ಚಿತ್ರದುರ್ಗ ಟೌನ್ ಕೋ ಅಪರೇಟಿವ್ ಸೊಸೈಟಿಗೆ ಶತಕದ ಸಂಭ್ರಮ

 

 

 

 

ಚಿತ್ರದುರ್ಗ,ಡಿ.08: 1912 ನೇ ಸಾಲಿನಲ್ಲಿ ಕೇವಲ 190 ಸದಸ್ಯರಿಂದ ಪ್ರಾರಂಭಗೊಂಡ ಚಿತ್ರದುರ್ಗ ಟೌನ್ ಕೋ ಅಪರೇಟಿವ್ ಸೊಸೈಟಿಯು ಇಂದು ಶತಮಾನೋತ್ಸವವನ್ನು ಆಚರಿಸುತ್ತಿದೆ ಎಂದು ಸಂಘದ ಅಧ್ಯಕ್ಷ ನಿಶಾನಿ ಎಂ.ಜಯ್ಯಣ್ಣ ಹೇಳಿದರು.
ನಗರದ ಹೊಟೇಲ್ ಐಶ್ವರ್ಯದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,
ದಿ.ಎಂ.ಕೆ.ತಿರುಮಲಚಾರ್ ಅವರು ಸ್ಥಾಪನೆ ಮಾಡಿದ ಚಿತ್ರದುರ್ಗ ಟೌನ್ ಕೋ ಅಪರೇಟಿವ್ ಸೊಸೈಟಿಯು ಮೊದಲು ಕೇವಲ 4580 ರೂ.ಗಳ ಷೇರು ಬಂಡವಾಳದಿಂದ ಪ್ರಾರಂಭಗೊಂಡಿದ್ದು, ನಿಟ್ಟೂರು ಶ್ರೀನಿವಾಸ ಅಯ್ಯಂಗರ್, ಸಿ.ಕೆ.ಜಾಫರ್ ಷರೀಪ್, ಹನುಮಂತ ರೆಡ್ಡಿ ಸೇರಿದಂತೆ ಆನೇಕ ಗಣ್ಯ ವ್ಯಕ್ತಿಗಳು ಸದಸ್ಯರಾಗುವ ಮೂಲಕ ಸೊಸೈಟಿಯನ್ನು ಪ್ರಾರಂಭಿಸಿ ಮುನ್ನಡೆಸಿಕೊಂಡು ಬಂದಿದ್ದು, 1936 ರಲ್ಲಿ ತಾಲ್ಲೂಕು ನಗರದ ಹೃದಯ ಭಾಗದಲ್ಲಿ ನಿವೇಶನ ಪಡೆದು ಸಣ್ಣ ಕಟ್ಟಡವನ್ನು ಕಟ್ಟಿಕೊಂಡು ಬೆಳೆಯುತ್ತಾ ಇಂದು ಸುಮಾರು 16 ಮಳಿಗೆಗಳನ್ನು ಹೊಂದಿ ಸೊಸೈಟಿಗೆ ಬೇಡ ಗೆ ರೂಪದಲ್ಲಿ ಆಧಾಯವನ್ನು ತಂದು ಕೊಡುತ್ತಿದೆ ಎಂದರು.
ಮೊದಲು ಸಾಲದ ಸುಳಿಯಲ್ಲಿ ಸಿಲುಕಿದ್ದ ವೇಳೆಯಲ್ಲಿ ಸೊಸೈಟಿಯ ಅಧ್ಯಕ್ಷಗಿರಿಯನ್ನು ಪಡೆದ ನಾನು ಡಿಸಿಸಿ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದು ಸೊಸೈಟಿ ಹೆಳ್ಗೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಯಿತು. ನಂತರ ದಿನಗಳಲ್ಲಿ ಸಂಘಕ್ಕೆ ಹೆಚ್ಚು ಸದಸ್ಯರನ್ನು ಬರಮಾಡಿಕೊಂಡು ಇಂದು ಅತಿ ಹೆಚ್ಚು 2562 ಸದಸ್ಯರನ್ನು ಹೊಂದಿ, ಷೇರು ಬಂಡವಾಳ ರೂ. 38.97 ಲಕ್ಷ, ಠೇವಣಿ ರೂ. 362.62 ಲಕ್ಷ, ಸಾಲ ಮತ್ತು ಮುಂಗಡ ರೂ. 148.71 ಲಕ್ಷ ರೂ.ಗಳನ್ನು ನೀಡಿ ಇಂದು ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ವಿವರಿಸಿದರು.
2018 ರಂದು ನಡೆದ 65ನೇ ಆಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಅತ್ಯುತ್ತಮ ಸಹಕಾರ ಸಂಘ ಎಂದು ಗೌರವಿಸಿ ಪ್ರಶಸ್ತಿಯನ್ನು ನೀಡಿದೆ. ಸಾಕಷ್ಟು ಸೊಸೈಟಿಗಳು ಸಾಲದ ಸುಳಿಯಲ್ಲಿ ಸಿಲುಕಿ ಬಾಗಿಲು‌ ಮುಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲೇ 2 ನೇ ಆರ್ಥಿಕ ಸ್ಥಿತಿಯ ಸಬಲದಿಂದ ಯಶಸ್ವಿಯಾಗಿ ನಡೆಯುತ್ತಿರುವ ಸೊಸೈಟಿ ನಮ್ಮದಾಗಿದೆ ಎಂದು ಹೇಳಿದ ಅವರು, ಸಂಘದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚಿಗೆ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಮತ್ತು ಸಂಘವು ಸಂಪೂರ್ಣ ಕಂಪ್ಯೂಟರಿಕರಣ ಗಳಿಸಲಾಗಿದೆ. ಸದಸ್ಯರಿಗೆ ವಾಹನ ಸಾಲ, ಜಾಮೀನು ಸಾಲ, ಆಧಾರ ಸಾಲ ನೀಡುತ್ತಿದ್ದು, ಇದರೊಂದಿಗೆ ಇ-ಪೇಮೆಂಟ್, ಇ-ಸ್ಟಾಂಪ್, ಪಿಗ್ಗಿ ವ್ಯವಹಾರ ಸಹ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ 10 ರಂದು ತಿರುಮಲ ಕಲ್ಯಾಣ ಮಂಟಪದಲ್ಲಿ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸಂಸ್ಥಾಪಕರ ಭಾವಚಿತ್ರ ಅನಾವರಣ ಮಾಡಲಿದ್ದು, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಘುಮೂರ್ತಿ ಸೇರಿದಂತೆ ಸಾಕಷ್ಟು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು‌.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸೂರ್ಯಪ್ರಕಾಶ್, ವ್ಯವಸ್ಥಾಪಕ ಕಾರ್ಯದರ್ಶಿ ನಹೀಮ್ ಅಹ್ಮದ್, ನಿರ್ದೇಶಕರಾದ ಡಾ.ರಹಮತ್ ಉಲ್ಲಾ, ಪುಷ್ಪವಲ್ಲಿ, ಶ್ರೀನಿವಾಸ್ ಮೂರ್ತಿ, ಚಿಕಗಕಣ್ಣಯ, ಚಂಪಕ, ನಾಗರಾಜ್ ಬೇದ್ರೆ ಸೇರಿದಂತೆ ಇತರರು ಹಾಜರಿದ್ದರು.

 

 

[t4b-ticker]

You May Also Like

More From Author

+ There are no comments

Add yours