾಗಿ ಕಾರ್ಮಿಕಯನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಎಲ್ಲಾ ಆಸ್ತಿಯನ್ನು ಖಾಸಗೀಕರಣ ಮಾಡಿ ದೇಶ ಮಾರಾಟ ಮಾಡುತ್ತಿದ್ದಾರೆ. ಕಾರ್ಮಿಕರ ಹಿತಬೇಕಿಲ್ಲ, ಬಂಡವಾಳ, ರಿಯಾಲಯನ್ಸ್ ಕಂಪನಿಬೇಕಿದೆ. ಸರ್ಕಾರ ಯಾವುದೇ ಸೊತ್ತು ಉಳಿಸಲು ರಾಜ್ಯ, ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಕೇವಲ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗಿದೆ.
ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಮಾತನಾಡಿ, ಕಾರ್ಮಿಕ ಕಲ್ಯಾಣಯಾವ ಸರ್ಕಾರಗಳು ಬಯಸಲಿಲ್ಲ, ನಮ್ಮ ಹೋರಾಟದಿಂದ ಮಾತ್ರ ನಾವು ಸೌಲಭ್ಯ ಪಡೆಯಲು ಸಾಧ್ಯ. ಕಾರ್ಮಿಕರ ಕಲ್ಯಾಣ ರಾಜ್ಯ, ಕೇಂದ್ರ ಸರ್ಕಾರಗಳು ಮಾಡದೆ. ಖಾಸಗೀಕರಣ ಮಾಡುವುದೇ ಹೆಚ್ಚಾಗಿ ಬೇಕಾಗಿದೆ ಸರ್ಕಾರಕ್ಕೆ ಯಾವುದೇ ಬಡವರ ಬಗ್ಗೆ ಕಾಳಜಿ ಇಲ್ಲವಾಗಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿಯಾದಲ್ಲಿ ಕಾರ್ಮಿಕ ವರ್ಗ ಬೀದಿಗೆ ಬರಲಿದೆ ಎಂದರು.
ನಗರಸಭೆ ಹನುಮಂತರೆಡ್ಡಿ, ಕಾರ್ಯದರ್ಶಿ ಉಳ್ಳಾರ್ತಿ ಕರಿಯಣ್ಣ, ತಿಪ್ಪೇರುದ್ರಪ್ಪ, ಕಿಸಾನ್ ಸಭಾ ಅಧ್ಯಕ್ಷ ತಿಪ್ಪೇಸ್ವಾಮಿ, ಪಟೇಲ್ ಸಿ.ವೈ.ಶಿವರುದ್ರಪ್ಪ, ನಗರಸಭೆ ಅಧ್ಯಕ್ಷೆ ಸುಮ್ಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಕವಿತಾಬೋರಯ್ಯ, ಪ್ರಭುದೇವ ಮುಂತಾದವರು.

 

 

[t4b-ticker]

You May Also Like

More From Author

+ There are no comments

Add yours