ಭಾರತ್ ಜೋಡೋ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಗೆ ಅ:10 ರಂದು ಎಂಟ್ರಿ, ರೂಟ್ ಮ್ಯಾಪ್ ಹೀಗಿದೆ.

 

 

 

 

ಭಾರತ್ ಜೋಡೋ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ*
*ದಿನಾಂಕ:10-10-2022 ಸೋಮವಾರ 11 ನೇ ದಿನದ ಪಾದಯಾತ್ರೆ*
ಹಿರಿಯೂರು ಸಂಜೆ 4 ಗಂಟೆಗೆ ತಾಹಾ ಪ್ಯಾಲೇಸ್ ಬಳಿ ಆಗಮನ, ಸಂಜೆ 7 ಗಂಟೆಗೆ ಬಾಳೇನಹಳ್ಳಿ ಹರ್ತಿಕೋಟೆ ಗ್ರಾಮದಲ್ಲಿ ತಂಗುವುದು.
*ದಿನಾಂಕ:11-10-2022 ಮಂಗಳವಾರ 12 ನೇ ದಿನದ ಪಾದಯಾತ್ರೆ*
ಬೆಳಗ್ಗೆ 6.30 ಗಂಟೆಗೆ ಹರ್ತಿಕೋಟೆ ಗ್ರಾಮದಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆಗೆ ಹೋಟೆಲ್ ಚೇತನ್ ಹತ್ತಿರ, ಸಾಣಿಕೆರೆಯಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಸಾಣಿಕೆರೆಯಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಎಸ್.ಆರ್.ಎಸ್ ಶಾಲೆ ಆವರಣ ಚಳ್ಳಕೆರೆ ಟೌನ್ ಇಲ್ಲಿ ತಂಗುವುದು.
 *ದಿನಾಂಕ:12-10-2022 ಬುಧವಾರ 13 ನೇ ದಿನದ ಪಾದಯಾತ್ರೆ*
ಬೆಳಗ್ಗೆ 6.30 ಗಂಟೆಗೆ ಎಸ್.ಆರ್.ಎಸ್ ಶಾಲೆ, ಚಳ್ಳಕೆರೆ ಟೌನ್‌ನಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್ ಇಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್‌ನಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಹಿರೇಹಳ್ಳಿ ಟೋಲ್ ಪ್ಲಾಜಾ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಶಾಲೆ, ಹಿರೇಹಳ್ಳಿ, ಮೊಳಕಾಲ್ಮೂರು ಕ್ಷೇತ್ರ ಇಲ್ಲಿ ತಂಗುವುದು.
 *ದಿನಾಂಕ:13-10-2022 ಗುರುವಾರ 14 ನೇ ದಿನದ ಪಾದಯಾತ್ರೆ*
ಬೆಳಗ್ಗೆ 6.30 ಗಂಟೆಗೆ ಬಿ.ಜಿ.ಕೆರೆ ಅಂಡರ್‌ಪಾಸ್, ಬೊಮ್ಮಗೊಂಡನಕೆರೆ ಇಲ್ಲಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆ ಕೋನಸಾಗರ ಗ್ರಾಮದ ಹತ್ತಿರ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಕೋನಸಾಗರದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಮೊಳಕಾಲ್ಮುರು ಕಾಂಗ್ರೆಸ್ ಕಛೇರಿಯವರೆಗೆ ನಂತರ ರಾಂಪುರ ಹತ್ತಿರ ತಂಗುವುದು.
 *ದಿನಾಂಕ:14-10-2022 ಶುಕ್ರವಾರ 15 ನೇ ದಿನದ ಪಾದಯಾತ್ರೆ*
ಬೆಳಗ್ಗೆ 6.30 ಗಂಟೆಗೆ ರಾಂಪುರದಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆ ಕುಂಟುಮಾರಮ್ಮ ದೇವಸ್ಥಾನ, ಟೋಲ್ ಹತ್ತಿರ, ಆಂದ್ರ ಪ್ರದೇಶ ದಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಕುಂಟುಮಾರಮ್ಮ ದೇವಸ್ಥಾನದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಹೆಚ್.ಪಿ ಪೆಟ್ರೋಲ್ ಪಂಪ್ ಹತ್ತಿರ, ಓಬಳಾಪುರಂ ಗ್ರಾಮ, ಹಲಕುಂದಿ ಮಠದ ಹತ್ತಿರ, ಬಳ್ಳಾರಿ ಜಿಲ್ಲೆಯಲ್ಲಿ ತಂಗುವುದು.
[t4b-ticker]

You May Also Like

More From Author

+ There are no comments

Add yours