ಗುತ್ತಿಗೆ ಆಧಾರದ ಮೇಲೆ ನೇಮಕಾತಿ: ನೇರ ಸಂದರ್ಶನಕ್ಕೆ ಹಾಜರಾಗಲು ಅರ್ಜಿ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜೂನ್ 18:
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿನ ಡಿ.ಎನ್.ಬಿ ವಿಭಾಗದ ಅಭ್ಯರ್ಥಿಗಳಿಗೆ ಉಪನ್ಯಾಸ, ಮಾರ್ಗದರ್ಶನ ನೀಡಲು ಹೆರಿಗೆ ಮತ್ತು ಪ್ರಸೂತಿ, ಅನಸ್ತೇಷಿಯಾ ಮತ್ತು ಪೀಡಿಯಾಟ್ರಿಕ್‍ನಲ್ಲಿ  ಪರಿಣಿತಿ ಹೊಂದಿದ ಪಿಜಿ ಟೀಚರ್ಸ್, ಸೀನಿಯರ್ ಕನ್ಸಲ್ಟ್ ಅವರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ತಜ್ಞ ವೈದ್ಯರು ಹಾಗೂ ಅಭ್ಯರ್ಥಿಗಳಿಂದ  ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ತಜ್ಞ ವೈದ್ಯರು, ಅಭ್ಯರ್ಥಿಗಳು ಸಂಬಂಧಿಸಿದ ಅಗತ್ಯವಾದ ಮೂಲ ದಾಖಲಾತಿಗಳೊಂದಿಗೆ ಜುಲೈ 8 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯಲ್ಲಿ ನೇರ ಸಂದರ್ಶ ಹಾಜರಾಗಬಹುದು.
ಹೆರಿಗೆ ಮತ್ತು ಪ್ರಸೂತಿ-1 ಹುದ್ದೆ, ಅನಸ್ತೇಷಿಯಾ-1 ಹುದ್ದೆ ಹಾಗೂ ಪೀಡಿಯಾಟ್ರಿಕ್-1 ಹುದ್ದೆ ಬೇಕಾಗಿದೆ.
ವಿದ್ಯಾರ್ಹತೆ ಮತ್ತು ನಿಬಂಧನೆಗಳು: ಸ್ನಾತಕೋತ್ತರ ಪದವಿ (ಎಂ.ಎಸ್, ಎಂ.ಡಿ, ಡಿ.ಎನ್.ಬಿ) ಪಡೆದು ಎನ್‍ಎಮ್‍ಸಿ, ಎನ್‍ಬಿಇ  ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಸಂಸ್ಥೆಯಲ್ಲಿ ಸಂಬಂಧಿಸಿದ ತಜ್ಞತೆಯಲ್ಲಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಪಿಜಿ ಟೀಚರ್ಸ್ ಸೀನಿಯರ್ ಕನ್ಸರ್ಟ್ ಆಗಿ ನೇಮಕಾತಿ ಹೊಂದಿದವರಿಗೆ ಮಾಸಿಕ 1.50 ಲಕ್ಷ ಗೌರವಧನ ಪಾವತಿಸಲಾಗುವುದು. ಯಾವುದೇ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ಹೊಂದಿರಬಾರದು. ಗುತ್ತಿಗೆ ಅವಧಿ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ ನಂತರದಲ್ಲಿ ತೃಪ್ತಿಕರ ಸೇವೆ ಆಧಾರದ ಮೇಲೆ ಗುತ್ತಿಗೆಯನ್ನು ಮುಂದುವರಿಸಲಾಗುವುದು. 67 ವರ್ಷ ಮೀರಿರಬಾರದು, ಅಭ್ಯರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ.  ಕರ್ನಾಟಕ ಮೆಡಿಕಲ್ ಕೌನ್ಸಿಲಿಂಗ್‍ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು ಎಂದು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours