ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ವಾರ್ಷಿಕ ಮಹಾಸಭೆಯು ಸುಮಿತ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ವೇದಿಕೆಯ ಕಛೇರಿಯಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷರಾದ ಲ. ಅನಿಲ್ದಾಸ್, ವಿಭಾಗೀಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ, ಮಹಿಳಾ ಸಂಚಾಲಕಿ ದುರ್ಗಾ ಪ್ರದೀಪ್ ವೇದಿಕೆಯಲ್ಲಿದ್ದರು.
ಜತೆ ಕಾರ್ಯದರ್ಶಿ ದಿವ್ಯ ಅರುಣ್ ಮಠ ವರ್ಷದ ವರದಿ ವಾಚಿಸಿದರು. ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು ಲೆಕ್ಕ ಪತ್ರ ಮಂಡಿಸಿದರು. ನಿತೀಶ್ ಕುಲಾಲ್ ಪಲ್ಲಿಕಂಡ ಸ್ವಾಗತಿಸಿ, ಪ್ರಸಕ್ತ ಸಾಲಿನ ಕಾರ್ಯದರ್ಶಿ ಕಿಶೋರ್ ಬಂಗೇರ ವಂದಿಸಿದರು. ಶ್ರೀಮತಿ ಭಾರತಿ ಶೇಷಪ್ಪ ನಿರೂಪಿಸಿದರು.



