ರಾಷ್ಟ್ರೀಯ ಯೋಜನೆಗಳಿಗೆ ಭಿಕ್ಷೆ ಬೇಡಿ ಕಾಮಗಾರಿ ಮಾಡುವುದು ಬೇಡ:ಸಂಸದ ನಾರಾಯಣಸ್ವಾಮಿ.

 

 

 

 

ಚಿತ್ರದುರ್ಗ ಮಾ. ೯
ರಾಷ್ಟ್ರೀಯ ಯೋಜನೆಗಳಿಗೆ ಭಿಕ್ಷೆ ಬೇಡಿ ಕಾಮಗಾರಿ ಮಾಡುವುದು ಬೇಡ, ಕಾನೂನು ಪ್ರಕಾರ ಯೋಜನೆಗಳನ್ನು ಮಾಡಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.

 

 

ನಗರದ ಭದ್ರ ಮೇಲ್ದಂಡೆ ಯೋಜನಾ ವಲಯ ಕಚೇರಿಯಲ್ಲಿ ಇಂದು ಇಂದು ಭದ್ರ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರಾಷ್ಟ್ರೀಯ ಯೋಜನೆಗಳು ಬೇಗ ಆಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿರುತ್ತದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ಮಾಡಬೇಕು. ಅದನ್ನು ಬಿಟ್ಟು, ಭೂಸ್ವಾಧೀನ ಆಗಿಲ್ಲ. ಹಣ ಇಲ್ಲ ಎಂದು ಇಲ್ಲದ ಸಬೂಬುಗಳನ್ನು ಹೇಳುತ್ತಾ ಕೂರುವುದು ಬೇಡ. ಕಾನೂನು ಪ್ರಕಾರ ಕಾಮಗಾರಿಯನ್ನು ಮಾಡಿ. ಇದಕ್ಕೆ ಯಾರಿ ಅಡ್ಡಿಪಡಿಸುತ್ತಾರೆ. ಅವರ ಬಗ್ಗೆ ಮಾಹಿತಿ ನೀಡಿ, ನಾನು ಬಗೆಹರಿಸುತ್ತೇನೆ ಎಂದರು.
ಜಿಲ್ಲೆಗೆ ಭದ್ರ ಮೇಲ್ದಂಡೆ ಯೋಜನೆಯ ನೀರು ಬರಲಿದೆ ಎಂದು ಜನರಿಗೆ ಹೇಳಿ ಕಾಮಗಾರಿ ಪ್ರಾರಂಭಗೊಂಡು ೧೩ ವರ್ಷಗಳ ಕಳೆದಿದೆ.ಆದರೂ ಕೂಡ ಜನರಿಗೆ ನೀರು ಕೊಡಲು ಆಗಿಲ್ಲ. ಎಂದರೆ ಜನತೆ ನಮ್ಮನ್ನು ದೂಷಿಸುತ್ತಾರೆ. ೧೩ ವರ್ಷದಿಂದ ಕಾಲುವೆ, ಕೆನಾಲ್ ನಿರ್ಮಾಣ ಎಂದು ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ. ಇನ್ನು ತುಂಗಾದಿಂದ ಭದ್ರಕ್ಕೆ ನೀರು ತರುವುದು ಯಾವಾಗ ? ಎಂದು ಅಧಿಕಾರಿಗಳ ಕಾರ್ಯದ ಬಗ್ಗೆ ಕಿಡಿಕಾರಿದ ಸಂಸದ ನಾರಾಯಣಸ್ವಾಮಿ ಡಿಸೆಂಬರ್ ಒಳಗೆ ಎಲ್ಲಾ ಕೆನಾಲ್ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ತರೀಕೆರೆ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಮಾತನಾಡಿ, ಅರಣ್ಯ ಇಲಾಖೆಯ ಅಧಿಕಾರಿಗಳು ಭೂಸ್ವಾಧೀನ ಕಾರ್ಯಕ್ಕೆ ಸ್ಪಂಧಿಸುತ್ತಿಲ್ಲ ಎಂದು ಮಾಹಿತಿ ನೀಡಿದಾಗ, ಅರಣ್ಯ ಇಲಾಖೆಯ ಅಧಿಕಾರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡು, ಕೂಡಲೇ ಭೂಸ್ವಾಧೀನ ಕಾರ್ಯಕ್ಕೆ ಸ್ಪಂಧಿಸಬೇಕು ಎಂದು ಸೂಚಿಸಿದರು. ಅಲ್ಲದೆ ಏನಾದರೂ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಕಾಮಗಾರಿ ಯಾವುದೇ ಅಡ್ಡಿ ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಿ ವಿ ಸಾಗರಕ್ಕೆ ತುಮಕೂರು ಶಾಖಾ ನಾಲೆಯಿಂದ ನೀರು ಬರಬೇಕು ಆದರೆ ತರಿಕೆರೆ ಮತ್ತು ಕಡೂರು ಭಾಗದಲ್ಲೇ ಇನ್ನೂ ಭೂಸ್ವಾಧೀನ ಕಾರ್ಯ ಬಾಕಿ ಇದೆ. ಆದನ್ನು ಬೇಗ ಪೂರ್ಣಮಾಡಿ ವಿ ವಿ ಸಾಗರಕ್ಕೆ ನೀರುಕೊಡುವ ಕೆಲಸ ಮಾಡಿ, ಇಲ್ಲವಾದರೆ ರೈತರು ಆಕ್ರೋಶಗೊಳ್ಳುತ್ತಾರೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಭದ್ರ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ರಾಘವನ್, ಅಪರ ಜನರ ಜಿಲ್ಲಾಧಿಕಾರಿ ಬಾಲಕೃಷ್ಣ, ಶಿವಪ್ರಕಾಶ್, ಮಧುಕುಮಾರ್, ಹರಿಶಿಲ್ಪಾ ಸೇರಿದಂತೆ ಇತರರು ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours