ಪ್ರಧಾನಿ ಮೋದಿ ಕಾರ್ಯ ಮೆಚ್ಚಿ ಬಿ.ಎಸ್.ಶಿವಪುತ್ರಪ್ಪ ಬಿಜೆಪಿ ಸೇರ್ಪಡೆ

 

 

 

 

ಚಳ್ಳಕೆರೆ-೨೩ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಆಡಳಿತದ ಬಗ್ಗೆ ಜನರಿಗೆ ಅರಿವಿದೆ. ಜನಪರ ಆಡಳಿತ ನೀಡುವ ಮೂಲಕ ವಿಶ್ವಮೆಚ್ಚಿದ ನಾಯಕರಾಗಿ ಪ್ರಧಾನಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ(BJP) ಮಂಡಲದ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು.

 

 

ಅವರು, ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ವೇಗ ಪಡೆದಿದೆ. ಪಕ್ಷದಲ್ಲಿ ಹಲವಾರು ಬದಲಾವಣೆಗಳನ್ನು ತರುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಪಕ್ಷ ಜಯಭೇರಿ ಬಾರಿಸಲಿದೆ. ಮೋದಿಯವರ ಆಡಳಿತದಲ್ಲಿ ಸಾಮಾನ್ಯರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿರವರ ಆಡಳಿತಾವಧಿಯಲ್ಲಿ ಜನಪರ ಕೆಲಸಗಳು ಜನಮೆಚ್ಚುಗೆ ಪಡೆದಿವೆ. ಪಕ್ಷದ ಕಾರ್ಯಗಳನ್ನು ಜನರಿಗೆ ತಿಳಿಸಿ ಶಕ್ತಿ ತುಂಬುವ ಕೆಲಸ ಮುಖಂಡರು, ಕಾರ್ಯಕರ್ತರು ಮಾಡಬೇಕಿದೆ.ಬಿ.ವೈ.ವಿಜಯೇಂದ್ರರವರ ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದರು.
ತಾಲ್ಲೂಕು ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಬಿ.ವೈ.ವಿಜಯೇಂದ್ರರವರು ಪಕ್ಷದ ರಾಜ್ಯಾಧ್ಯಕ್ಷರಾಗುತ್ತಲ್ಲೇ ಪಕ್ಷಕ್ಕೆ ವಿವಿಧ ಪಕ್ಷ ಮುಖಂಡರು ಸೇರ್ಪಡೆಗೆ ಮುಂದಾಗುತ್ತಿದ್ದಾರೆ. ಪಕ್ಷದ ಕಾರ್ಯಕ್ರಮಗಳು ಮತ್ತಷ್ಟು ವೇಗ ಪಡೆಯುವ ಮೂಲಕ ಬಲಗೊಳ್ಳುವ ಎಲ್ಲಾ ಲಕ್ಷಣಗಳು ಇವೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಬಡ, ಮಧ್ಯಮವರ್ಗ, ರೈತರು, ಸಾಮಾನ್ಯ ಜನರಿಗೆ ನೀಡಿದ ಯೋಜನೆಗಳು ಜನರ ಮನಮುಟ್ಟಬೇಕು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಪಕ್ಷ ಏಳಿಗೆಗೆ ದುಡಿಯಬೇಕು, ವಿಧಾನಸಭಾ ಕ್ಷೇತ್ರದ ಪ್ರತಿಬೂತ್ ಮಟ್ಟದಲ್ಲೂ ಪ್ರಚಾರಕಾರ್ಯ ಆರಂಭಿಸಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸಹಾಯ ಧನ
ಇದೇ ಸಂದರ್ಭದಲ್ಲಿ ಬಿ.ಎಸ್.ಶಿವಪುತ್ರಪ್ಪ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಉಪಾಧ್ಯಕ್ಷ ಬಾಳೆಮಂಡಿರಾಮದಾಸ್, ಟಿ.ಮಂಜುನಾಥ, ತಿಪ್ಪೇಶ್, ಈಶ್ವರನಾಯಕ, ಎಲೆಭದ್ರಣ್ಣ, ಜಗದಾಂಭ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours