ಭಾರತ್ ಜೋಡೋ ಪಾದಯಾತ್ರೆ: ಸಂಚಾರ ಮಾರ್ಗ ಬದಲಾವಣೆ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ)ಅಕ್ಟೋಬರ್.09:
ಸಂಸದ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಇದೇ ಅಕ್ಟೋಬರ್ 10 ರಿಂದ 14 ರವೆರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಾದುಹೋಗಲಿದೆ. ಈ ಸಂದರ್ಭದಲ್ಲಿ ಭದ್ರತೆ ಹಾಗೂ ಸಾರ್ವಜನಿಕರ ಹಿತದೃಷ್ಠಿ ಪಾದಯಾತ್ರೆ ಸಾಗುವ ಮಾರ್ಗದ ರಸ್ತೆಗಳ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 10 ಹಾಗೂ 11 ರಂದು ಹುಳಿಯಾರು ಗಡಿಯಿಂದ ಚಳ್ಳಕೆರೆ ಗಡಿವರೆಗಿನ, ದಿನಾಂಕ 12 ಹಾಗೂ 14 ರಂದು ಚಳ್ಳಕೆರೆಯಿಂದ ಬಳ್ಳಾರಿ ಗಡಿಯವರೆಗೆ ಮಧ್ಯದ ರಾಷ್ಟ್ರೀಯ ಹೆದ್ದಾರಿ 150(ಎ) ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ.
ಅ.10 ರಂದು ಹುಳಿಯಾರು ಹಿರಿಯೂರು ಮಧ್ಯ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಬಳಸಿ ಶಿರಾ ಮಾರ್ಗವಾಗಿ ಸಂಚರಿಸುವದು. ಹಿರಿಯೂರು ಮತ್ತು ಚಳ್ಳಕರೆ ಮಧ್ಯ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಬಳಸಿ ಚಿತ್ರದುರ್ಗ ಮಾರ್ಗವಾಗಿ ಸಂಚರಿಸುವುದು. ಅ. 11 ರಂದು ಚಳ್ಳಕೆರೆ ಹಿರಿಯೂರು ಮಾರ್ಗವಾಗಿ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಬಳಸಿ ಚಿತ್ರದುರ್ಗ ಮಾರ್ಗವಾಗಿ ಸಂಚರಿಸುವುದು.  ಅ.12 ರಂದು ಹಿರಿಯೂರು-ಚಳ್ಳಕೆರೆ-ಮೊಳಕಾಲ್ಮುರು ಮೂಲಕ ಬಳ್ಳಾರಿ ಕಡೆ ಹೋಗುವ ವಾಹನಗಳು ಹಿರಿಯೂರು, ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆಗೆ ಕಡೆಗೆ ಚಲಿಸುವುದು. ಬಳ್ಳಾರಿಯಿಂದ ಮೊಳಕಾಲ್ಮೂರು ಮಧ್ಯ ಸಂಚರಿಸುವ ವಾಹನಗಳನ್ನು ಹೊರತು ಪಡಿಸಿ, ಚಳ್ಳಕೆರೆ ಕಡೆಗೆ ಚಳಿಸುವ ವಾಹನಗಳು, ಬಳ್ಳಾರಿಯಿಂದ ಬೆಂಗಳೂರಿನ ಕಡೆಗೆ ಚಲಿಸುವ ವಾಹನಗಳು ಹೊಸಪೇಟೆ, ಚಿತ್ರದುರ್ಗ ಅಥವಾ ಆಂದ್ರ ಪ್ರದೇಶದ ರಾಜ್ಯದ ಅನಂತಪುರ ಮಾರ್ಗವಾಗಿ ಚಲಿಸಬೇಕು.  ಅ. 14 ರಂದು ಹಿರಿಯೂರು, ಚಳ್ಳಕೆರೆ ಮೂಲಕ ಬಳ್ಳಾರಿ ಕಡೆ ಹೋಗುವ ವಾಹನಗಳು ಹಿರಿಯೂರು, ಚಿತ್ರದುರ್ಗ, ಹೊಸಪೇಟೆ ಮಾರ್ಗದಲ್ಲಿ ಚಲಿಸುವುದು. ಬಳ್ಳಾರಿಯಿಂದ ಮೊಳಕಾಲ್ಮೂರು, ಚಳ್ಳಕೆರೆ ಕಡೆಗೆ ಚಲಿಸುವ ವಾಹನಗಳು, ಬಳ್ಳಾರಿಯಿಂದ ಬೆಂಗಳೂರಿಗೆ ಚಲಿಸುವ ವಾಹನಗಳು, ಹೊಸಪೇಟೆ, ಚಿತ್ರದುರ್ಗ ಅಥವಾ ಆಂದ್ರ ಪ್ರದೇಶ ರಾಜ್ಯದ ಅನಂತಪುರ ಮಾರ್ಗವಾಗಿ ಚಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

 

 

[t4b-ticker]

You May Also Like

More From Author

+ There are no comments

Add yours