ಪದ್ಮಶ್ರೇಣಿ ಪ್ರಶಸ್ತಿಗೆ ಅರ್ಜಿ ಆಹ್ವಾನ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್ 20:
ಸಮಾಜ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2022ನೇ ಸಾಲಿನ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲು ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 28 ಅರ್ಜಿ ಸಲ್ಲಿಸಲು ಕೊನೆಯ ದಿನ.
ಕಲೆ ಕ್ಷೇತ್ರದÀಲ್ಲಿ ಜನಪ್ರಿಯ ಕಲೆ, ಸಂಗೀತ, ಚಿತ್ರಕಲೆ, ವಾಸ್ತುಶಿಲ್ಪ, ಚಲನಚಿತ್ರ, ಛಾಯಾಗ್ರಹಣ, ಸಮಾಜಕಾರ್ಯದಲ್ಲಿ ಸಮಾಜಸೇವೆ, ಧರ್ಮಾರ್ಥ ಸೇವೆ, ಸಾರ್ವಜನಿಕ ವ್ಯವಹಾರಗಳಲ್ಲಿ ಕಾನೂನು ಮತ್ತು ಸಾರ್ವಜನಿಕ ಜೀವನ, ರಾಜಕೀಯ, ವಿಜ್ಞಾನ, ತಾಂತ್ರಿಕ, ತಂತ್ರಜ್ಞಾನ, ಬಾಹ್ಯಾಕಾಶ, ಇಂಜಿನಿಯರಿಂಗ್, ಅಣು ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಂಶೋಧನೆ, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಬ್ಯಾಂಕಿಂಗ್, ಆರ್ಥಿಕ ಚಟುವಟಿಕೆ, ಮ್ಯಾನೇಜ್‍ಮೆಂಟರ್, ಪ್ರವಾಸೋದ್ಯಮ, ಅಭಿವೃದ್ಧಿ ಮತ್ತು ವಾಣಿಜ್ಯ, ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯಕೀಯ ಸಂಶೋಧನೆ, ಆಯುರ್ವೇದದಲ್ಲಿ ಕುಶಲತೆ, ಹೋಮಿಯೋಪತಿ, ಸಿದ್ದಅಲೋಪತಿ, ನ್ಯಾಚುರೋಪತಿ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪತ್ರಿಕೋದ್ಯಮ, ಬೋಧನೆ, ಪುಸ್ತಕ ಬರೆಯುವಿಕೆ, ಸಾಹಿತ್ಯ ವೈದ್ಯ, ಶಿಕ್ಷಣ ಅಭಿವೃದ್ಧಿ, ಶಿಕ್ಷಣ ಸುಧಾರಣೆ, ನಾಗರೀಕ ಸೇವಾ ಕ್ಷೇತ್ರದಲ್ಲಿ ಆಡಳಿತದಲ್ಲಿ ಸರ್ಕಾರಿ ನೌಕರರು ಸಾಧಿಸಿರುವ ಶ್ರೇಷ್ಠತೆ, ಕ್ರೀಡೆ, ಅಥ್ಲೆಟಿಕ್ಸ್, ಸಹಾಸಕ್ರೀಡೆ ಮತ್ತು ಯೋಗ, ಮಾನವ ಹಕ್ಕುಗಳ ಸಂರಕ್ಷಣೆ, ಭಾರತ ಸಂಸ್ಕøತಿಯ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು ವನ್ಯ ಮೃಗ ಸಂರಕ್ಷಣೆ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಅರ್ಜಿ ಆಹ್ವಾನಿಸಲಾಗಿದೆ.
ನಿಗಧಿತ ನಮೂನೆಯನ್ನು ಈ ಕಚೇರಿಯಿಂದ ಪಡೆದು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ಸಂಪರ್ಕಿಸಬಹುದು ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours