ಶೀಘ್ರವೇ ನೂತನ ಲೋಕಾಯುಕ್ತರ ನೇಮಕ: ಸಿಎಂ ಬಸವರಾಜ್ ಬೊಮ್ಮಾಯಿ.

 

 

 

 

ರಾಜ್ಯ ಸುದ್ದಿ: ರಾಜ್ಯದಲ್ಲಿ  ನೂತನ ಲೋಕಾಯುಕ್ತರನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಸಿಎಂ  ಬಸವರಾಜ ಬೊಮ್ಮಾಯಿ ತಿಳಿಸಿದರು.

 

 

ವಿಧಾನ ಪರಿಷತ್ ಚುನಾವಣೆಯ ಪ್ರಚಾರಕ್ಕಾಗಿ ಇಂದು ಮೈಸೂರಿಗೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿ
ಮಾಧ್ಯಮದವರ ಜೊತೆ  ಮಾತನಾಡಿ ಲೋಕಾಯುಕ್ತರ ನೇಮಕಾತಿಗೆ  ಸಂಬಂಧಿಸಿದಂತೆ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಆದಷ್ಟು ಬೇಗ ನೂತನ ಲೋಕಾಯುಕ್ತರನ್ನು ನೇಮಕ ಮಾಡಲಾಗುವುದು ಎಂದರು.

ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ಸೂಚನೆಯಂತೆ ಸರ್ಕಾರ ಲೋಕಾಯುಕ್ತ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸಿದೆ ಎಂದು ಅವರು ಹೇಳಿದರು.ತಮಿಳುನಾಡು ಅನಗತ್ಯ ಖ್ಯಾತೆಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಅನಗತ್ಯ ಖ್ಯಾತೆ ಮಾಡುತ್ತಿದೆ. ಅಲ್ಲಿನ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ಉಸ್ತುವಾರಿ ಪ್ರಾಧಿಕಾರಕ್ಕೆ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸರಿಯಲ್ಲ ಎಂದರು.ಕಾವೇರಿ ಉಸ್ತುವಾರಿ ಪ್ರಾಧಿಕಾರ ಸುಪ್ರೀಂಕೋರ್ಟ್‌ನ ಆದೇಶದಂತೆ ರಚನೆಯಾಗಿದೆ. ನ್ಯಾಯಾಲಯದ ತೀರ್ಪಿನಡಿಯಲ್ಲಿ ಯೋಜನೆಗಳು ಜಾರಿಯಾಗುತ್ತವೆಯೇ ಎಂಬುದನ್ನು ಪರಿಶೀಲಿಸುತ್ತದೆ. ತಮಿಳುನಾಡು ತನ್ನ ವ್ಯಾಪ್ತಿ ಮೀರಿ ಅರ್ಜಿ ಸಲ್ಲಿಸಿದೆ.
ಹೀಗೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೊಡುವ ಅಧಿಕಾರ ತಮಿಳುನಾಡಿಗಿಲ್ಲ ಎಂದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆಈಗಾಗಲೇ ೧೬-೧೭ ಸಭೆಗಳು ನಡೆದಿವೆ. ಹೀಗಿರುವಾಗ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಸುಪ್ರೀಂಕೋರ್ಟ್‌ಗೂ ಈ ಹಿಂದೆ ಅರ್ಜಿ ಸಲ್ಲಿಸಿದಾಗ ಕರ್ನಾಟಕ ಸುಪ್ರೀಂಕೊರ್ಟ್‌ನ ನೋಟಿಸ್‌ಗೆ ಸಮರ್ಪಕ ಉತ್ತರ ನೀಡಿತ್ತು ಎಂದರು.

[t4b-ticker]

You May Also Like

More From Author

+ There are no comments

Add yours