ಕೊಳವೆಬಾವಿ ಕೊರೆಸಲು ಅನುಮತಿ ಕಡ್ಡಾಯ

 

 

 

 

ಚಿತ್ರದುರ್ಗ, ಆ.15: ರಾಜ್ಯದಲ್ಲಿ 45 ತಾಲ್ಲೂಕುಗಳನ್ನು ಅಂತರ್ಜಲ ಅತಿಬಳಕೆ ತಾಲ್ಲೂಕುಗಳೆಂದು ಅಧಿಸೂಚಿಸಲಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳನ್ನು ಅಂತರ್ಜಲ ಅತಿಬಳಕೆ ತಾಲ್ಲೂಕುಗಳೆಂದು ಅಧಿಸೂಚಿಸಲಾಗಿದೆ. ಈ ತಾಲ್ಲೂಕುಗಳಲ್ಲಿ ಕರ್ನಾಟಕ ಅಂತರ್ಜಲ ಅಧಿನಿಯಮ-2011ರನ್ವಯ ಯಾವುದೇ ಉದ್ದೇಶಕ್ಕಾಗಿ ತೆರೆದ ಬಾವಿ, ಕೊಳವೆಬಾವಿ ಕೊರೆಸಲು ಮುಂಚಿತವಾಗಿ ಜಿಲ್ಲಾ ಅಂತರ್ಜಲ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ಪ್ರಸ್ತುತವಾಗಿ ಬಾವಿ, ಕೊಳವೆಬಾವಿಯಿಂದ ಅಂತರ್ಜಲ ಬಳಸುತ್ತಿರುವವರು ಜಿಲ್ಲಾ ಅಂತರ್ಜಲ ಸಮಿತಿಗೆ ನಿಗದಿತ ಶುಲ್ಕ ಭರಿಸಿ ನೋಂದಣಿ ಮಾಡಿಸಬೇಕು. ಸಾರ್ವಜನಿಕರು ಹೊಸ ಕೊಳವೆಬಾವಿ ಕೊರೆಸಲು ಸ್ಥಳಾಯ್ಕೆಗಾಗಿ ಅರ್ಜಿಯನ್ನು ಸೇವಾಸಿಂಧು ಮೂಲಕ ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ಚಿತ್ರದುರ್ಗ, ದೂರವಾಣಿ: 08194-222218 ಗೆ ಸಂಪರ್ಕಿಸಬಹುದು.

 

 

[t4b-ticker]

You May Also Like

More From Author

+ There are no comments

Add yours