ಸ್ವಾವಲಂಬಿಗಳಾಗುವ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಿ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ಸ್ವಾವಲಂಬಿಗಳಾಗುವ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಿ ಎಂದು ತಹಸೀಲ್ದಾರ್ ರಘುಮೂರ್ತಿ ಹೇಳಿದರು.

 

 

ಇಂದು ಅಬ್ಬೇನಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಸ್ವಯಂ ಉದ್ಯೋಗ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವಿಯಂತೆ ಪರಿಶೀಲಿಸಿ ಮಾತನಾಡಿದರು.

ಸರ್ಕಾರಿ ಗೋಮಾಳ ಮತ್ತು ಸರ್ಕಾರಿ ಒಡೆತನದ ಭೂಮಿಯಲ್ಲಿ ಯೋಜನೆಯ ಅಡಿ ಕಾಮಗಾರಿ ಮಾಡಲು ಇನ್ನು ವಿಫಲವಾದ ಅವಕಾಶಗಳಿದ್ದು ಈ ಬಗ್ಗೆ ಸ್ಥಳೀಯರು ತಕರಾರು ಮಾಡುತ್ತಿದ್ದು ಇದನ್ನು ಬಗೆಹರಿಸುವಂತೆ ಕೋರಿದ್ದರ ಮೇರೆಗೆ ಇಂದು ಸ್ಥಳಕ್ಕೆ ಆಗಮಿಸಿ ಈ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ  ಕಾರ್ಮಿಕರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆ ಅಡಿ ಸ್ವಯಂ ಉದ್ಯೋಗ ವನ್ನ ಸ್ಥಳೀಯವಾಗಿ ಮಾಡಲು ಹೆಚ್ಚಿನ ಅವಕಾಶವಿದೆ ಸ್ಮಶಾನಗಳು ಶಾಲಾ ಕಾಂಪೌಂಡ್ ಗಳು ಜಮೀನಿನಲ್ಲಿ ಒಡ್ದು ಗಳು ಮತ್ತು ಅರಣ್ಯಯಿಕರಣದಂತ ಹೆಚ್ಚೆಚ್ಚು ಕೆಲಸಗಳನ್ನು ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಂಡು ಈ ಮೂಲಕ ಗ್ರಾಮದ ಯುವಕ ಯುವತಿಯರು ಸ್ವಾವಲಂಬನೆಯನ್ನು ಕಂಡುಕೊಂಡು ಸ್ವಾಭಿಮಾನದ ಜೀವನವನ್ನು ನಡೆಸಬೇಕು ಪದವಿ ಪಡೆದಂತ 1000 ಯುವಕ-ಯುವತಿಯರಿಗೆ ಉಚಿತವಾಗಿ ಆನ್ಲೈನ್ ತರಬೇತಿಯನ್ನು ಇದೇ ತಿಂಗಳ 21ರಿಂದ ಪ್ರಾಯೋಜಕತ್ವದ ಮೂಲಕ ಸ್ಥಳೀಯ ಶಾಸಕರ ಮತ್ತು ಮಂತ್ರಿಗಳ ನೇತೃತ್ವದಲ್ಲಿ ತಾಲೂಕಿನ ವಿದ್ಯಾರ್ಥಿ ಯುವಕ-ಯುವತಿಯರಿಗೆ ನೀಡಲಾಗುವುದು. ಉಳಿದಂತೆ ಕಂದಾಯ ಇಲಾಖೆಯಿಂದ ಕೊಡಮಾಡುವ ಎಲ್ಲಾ ಸವಲತ್ತುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಿದೆ ವಿಭಾಗದ ಎಲ್ಲ ಜನರು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು ನಾಯಕನಟಿ ಪೊಲೀಸ್ ಉಪನಿರೀಕ್ಷಕ ರಾದ ಶಿವರಾಜ್ ಉಪ ತಹಶೀಲ್ದಾರ್  ಚೇತನ್ ಕುಮಾರ್ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours