ಬಿಜೆಪಿ ಸಂಸದನಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ?

 

 

 

 

ಬೆಂಗಳೂರು: ಬಿಜೆಪಿಗೆ ಬಿಗ್ ಶಾಕ್ ಕೊಡಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ದೊಡ್ಡ ವಿಕೆಟ್ ಉರುಳಿಸೋಕೆ ಪ್ಲಾನ್ ಮಾಡಿದೆ. ಮಗ ಶರತ್ ಬಚ್ಚೇಗೌಡ ಗೆಲುವಿಗೆ ಸಂಸದ ಬಚ್ಚೇಗೌಡ ಪಣ ತೊಟ್ಟಿದ್ದು, ಪುತ್ರನ ಪರ ಭರ್ಜರಿಯಾಗಿ ಪ್ರಚಾರ ನಡೆಸ್ತಿದ್ದಾರೆ.

 

 

ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಾಂಗ್ರೆಸ್​, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡರಿಂದ ರಾಜೀನಾಮೆ ಕೊಡಿಸಲು ಮುಂದಾಗಿದೆ ಎನ್ನಲಾಗ್ತಿದೆ. ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆ ‘ಕೈ’ ಅಭ್ಯರ್ಥಿ ಆಗಿದ್ದಾರೆ. ಕಳೆದ ಉಪ ಚುನಾವಣೆಯಲ್ಲೂ ಕಾಂಗ್ರೆಸ್​ ಬೆಂಬಲದಿಂದ ಶರತ್ ಗೆದ್ದಿದ್ದರು.

ಎಂಟಿಬಿ ನಾಗರಾಜ್ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಹೋದ ನಂತರ ಹೊಸಕೋಟೆಗೆ ಉಪಚುನಾವಣೆ ಎದುರಾಗಿತ್ತು. ಈ ಚುನಾವಣೆಯಲ್ಲಿ ಸ್ವಾಭಿಮಾನದ ಅಸ್ತ್ರ ಪ್ರಯೋಗ ಮಾಡಿ ಎಂ.ಟಿ.ಬಿ. ನಾಗರಾಜ್​ರನ್ನ ಸೋಲಿಸಿದ್ದರು. ನಂತರ ಶರತ್ ಬಚ್ಚೇಗೌಡ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದರು. ಉಪಚುನಾವಣೆಯಲ್ಲಿ ಪುತ್ರನ ಪರ ಕೆಲಸ ಮಾಡಿರುವ ಆರೋಪ ಬಚ್ಚೇಗೌಡರ ಮೇಲಿದೆ. ಶರತ್ ಪರ ಕೆಲಸ ಮಾಡಿ ಬಚ್ಚೇಗೌಡ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂಬ ಆರೋಪವನ್ನು ಎಂಟಿಬಿ ನಾಗರಾಜ್ ಬೆಂಬಲಿಗರು ಮಾಡುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours